ಬೆಂಗಳೂರು: 'ಮಾದ ಮತ್ತು ಮಾನಸಿ' ಸಿನೆಮಾ ಈ ಶುಕ್ರವಾರ ಬಿಡುಗಡೆಗೆ ಸಿದ್ಧವಾಗಿದ್ದು, ಯಶಸ್ಸು ಗಳಿಸುವ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ ನಟ ಪ್ರಜ್ವಲ್ ದೇವರಾಜ್. ಸತೀಶ್ ಪ್ರಧಾನ್ ನಿರ್ದೇಶನದ ಈ ಚಿತ್ರ ಸಂಪೂರ್ಣ ಮನರಂಜನಾ ಚಿತ್ರ ಎನ್ನುತ್ತಾರೆ ಪ್ರಜ್ವಲ್.
"ಇಂದಿನ ದಿನ ಒಂದು ಸಿನೆಮಾ ಯಶಸ್ಸಿಗೆ ಬೇಕಾದ ಎಲ್ಲ ಕಮರ್ಷಿಯಲ್ ಒಳಗೊಂಡಿರುವುದರಿಂದ ನನಗೆ ಈ ಆತ್ಮವಿಶ್ವಾಸವಿದೆ. ನಾನು ನೃತ್ಯ ಮಾಡುವುದು, ರೋಮ್ಯಾನ್ಸ್ ಮತ್ತು ಆಕ್ಷನ್ ದೃಶ್ಯಗಳಲ್ಲಿ ಅಭಿನಯಿಸುವುದನ್ನು ನೋಡುವ ಜನರಿಗೆ ಇದು ಬಹಳ ಆಪ್ತವಾಗುತ್ತದೆ" ಎನ್ನುತ್ತಾರೆ ನಟ.
ತಮ್ಮ ನೆಚ್ಚಿನ ನಟ ಶಂಕರ್ ನಾಗ್ ಎಂದು ತಿಳಿಸುವ ಪ್ರಜ್ವಲ್ ಅವರನ್ನು ನಾನು ಅನುಕರಿಸಲು ಹೋಗುವುದಿಲ್ಲ ಎಂದು ಕೂಡ ತಿಳಿಸುತ್ತಾರೆ.
ಸಂಗೀತ ನಿರ್ದೇಶಕ ಮುಂಗಾರು ಮಳೆ ಖ್ಯಾತಿಯ ಮನೋಮೂರ್ತಿ ಈ ಸಿನೆಮಾದ ಮೂಲಕ ನಿರ್ಮಾಪಕರಾಗಿ ಹೊರಹೊಮ್ಮಿದ್ದಾರೆ. ಮತ್ತು ಅವರೇ ಸಂಗೀತ ಕೂಡ ಒದಗಿಸಿದ್ದಾರೆ. "ಅವರು 'ಮಾದ ಮತ್ತು ಮಾನಸಿ' ಸಂಗೀತಕ್ಕಾಗಿ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಿದ್ದು, ಕೈಲಾಶ್ ಖೇರ್ ಹಾಡಿರುವ ಒಂದು ಹಾಡು ಈಗಾಗಲೇ ಬಹಳ ಜನಪ್ರಿಯವಾಗಿದೆ ಹಾಗೆಯೇ ಶ್ರುತಿ ಹರಿಹರನ್ ಅವರ ಪರಿಚಯ ಹಾಡು ಕೂಡ" ಎನ್ನುತ್ತಾರೆ ಪ್ರಜ್ವಲ್.