ಪ್ರಿಯಾಂಕಾ ಉಪೇಂದ್ರ 
ಸಿನಿಮಾ ಸುದ್ದಿ

ಲೋಹಿತ್ ನಿರ್ದೇಶನದ ಹಾರರ್ ಚಿತ್ರ 'ಮಮ್ಮಿ ಸೇವ್ ಮಿ' ಬಿಡುಗಡೆಗೆ ಸಿದ್ದ

ನಿರ್ದೇಶಕ ಎಚ್ ಲೋಹಿತ್, ಹಾರರ್ ಸಿನೆಮಾ 'ಮಮ್ಮಿ-ಸೇವ್ ಮಿ' ಸಿನೆಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಮುಂದಾಗಿದ್ದಾರೆ. ಚೊಚ್ಚಲ ಪ್ರಯತ್ನದಲ್ಲೇ,

ಬೆಂಗಳೂರು: ನಿರ್ದೇಶಕ ಎಚ್ ಲೋಹಿತ್, ಹಾರರ್ ಸಿನೆಮಾ 'ಮಮ್ಮಿ-ಸೇವ್ ಮಿ' ಸಿನೆಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಮುಂದಾಗಿದ್ದಾರೆ. ಚೊಚ್ಚಲ ಪ್ರಯತ್ನದಲ್ಲೇ, ಜನರನ್ನು ಭಯಭೀತಗೊಳಿಸುವ ಚಿತ್ರದ ಮೂಲಕ ಯಶಸ್ಸು ಕಾಣಲು ಹವಣಿಸುತ್ತಿದ್ದಾರೆ. 
"ಪ್ರತಿಭಾವಂತ ನಟನಿಗೆ ನಿರ್ದೇಶಕ ಸಿಗುವುದು ಸುಲಭ ಆದರೆ ಪ್ರತಿಭಾವಂತ ನಿರ್ದೇಶಕನಿಗೆ ಒಳ್ಳೆಯ ನಟರು ಸಿಗುವುದು ಅಷ್ಟು ಸುಲಭವಲ್ಲ. ಆದರೆ ನಾನು ಹೊಸಬನಾಗಿದ್ದರೂ, ನನ್ನ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಮತ್ತು ಯುವಿನಾ ಪಾರ್ಥವಿ ನಟಿಸಲು ಒಪ್ಪಿದ್ದು ನನ್ನ ಅದೃಷ್ಟ" ಎನ್ನುತ್ತಾರೆ ಲೋಹಿತ್. 
ಈ ಸಿನೆಮಾ ಡಿಸೆಂಬರ್ ೨ ಕ್ಕೆ ಬಿಡುಗಡೆಯಾಗಲಿದೆ, ಮತ್ತು ಇದರ ತೆಲುಗು ಅವತರಿಣಿಕೆ 'ಚಿನ್ನಾರಿ' ಕೂಡ ಅಂದೇ ಬಿಡುಗಡೆ ಕಾಣಲಿದೆ. 
ನಟ ಉಪೇಂದ್ರ ಪತ್ನಿ ಪ್ರಿಯಾಂಕಾ ಜನಪ್ರಿಯ ನಟಿಯಾಗಿರಿವುದರಿಂದ ಹಲವರನ್ನು ಸಿನೆಮಾಗೆ ಸೆಳೆಯಲು ಸುಲಭವಾಗಿದೆ ಎನ್ನುವ ನಿರ್ದೇಶಕ "ಯುವಿನ ಪಾರ್ಥವಿ ಈಗಾಗಲೇ ತೆಲುಗಿನಲ್ಲಿ ಬಾಲನಟಿಯಾಗಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಇದು ಕೂಡ ನಮಗೆ ವರವಾಗಲಿದೆ. ಹಾಗೆಯೇ 'ಗೋಲಿಸೋಡಾ' ಖ್ಯಾತಿಯ ಮಧುಸೂಧನ್ ಕೂಡ ಇದ್ದಾರೆ. ಈ ತಾರಾಗಣ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಸೆಳೆಯಲು ಸಾಧ್ಯವಾಗುತ್ತದೆ" ಎನ್ನುತ್ತಾರೆ ಲೋಹಿತ್. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

SCROLL FOR NEXT