ಬೆಂಗಳೂರು: ರಾಧಿಕಾ ಪಂಡಿತ್ ಅವರಿಗೆ ಸಂಭ್ರಮದ ವರ್ಷ ಇದು. ವೃತ್ತಿಪರವಾಗಿ ಒಂದರ ಹಿಂದೆ ಒಂದು ಹಿಟ್ ಸಿನೆಮಾಗಳನ್ನು ನೀಡುತ್ತಿದ್ದರೆ, ವೈಯಕ್ತಿಕ ಜೀವನದಲ್ಲಿ ಯಶ್ ಜೊತೆಗೆ ನಿಶ್ಚಿತಾರ್ಥ ಆದ ಕೂಡ ಸಂಭ್ರಮ.
ಈ ವರ್ಷ 'ಜೂಮ್' ನಿಂದ ಪ್ರಾರಂಭವಾಗಿ, ಈಗ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ 'ದೊಡ್ಮನೆ ಹುಡುಗ' ಸಿನೆಮಾದ ನಂತರ 'ಸಂತು ಸ್ಟ್ರೈಟ್ ಫಾರ್ವರ್ಡ್' ಮೂಲಕ ಮತ್ತೆ ತೆರೆ ಮೇಲೆ ಚಮತ್ಕಾರ ತೋರಲು ಸಿದ್ಧರಾಗಿದ್ದಾರೆ. ಈ ಕೊನೆಯ ಸಿನೆಮಾ ಅವರಿಗೆ ಇನ್ನು ವಿಶೇಷ ಏಕೆಂದರೆ ಅವರ ನಿಶ್ಚಿತಾರ್ಥ ಸಮಯದಲ್ಲಿಯೇ ಈ ಸಿನೆಮಾದ ಚಿತ್ರೀಕರಣ ನಡೆದಿರುವುದು. ಸಿನೆಮಾದ ನಾಯಕ ನಟ ಯಶ್!
ಈಗ ನಟನನ್ನು ಮದುವೆಯಾಗುತ್ತಿರುವುದರಿಂದ ಯಶ್ ಜೊತೆಗೆ ಸ್ಕ್ರೀನ್ ಕೆಮಿಸ್ಟ್ರಿ ಬಲವಾಯಿತೇ ಎಂಬ ಪ್ರಶ್ನೆಗೆ "ನಾವಿಬ್ಬರು ವೃತ್ತಿಪರ ನಟರು. ಕೆಲಸದ ವಿಷಯಕ್ಕೆ ಬಂದಾಗ ನಾವು ನಮ್ಮ ವೈಯಕ್ತಿಕ ಜೀವನವನ್ನು ಅದರಲ್ಲಿ ಬೆರೆಸುವುದಿಲ್ಲ. ನಿಶ್ಚಿತಾರ್ಥ ಆದ ಮೇಲೆ ನಮ್ಮ ಕೆಮಿಸ್ಟ್ರಿ ಉತ್ತಮಗೊಂಡಿದೆಯೇ ಎಂಬ ಸಂದೇಹ ವ್ಯಕ್ತಪಡಿಸಿದರೆ ಅಡ್ಡಿಯೇನಿಲ್ಲ. ಆದರೆ ನಟರಾಗಿ ನಮ್ಮ ವೈಯಕ್ತಿಕ ಸಂಬಂಧವನ್ನು ತೆರೆಗೆ ತರಲಾಗುವುದಿಲ್ಲ. ನಾವೆಲ್ಲಾ ಒಳ್ಳೆಯ ಉತ್ಪನ್ನಕ್ಕಾಗಿ ಕೆಲಸ ಮಾಡುತ್ತೇವೆ" ಎಂದು ದಿಟ್ಟವಾಗಿ ಉತ್ತರಿಸುತ್ತಾರೆ ನಟಿ.
"ನಾನು 'ಸಂತು ಸ್ಟ್ರೈಟ್ ಫಾರ್ವರ್ಡ್' ನ ಭಾಗವಾಗದೆ ಹೋಗಿ ಬೇರೆ ಹೀರೋಯಿನ್ ಇದ್ದರು, ಯಶ್ ಕಥೆಯಲ್ಲಿ 100 ಪ್ರತಿಶತ ತೊಡಗಿಸಿಕೊಳ್ಳುತ್ತಿದ್ದರು" ಎನ್ನುತ್ತಾರೆ ನಟಿ.
ಯಶ್ ಮತ್ತು ರಾಧಿಕಾ ಒಟ್ಟಿಗೆ ನಟಿಸುತ್ತಿರುವ ನಾಲ್ಕನೇ ಸಿನೆಮಾ ಇದು. ನಮ್ಮ ಜೋಡಿಯನ್ನು ಜನ ಮೆಚ್ಚಿದ್ದಾರೆ ಎನ್ನುವ ನಟಿ "ನಮ್ಮ ಕೆಲಸವನ್ನು ಜನ ಪ್ರಶಂಸಿಸಿದ್ದಾರೆ. ಈಗ ಅವರು ನಮ್ಮನ್ನು ತೆರೆಯಿಂದ ಹೊರಗೂ ಒಟ್ಟಿಗೆ ನೋಡಿರುವುದರಿಂದ ನಮ್ಮ ಮೇಲೆ ವಿಶೇಷ ಪ್ರೀತಿ ಹುಟ್ಟಿದೆ. ಅದಕ್ಕೆ ನಾವು ಧನ್ಯ" ಎನ್ನುತ್ತಾರೆ.
"'ಸಂತು ಸ್ಟ್ರೈಟ್ ಫಾರ್ವರ್ಡ್' ನಲ್ಲಿ ನನ್ನದು ಸರಳ ಮತ್ತು ಸಿಹಿ ಪಾತ್ರ ಏನುವ ನಟಿ, ಇದು ಎಲ್ಲ ಕಮರ್ಷಿಯಲ್ ಅಂಶಗಳಿರುವ ಮನರಂಜನಾ ಸಿನೆಮಾ" ಎನ್ನುತ್ತಾರೆ ರಾಧಿಕಾ.