ಸಾಂದರ್ಭಿಕ ಚಿತ್ರ 
ಸಿನಿಮಾ ಸುದ್ದಿ

ಕನ್ನಡ ಚಿತ್ರ ನಗರಿಗಾಗಿ ಮೈಸೂರಿನಲ್ಲಿ 110 ಎಕರೆ ಜಾಗ ನೀಡಲು ಸಂಪುಟ ಅಸ್ತು

ಕರ್ನಾಟಕದಲ್ಲಿ ವಿಶ್ವದರ್ಜೆಯ ಚಿತ್ರ ನಗರಿಯನ್ನು ಹೊಂದುವ ಹಲವು ದಿನಗಳ ಕನ್ನಡ ಚಿತ್ರರಂಗದ ಕನಸಿಗೆ ಬುಧವಾರ ರೆಕ್ಕೆ ಪುಕ್ಕ ಬಂದಿದೆ. ಮೈಸೂರು ಜಿಲ್ಲೆಯ ನಂಜನಗೂಡಿನ ಬಳಿ ಈ ಯೋಜನೆಗಾಗಿ 110 ಎಕರೆ

ಬೆಂಗಳೂರು: ಕರ್ನಾಟಕದಲ್ಲಿ ವಿಶ್ವದರ್ಜೆಯ ಚಿತ್ರ ನಗರಿಯನ್ನು ಹೊಂದುವ ಹಲವು ದಿನಗಳ ಕನ್ನಡ ಚಿತ್ರರಂಗದ ಕನಸಿಗೆ ಬುಧವಾರ ರೆಕ್ಕೆ ಪುಕ್ಕ ಬಂದಿದೆ. ಮೈಸೂರು ಜಿಲ್ಲೆಯ ನಂಜನಗೂಡಿನ ಬಳಿ ಈ ಯೋಜನೆಗಾಗಿ 110 ಎಕರೆ ಜಾಗ ನೀಡಲು ಬುಧವಾರ ರಾಜ್ಯ ಸಂಪುಟ ಒಪ್ಪಿಗೆ ನೀಡಿದೆ. 
ಹಾಗೆಯೇ ಈ ಜಾಗದ ಹಣವನ್ನು ನೀಡಲು ಕರ್ನಾಟಕ ಚಲನಚಿತ್ರ ಅಕಾಡೆಮಿಗೆ (ಕೆಸಿಎ) ಐದು ವರ್ಷಗಳ ಸಮಯವನ್ನು ಕೂಡ ಸಂಪುಟ ನೀಡಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿಗೆ 30 ವರ್ಷಗಳ ಭೋಗ್ಯಕ್ಕೆ ಈ ಜಾಗ ನೀಡಲಾಗುವುದು ಮತ್ತು ಖಾಸಗಿ ರಂಗದ ಸಹಕಾರದೊಂದಿಗೆ ಕೆಸಿಎ ಈ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ಕಾನೂನು ಸಚಿವ ಟಿಬಿ ಜಯಚಂದ್ರ ಹೇಳಿದ್ದಾರೆ. 
ಇದಕ್ಕೂ ಮುಂಚೆ ದಿವಂಗತ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಗಳಾಗಿದ್ದಾಗ ಈ ಚಲನಚಿತ್ರ ನಗರಿಯ ಪ್ರಸ್ತಾವನೆ ಸಲ್ಲಿಸಲಾಗಿತ್ತು ಮತ್ತು ಆಗ ಹೆಸರಘಟ್ಟದ ಬಳಿ 365 ಎಕರೆ ಜಾಮೀನು ನೀಡಲಾಗಿತ್ತು. ಆದರೆ ಆ ಯೋಜನೆ ಕಾರ್ಯಗತವಾಗಲೇ ಇಲ್ಲ. 
ಈಗ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸರ್ಕಾರ ಇದಕ್ಕೆ ಉತ್ತೇಜನ ನೀಡಿದ್ದು, ಕನ್ನಡ ಚಿತ್ರರಂಗಕ್ಕೆ ಉತ್ಸಾಹ ಮೂಡಿಸಿದೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್

ಒಂದು ಕ್ಷಣದ ನಿರ್ಲಕ್ಷ್ಯ, ವಿಚಿತ್ರ ರನೌಟ್‌ಗೆ ತಿಲಕ್ ವರ್ಮಾ ಬಲಿ; ಗಂಭೀರ್ ಫುಲ್ ಗರಂ! ಆಗಿದ್ದೇನು? Video

3rd T20I: ಆಲೌಟ್ ನಲ್ಲೂ ವಿಚಿತ್ರ ದಾಖಲೆ ಬರೆದ ಟೀಂ ಇಂಡಿಯಾ!

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು