ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ಅವರು ತಮ್ಮ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ರಿಷಬ್ ಶೆಟ್ಟಿ ನಿರ್ದೇಶನವಿರುವ ಕಿರಿಕ್ ಪಾರ್ಟಿ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದ್ದು ಚಿತ್ರ ತಂಡ ಖುಷಿಯಲ್ಲಿದೆ.
ಕಿರಿಕ್ ಪಾರ್ಟಿ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ರಕ್ಷಿತ್ ಶೆಟ್ಟಿಗೆ ಹಲವು ಹೊಸ ಪ್ರತಿಭೆಗಳು ಸಾಥ್ ನೀಡಿದ್ದಾರೆ. ಆ ಹೊಸ ಪ್ರತಿಭೆಗಳು ಯಾರು, ಚಿತ್ರಕ್ಕೆ ಅವರು ಹೇಗೆ ಆಯ್ಕೆಯಾದರು ಎಂಬುದನ್ನು ಈ ಕೆಳಗೆ ತಿಳಿಯೋಣ.
ಚಿತ್ರದಲ್ಲಿ ಅರವಿಂದ್ ಅಯ್ಯರ್, ಅಶ್ವಿನ್ ರಾವ್ ಪಲಿಕಿ, ಶಂಕರ್ ಮೂರ್ತಿ, ಧನಂಜಯ್ ರಂಜನ್, ಚಂದನ್ ಮತ್ತು ಗಿರಿಶ್ ಕೃಷ್ಣ ನಟಿಸಿದ್ದು ಚಿತ್ರದ ಜರ್ನಿ ಕುರಿತು ಅವರ ಮನದ ಮಾತುಗಳು.
ಅರವಿಂದ್ ಅಯ್ಯರ್
ಕಹಿ ಚಿತ್ರದ ಮೂಲಕ ನಾನು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ಕಹಿ ಚಿತ್ರದಲ್ಲಿ ಸಣ್ಣದೊಂದು ಪಾತ್ರ ಮಾಡಿದ್ದೆ ಚಿತ್ರಕ್ಕೆ ಒಳ್ಳೆಯ ಹೆಸರು ಬಂತು. ಕಿರಿಕ್ ಪಾರ್ಟಿ ಚಿತ್ರದ ಶೂಟಿಂಗೂ ಮುನ್ನ ನಾನು ಕರೆ ಮಾಡಿದ್ದೇ ನನ್ನ ಅದೃಷ್ಟ ನಾನು ಆಯ್ಕೆಯಾಗಿದ್ದೆ. ಕಿರಿಕ್ ಪಾರ್ಟಿ ಸಂಪೂರ್ಣ ಹಾಸ್ಯಮಯ ಚಿತ್ರವಾಗಿದ್ದು, ನಿಜ ಜೀವನದ ಘಟನೆಗಳನ್ನು ಆಧರಿಸಿವೆ. ಕಾಲೇಜು ದಿನಗಳ ಕಥಾವಸ್ತುವಾಗಿರುವುದರಿಂದ ಶೂಟಿಂಗ್ ವೇಳೆ ನಾವು ಸದ್ಯ ಎಂಜಾಯ್ ಮಾಡುತ್ತಿದ್ದೇವು. ರಕ್ಷಿತ್ ಶೆಟ್ಟಿ ಜತೆ ಕೆಲಸ ಮಾಡುವುದು ತುಂಬಾನೆ ಖುಷಿ ಕೊಟ್ಟಿತು. ಕಲಾವಿದರ ಮೇಲೆ ಅವರು ಯಾವುದೇ ರೀತಿಯ ಒತ್ತಡ ಹಾಕುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಅಶ್ವಿನ್ ರಾವ್ ಪಲ್ಲಕ್ಕಿ
ಶಾರ್ಟ್ ಫಿಲ್ಮ ರಿಫಿಲ್ ಚಿತ್ರದ ಅಭಿನಯ ನೋಡಿ ಕಿರಿಕ್ ಪಾರ್ಟಿ ಚಿತ್ರಕ್ಕೆ ರಕ್ಷಿತ್ ನನ್ನನ್ನು ಆಯ್ಕೆ ಮಾಡಿದರು. ಶಾರ್ಟ್ ಮೂವಿಯನ್ನು ಅಭಿಶೇಕ್ ಕಾಸರಗೋಡು ಅವರು ನಿರ್ದೇಶಿಸಿದ್ದರು. ಕಿರಿಕ್ ಪಾರ್ಟಿ ಚಿತ್ರದ ಶೂಟಿಂಗ್ ನಿಜಕ್ಕೂ ಅದ್ಭುತ ಅನುಭವ ನೀಡಿವೆ. ಮೊದ ಮೊದಲು ನಾನು ತುಂಬಾನೆ ಆತಂಕಗೊಂಡಿದ್ದೇ ಆದರೆ ನನ್ನ ಸಹಪಾಠಿಗಳ ಸಹಾಯದೊಂದಿಗೆ ಎರಡು ಮೂರು ದಿನಗಳಲ್ಲೇ ನನ್ನ ಆತಂಕ ಕಡಿಮೆಯಾಯಿತು. ಕೊನೆಯ ದಿನದ ಶೂಟಿಂಗ್ ನಮ್ಮ ಕಾಲೇಜು ದಿನದ ಕೊನೆಯ ದಿನವಾಗಿ ಅನಿಸಿತ್ತು. ಅಷ್ಟು ಆಳವಾಗಿ ಚಿತ್ರೀಕರಣದಲ್ಲಿ ಮುಳುಗಿದ್ದೇವು. 72 ದಿನಗಳ ಕಾಲ ಚಿತ್ರದ ಶೂಟಿಂಗ್ ನಡೆಸಿದ್ದು, ಕೊನೆಯ ಒಂದು ಗಂಟೆ ಭಾವನಾತ್ಮಕವಾಗಿತ್ತು ಎಂದರು.
ಶಂಕರ್ ಮೂರ್ತಿ
ಆಡಿಯೇಶನ್ ಮೂಲಕ ನಾನು ಚಿತ್ರಕ್ಕೆ ಆಯ್ಕೆಯಾದೆ. ನಾನು ಶಾರ್ಟ್ ಫಿಲ್ಮ್ ಗಳನ್ನು ಮಾಡುತ್ತಿದ್ದರಿಂದ ನನಗೆ ಕ್ಯಾಮೆರಾದ ಭಯವಿರಲಿಲ್ಲ. ಆದರೆ ಶಾರ್ಟ್ ಮೂವಿಗೂ ಚಲನಚಿತ್ರಗಳೂ ತುಂಬಾನೆ ವಿಭಿನ್ನ. ನನಗೆ ವಿಭಿನ್ನ ಅನುಭವಗಳಾಯಿತು. ಚಿತ್ರೀಕರಣದ ವೇಳೆ ನಾನು ತುಂಬಾ ವಿಷಯಗಳನ್ನು ಕಲಿತೆ. ರಕ್ಷಿತ್ ಶೆಟ್ಟಿ ಅವರ ಉಳಿದವರು ಕಂಡಂತೆ ಚಿತ್ರದ ದೊಡ್ಡ ಅಭಿಮಾನಿ ನಾನು. ಅಂತ ರಕ್ಷಿತ್ ಶೆಟ್ಟಿ ಜತೆ ಸ್ಕ್ರೀನ್ ಶೇರ್ ಮಾಡಿದ್ದು ತುಂಬಾ ಖುಷಿಯಾಗಿದೆ ಎಂದರು.
ಕಿರಿಕ್ ಪಾರ್ಟಿ ಚಿತ್ರದ ಟ್ರೈಲರ್‌ಗಾಗಿ ಇಲ್ಲಿ ಕ್ಲಿಕ್ಕಿಸಿ: