ಹೈದರಾಬಾದ್: ಹಣ ಪಡೆಯಲು ಬ್ಯಾಂಕಿಗೆ ಹಂದಿ ಮರಿಯೊಂದಿಗೆ ಬಂದಿದ್ದ ತೆಲುಗು ನಟ-ನಿರ್ದೇಶಕ ರವಿ ಬಾಬು ಈಗ ಸುದ್ದಿಯಾಗಿದ್ದಾರೆ. ರವಿ ಬಾಬು ಹಂದಿ ಮರಿಯನ್ನು ಹೊತ್ತು ಕ್ಯೂನಲ್ಲಿ ನಿಂತಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬ್ಯಾಂಕಿಗೆ ಹಂದಿ ಮರಿಯೊಂದಿಗೆ ಬರಲು ಕಾರಣವೇನೆಂಬುದನ್ನು ರವಿ ಬಾಬು ವಿವರಿಸಿದ್ದಾರೆ. ರವಿ ಬಾಬು ಅವರ ಮುಂದಿನ ಚಿತ್ರದಲ್ಲಿ ಈ ಹಂದಿ ಮರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದನ್ನು ನಾನು ಮನೆಯಲ್ಲೇ ಸಾಕುತ್ತಿದ್ದೇನೆ. ಸದ್ಯ ಮನೆಯಲ್ಲಿ ಯಾರು ಇಲ್ಲದ ಕಾರಣ ಹಂದಿಮರಿಯನ್ನು ಬ್ಯಾಂಕಿಗೆ ಜತೆಯಲ್ಲೇ ಕರೆ ತಂದಿದ್ದೇನೆ ಎಂದರು.
ಬ್ಯಾಂಕ್ ಕ್ಯೂನಲ್ಲಿ ಹಂದಿಯನ್ನು ಹೊತ್ತು ನಿಂತಿದ್ದಾಗ ಎಲ್ಲರು ಆಶ್ಚರ್ಯದಿಂದ ನೋಡಿದರು. ಆದರೆ ಬ್ಯಾಂಕಿಗೆ ಹಂದಿಮರಿಯೊಂದಿಗೆ ಹೋಗಿದ್ದು ಯಾವುದೇ ಸಮಸ್ಯೆ ಆಗಿಲ್ಲ ಎಂದು ರವಿಬಾಬು ಹೇಳಿದ್ದಾರೆ.
ಅಧುಗೋ ಚಿತ್ರದಲ್ಲಿ ರವಿಬಾಬು ಅಭಿನಯಿಸುತ್ತಿದ್ದು ಈ ಚಿತ್ರದಲ್ಲಿ ಹಂದಿ ಮರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಸ್ನೇಹಿತನ ತೋಟದಲ್ಲಿ ಕೆಲವು ಹಂದಿಮರಿಗಳನ್ನು ಸಾಕಿದ್ದೆವು ಎಂದು ರವಿಬಾಬು ಹೇಳಿದ್ದಾರೆ.