ಕನ್ನಡ ಚಿತ್ರರಂಗದ ದಂತಕತೆ ಡಾ. ರಾಜಕುಮಾರ್ 
ಸಿನಿಮಾ ಸುದ್ದಿ

ನಾಳೆಯಿಂದ ಮೂರು ದಿನಗಳ ಡಾ.ರಾಜಕುಮಾರ್ ರಾಷ್ಟ್ರೀಯ ಉತ್ಸವ

ರಾಯಚೂರು ಮೂರು ದಿನಗಳ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗಿರುವ ಸಮಯದಲ್ಲೇ, ಬೆಂಗಳೂರಿನಲ್ಲಿ ಅದೇ ಸಮಯಕ್ಕೆ ಮೂರು ದಿನಗಳ, ಕನ್ನಡ ಚಿತ್ರರಂಗದ ದಂತಕತೆ ಡಾ. ರಾಜಕುಮಾರ್ ರಾಷ್ಟ್ರೀಯ

ಬೆಂಗಳೂರು: ರಾಯಚೂರು ಮೂರು ದಿನಗಳ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗಿರುವ ಸಮಯದಲ್ಲೇ, ಬೆಂಗಳೂರಿನಲ್ಲಿ ಅದೇ ಸಮಯಕ್ಕೆ ಮೂರು ದಿನಗಳ, ಕನ್ನಡ ಚಿತ್ರರಂಗದ ದಂತಕತೆ ಡಾ. ರಾಜಕುಮಾರ್ ರಾಷ್ಟ್ರೀಯ ಉತ್ಸವಕ್ಕೆ ರಂಗ ಸಜ್ಜಾಗಿದೆ. 
ಈ ಮೂರು ದಿನಗಳ ರಾಜ್ ಉತ್ಸವ ರವೀಂದ್ರ ಕಲಾಕ್ಷೇತ್ರದಲ್ಲಿ ಡಿಸೆಂಬರ್ ೨ ರಿಂದ ೪ ರವರೆಗೆ ಆಯೋಜಿಸಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಇದನ್ನು ಉದ್ಘಾಟಿಸಲಿದ್ದಾರೆ. ಈ ಉತ್ಸವದ ಮುಖ್ಯಅಂಶಗಳು ಫೋಟೋ ಪ್ರದರ್ಶನ, ಸೆಮಿನಾರ್ ಗಳು, ಡಾ. ರಾಜಕುಮಾರ್ ಅವರ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಡಾ. ರಾಜಕುಮಾರ್ ಸಮಗ್ರ ಚರಿತ್ರೆ ಪುಸ್ತಕದ ಬಗ್ಗೆ ಮಾತುಕತೆ. 
ಡಾ. ರಾಜಕುಮಾರ್ ಬಗ್ಗೆ ಹಿರಿಯ ಚಿತ್ರ ನಿರ್ದೇಶಕ ಟಿ ಎಸ್ ನಾಗಾಭರಣ, ನಟ-ನಿರ್ದೇಶಕ ಪ್ರಕಾಶ್ ರೈ, ಹಾಸ್ಯಗಾರ ಗಂಗಾವತಿ ಪ್ರಾಣೇಶ್ ಸೇರಿದಂತೆ ಹಲವರು ಮಾತನಾಡಲಿದ್ದಾರೆ.  ನಟರಾದ ಆನಂದ್ ಮತ್ತು ರೂಪಿಕಾ ರಾಜಕುಮಾರ್ ಅವರ ಜನಪ್ರಿಯ ಗೀತೆಗಳಿಗೆ ಹೆಜ್ಜೆ ಹಾಕಲಿದ್ದಾರೆ ಮತ್ತು ಶಮಿತಾ ಮಲ್ನಾಡ್ ತಂಡ ಕೂಡ ಉತ್ಸವದಲ್ಲಿ ಪ್ರದರ್ಶನ ನೀಡಲಿದೆ. 
ಈ ಉತ್ಸವದಲ್ಲಿ ರಾಜಕುಮಾರ್ ಅವರ ಕೆಲವು ಕಟ್ಟಾ ಅಭಿಮಾನಿಗಳನ್ನು ಸತ್ಕರಿಸಲು ಕೂಡ ಆಯೋಜಕರು ಯೋಜನೆ ರೂಪಿಸಿಕೊಂಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT