ಭಾರತದಲ್ಲಿ ಸಂಚಲನ ಸೃಷ್ಠಿಸಿದ್ದ ಬಾಹುಬಲಿ ಚಿತ್ರದ ಮುಂದುವರಿದ ಭಾಗ ಬಾಹುಬಲಿ-2 ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಚಿತ್ರದಲ್ಲಿ ಬಾಹುಬಲಿ ಪಾತ್ರಧಾರಿ ಪ್ರಭಾಸ್ ಹುಟ್ಟುಹಬ್ಬದ ಉಡುಗೊರೆಯಾಗಿ ಚಿತ್ರ ತಂಡ ಬಾಹುಬಲಿ-2 ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಫಸ್ಟ್ ಲುಕ್ ನಲ್ಲಿ ಪ್ರಭಾಸ್ ಶಿವುಡುವಾಗಿ ಕಾಣಿಸಿಕೊಂಡಿದ್ದಾರೆ. ಉಗ್ರರೂಪದಲ್ಲಿರುವ ಶಿವುಡು ಹಿಂದೆ ಬಾಹುಬಲಿ ಚಿತ್ರವಿದೆ.
ಬಾಹುಬಲಿ ಮೊದಲ ಭಾಗದ ಕೊನೆಯಲ್ಲಿ ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ ಎಂಬ ಪ್ರಶ್ನೆಗೆ ಬಾಹುಬಲಿ-2ನಲ್ಲಿ ಸಿಗಲಿದ್ದು, ಉತ್ತರ ಕಂಡಕೊಳ್ಳಲು ಸಿನಿ ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ.
ಬಾಹುಬಲಿ ಮೊದಲ ಭಾಗ ನಿರ್ದೇಶಿಸಿದ್ದ ಎಸ್.ಎಸ್ ರಾಜಮೌಳಿ ಮತ್ತೊಂದು ದೃಶ್ಯಕಾವ್ಯವನ್ನು ತೆರೆಗೆ ತರಲಿದ್ದಾರೆ. ಚಿತ್ರದಲ್ಲಿ ನಟ ರಾಣಾ, ತಮನ್ನಾ ಹಾಗೂ ಅನುಷ್ಕಾ ಶೆಟ್ಟಿ, ಸತ್ಯರಾಜ್ ಕಾಣಿಸಿಕೊಳ್ಳಲಿದ್ದಾರೆ.