ನಿರ್ಮಾಪಕಿ ಜಯಶ್ರೀ ದೇವಿ 
ಸಿನಿಮಾ ಸುದ್ದಿ

ಎಲ್ ಬೋರ್ಡ್ ಜೊತೆ ಮುಕುಂದ-ಮುರಾರಿ ಮಾಡಿದ್ದೇನೆ: ನಿರ್ಮಾಪಕಿ ಜಯಶ್ರೀ ದೇವಿ

ಶ್ರೀ ಮಂಜುನಾಥ ಸೇರಿದಂತ ಕನ್ನಡ ಸಿನಿಮಾ ರಂಗಕ್ಕೆ ಹಲವು ಭಕ್ತಿ ಪ್ರಧಾನ ಸಿನಿಮಾಗಳನ್ನು ನಿರ್ಮಾಪಕಿ ಜಯಶ್ರೀ ದೇವಿ, ನೀಡಿದ್ದಾರೆ. 7 ವರ್ಷಗಳ ನಂತರ...

ಬೆಂಗಳೂರು: ಶ್ರೀ ಮಂಜುನಾಥ ಸೇರಿದಂತ ಕನ್ನಡ ಸಿನಿಮಾ ರಂಗಕ್ಕೆ ಹಲವು ಭಕ್ತಿ ಪ್ರಧಾನ ಸಿನಿಮಾಗಳನ್ನು ನಿರ್ಮಾಪಕಿ ಜಯಶ್ರೀ ದೇವಿ, ನೀಡಿದ್ದಾರೆ. 7 ವರ್ಷಗಳ ನಂತರ ಮತ್ತೆ ಕನ್ನಡ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿರುವ ಜಯಶ್ರೀ ದೇವಿ  ಸುದೀಪ್ ಮತ್ತು ಉಪೇಂದ್ರ ಕಾಂಬಿನೇಷನ್ ನಲ್ಲಿ ತಯಾರಿಸಿರುವ ಮುಕುಂದ-ಮುರಾರಿ ಚಿತ್ರ ಬಿಡುಗಡೆಗೆ ಸಿದ್ಧಗೊಂಡಿದೆ.

ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ನಟಿಸಿರುವ ಹಿಂದಿಯ ಓ ಮೈ ಗಾಡ್ ಸಿನಿಮಾದ ಕಥೆ ಕನ್ನಡದ ಮುಕುಂದ ಮುರಾರಿಗೆ ಸ್ಫೂರ್ತಿ,  ಇದರ ನಡುವೆ ಹಲವು ತೆಲುಗು ಸಿನಿಮಾ ಗಳನ್ನು ನಿರ್ಮಿಸಲಾಗಿದೆ. ಜಗದ್ಗುರು ಆದಿ ಶಂಕರ ಮೂರು ಭಾಷೆಗಳಲ್ಲಿ ತಯಾರಾಗಿದ್ದುಷ ಅದು ಪೂರ್ಣಗೊಳ್ಳಲು ಮೂರು ವರ್ಷ ಸಮಯ ಹಿಡಿಯಿತು ಎಂದು ಅವರು ಹೇಳಿದ್ದಾರೆ.

ಮುಕುಂದ-ಮುರಾರಿ ಚಿತ್ರಕ್ಕೆ ಎಂ ಎನ್ ಕುಮಾರ್ ಸಹ- ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಸಹ ನಿರ್ಮಾಪಕರ ಜೊತೆ ನಾನು ಕೆಲಸ ಮಾಡಿದ್ದಾಗಿ ಅವರು ಹೇಳಿದ್ದಾರೆ. ನಾನು ಪ್ರೊಡಕ್ಷನ್ ಬಗ್ಗೆ ಗಮನ ಹರಿಸಿದೆ. ಕುಮಾರ್ ಚಿತ್ರ ಬಿಡುಗಡೆ ಕಾರ್ಯವನ್ನು ನಿರ್ವಹಿಸಲಿದ್ದಾರೆ ಎಂದು ಜಯಶ್ರೀ ದೇವಿ ಸಿಟಿ ಎಕ್ಸ್ ಪ್ರೆಸ್ ಜೊತೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಈ ಸಿನಿಮಾದ ಎಲ್ಲಾ ತಂತ್ರಜ್ಞರು, ಕಲಾವಿದರು, ತಂತ್ರಜ್ಞಾನ ಎಲ್ಲವು ನನಗೆ ಹೊಸದು, ಈ ಚಿತ್ರದ ಶೂಟಿಂಗ್ ನಲ್ಲಿ ಸೆಟ್ ಗೆ ಹೋಗುತ್ತಿದ್ದ ವೇಳೆ ನಾನು ತುಂಬಾ ಕಲಿತಿದ್ದೇನೆ ಎಂದು ಹೇಳಿದ್ದಾರೆ.

ನಾನು ಯಾವತ್ತು ನಿರ್ದೇಶಕರಿಗೆ ಎಷ್ಟು ಹಣ ಬೇಕಗುತ್ತದೆ ಎಂದು ಕೇಳುವುದಿಲ್ಲ. ಏಕೆ ಇಷ್ಟೊಂದು ಹಣ ಬೇಕಾಗುತ್ತದೆ. ಅದು ಅವಶ್ಯಕವೇ ಎಂಬುದಾಗಿದೆ. ಶೂಟಿಂಗ್ ಸ್ಥಳಕ್ಕೆ ಭೇಟಿ ನೀಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ, ಅದರ ಮಹತ್ವ ನನಗೆ ತಿಳಿಯಿತು. ಈ ಮೊದಲು ನಾನು ಚಿತ್ರ ನಿರ್ಮಾಣಕ್ಕೆ ಕೇವಲ ಬಂಡವಾಳ ಹಾಕಿ ಸುಮ್ಮನಾಗುತ್ತಿದ್ದೆ. ಒಬ್ಬ ನಿರ್ಮಾಪಕಿಯಾಗಿ ಇನ್ನು ಮುಂದೆ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT