'ಸಂತು ಸ್ಟ್ರೈಟ್ ಫಾರ್ವಾರ್ಡ್' ಸಿನೆಮಾದ ಸ್ಟಿಲ್
ಬೆಂಗಳೂರು: ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯದ 'ಸಂತು ಸ್ಟ್ರೈಟ್ ಫಾರ್ವಾರ್ಡ್' ಸಿನೆಮಾದ ಜೊತೆಗೆ ಇಬ್ಬರೂ ನಟರ ಅಭಿಮಾನಿಗಳು ದೀಪಾವಳಿ ಹಬ್ಬ ಆಚರಿಸಲು ಸಿದ್ಧರಾಗಬಹುದು. ಮಹೇಶ್ ರಾವ್ ನಿರ್ದೇಶನದ ಈ ಚಿತ್ರ ಕೊನೆಯ ಎರಡು ಹಾಡುಗಳನ್ನು ಹೊರತುಪಡಿಸಿ ಉಳಿದೆಲ್ಲ ಚಿತ್ರೀಕರಣ ಮುಗಿಸಿದೆ. ಈ ಉಳಿದ ಹಾಡುಗಳಿಗೆ ಎ ಹರ್ಷ ನೃತ್ಯನಿರ್ದೇಶಿಸುತ್ತಿದ್ದಾರೆ. ಹಾಗೆಯೇ ಯಶ್ ಅವರ 'ರಾಣಾ' ಸಿನೆಮಾವನ್ನು ಮುಂದೆ ಹರ್ಷ ನಿರ್ದೇಶಿಸಲಿದ್ದಾರೆ ಎಂದು ತಿಳಿದುಬಂದಿದೆ.
ನಿಗದಿತ ಸಮಯಕ್ಕೆ ಸಿನೆಮಾ ಬಿಡುಗಡೆ ಮಾಡಲು ಚಿತ್ರತಂಡ ಶ್ರಮಿಸುತ್ತಿದೆ ಎನ್ನುವ ನಿರ್ದೇಶಕ ಮಹೇಶ್ "ದೀಪಾವಳಿ ಹಬ್ಬದ ವಾರದಲ್ಲಿ ಚಿತ್ರ ಬಿಡುಗಡೆ ಮಾಡುವ ಇರಾದೆ ಹೊಂದಿದ್ದೆವು. ಶೀಘ್ರದಲ್ಲೇ ಸೆನ್ಸಾರ್ ಮಂಡಳಿ ಎದುರು ಸಿನೆಮಾ ಹೋಗಲಿದೆ" ಎನ್ನುತ್ತಾರೆ.
'ಮಿ & ಮಿಸೆಸ್ ರಾಮಾಚಾರಿ'ಯ ಬಳಿಕ ಈ ಸಿನೆಮಾದ ಮೂಲಕ ತಾರಾ ಜೋಡಿ ಒಂದಾಗಿದೆ. ಹೊಸ ಸಿನೆಮಾದ ಬಿಡುಗಡೆಗೆ ಈಗಾಗಲೇ ವಿತರಕರು ಆಸಕ್ತಿ ತೋರಿದ್ದು, ದೊಡ್ಡ ಮುಂಗಡ ನೀಡಲು ಮುಂದಾಗಿದ್ದಾರಂತೆ. ಲಹರಿ ಈ ಆಡಿಯೋ ಹಕ್ಕುಗಳಲ್ಲೂ 1.08 ಕೋಟಿ ರೂಗೆ ಕೊಂಡಿದ್ದು, ಕನ್ನಡ ಚಿತ್ರರಂಗದ ಆಡಿಯೋ ಹಕ್ಕುಗಳ ಮಾರಾಟದಲ್ಲಿ ಇದು ದಾಖಲೆ ಎನ್ನಲಾಗಿದೆ.
ಆಡಿಯೋ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. "ಐದು ಟ್ರೆಂಡಿ ಹಾಡುಗಳನ್ನು ಸಂಯೋಜಿಸಿದ್ದೇನೆ. ಅವುಗಳು ನೇರ ಪ್ರೇಕ್ಷಕರ ಹೃದಯಕ್ಕೆ ನಾಟಲಿವೆ ಮತ್ತು ಈ ಹಾಡುಗಳು ಸಿನೆಮಾದ ಥೀಮ್ ಗೆ ಚೆನ್ನಾಗಿ ಹೊಂದಿಕೊಳ್ಳಲಿವೆ. ಸೋನು ನಿಗಮ್, ಕೈಲಾಶ್ ಖೇರ್, ಸಂತೋಷ್, ಶಶಾಂಕ್, ಮತ್ತು ಟಿಪ್ಪು ಹಾಡುಗಳನ್ನು ಹಾಡಿದ್ದು, ಗೌಸ್ ಪೀರ್ ಮತ್ತು ಯೋಗರಾಜ್ ಭಟ್ ಗೀತರಚನೆ ಮಾಡಿದ್ದಾರೆ" ಎಂದು ವಿವರಿಸುತ್ತಾರೆ ಹರಿಕೃಷ್ಣ.