'ಮುಕುಂದ ಮುರಾರಿ' ಸಿನೆಮಾದಲ್ಲಿ ಸುದೀಪ್
ಬೆಂಗಳೂರು: ಶುಕ್ರವಾರ ಬಿಡುಗಡೆಯಾಗಲಿರುವ 'ಮುಕುಂದ ಮುರಾರಿ' ಸಿನೆಮಾದಲ್ಲಿ ಕೃಷ್ಣನ ಪಾತ್ರ ಮಾಡಿರುವ ಸುದೀಪ್, ಈ ಸಿನೆಮಾದ ಆಸ್ತಿಕ ಮತ್ತು ನಾಸ್ತಿಕರ ನಡುವೆ ನಡಯುತ್ತದೆ ಮತ್ತು ಇದು ಉಪೇಂದ್ರ ನಟನೆಯಿಂದ ಮಾತ್ರವೇ ಹೇಳಲು ಸಾಧ್ಯವಾಗಿತ್ತು ಎನ್ನುತ್ತಾರೆ.
"ಒಳ್ಳೆಯ ಪಾತ್ರಗಳನ್ನೂ ಸೃಷ್ಟಿಸುವ ಮೂಲಕ ನಿರ್ದೇಶಕ ನಂದಕಿಶೋರ್ ಮತ್ತು ತಂಡ ಅದ್ಭುತ ಕೆಲಸ ಮಾಡಿದೆ" ಎನ್ನುವ ನಟ ಸುದೀಪ್ "ವೈಯಕ್ತಿವಾಗಿ ಬಹುದಿನಗಳ ನಂತರ ಉಪೇಂದ್ರ ನಟಿಸಿರುವ ಪಾತ್ರ ನನಗೆ ಇಷ್ಟವಾಗಿದೆ ಮತ್ತು ಅದು 'ಮುಕುಂದ ಮುರಾರಿ' ಪಾತ್ರ. ಜನ ಅವರನ್ನು ಅಂತಹ ಪಾತ್ರಗಳಲ್ಲಿ ನೋಡಲು ಇಷ್ಟ ಪಡುತ್ತಾರೆ ಮತ್ತು ನಿರ್ದೇಶಕರ ಆಯ್ಕೆ ನಿಖರವಾಗಿದೆ. ಮತ್ತೆಲ್ಲಾ ಪಾತ್ರಗಳು ಅವರ ಪಾತ್ರಕ್ಕೆ ಬೆಂಬಲವಾಗಿ ನಿಲ್ಲುತ್ತವೆ. ಇದು ಸೂಕ್ಷ್ಮವಾದ ಸಿನೆಮಾ ಮತ್ತು ಈ ಕಥೆಯನ್ನು ಎಷ್ಟು ಬಾರಿ ಹೇಳಿದರೂ ಇಂದಿನ ವಿಶ್ವಕ್ಕೆ ಇದು ಅಗತ್ಯ" ಎನ್ನುತ್ತಾರೆ.
ಇನ್ನು ತಮ್ಮ ಪಾತ್ರದ ಬಗ್ಗೆ ಮಾತನಾಡುವ ಸುದೀಪ್ "ಕೃಷ್ಣನ ಪಾತ್ರ ಮಾಡುವುದಕ್ಕೆ ಬಹಳ ಉತ್ಸುಕನಾಗಿದ್ದೆ. ಅದರಲ್ಲೂ ಉಪ್ಪಿ ಅವರ ಜೊತೆಗೆ ನಟಿಸುವುದಕ್ಕೆ. ನಂತರ ಆ ಧಿರಿಸು ಧರಿಸಿದ ಮೇಲಂತೂ ಆ ಪಾತ್ರ ಆಪ್ತವಾಯಿತು. ಈ ಪಾತ್ರದೊಂದಿಗೆ ಕೆಲವು ಸವಾಲುಗಳನ್ನು ಎದುರಿಸಬೇಕಾಯಿತು ಏಕೆಂದರೆ ದೇವರ ವರ್ತನೆ ನನಗೆ ತಿಳಿಯದು. ನಾನು ಪ್ರತಿಕ್ರಿಯಿಸದ ಮತ್ತು ಸುಮ್ಮನಿರುವ ದೇವರುಗಳನ್ನು ನೋಡಿದ್ದೇನೆ. ನಾವು ದೇವಾಲಯಕ್ಕೆ ಹೋಗಿ, ಅತ್ತರೂ, ಕರೆದರೂ, ಪೂಜೆ ಮಾಡಿದರೂ ಏನು ಪ್ರತಿಕ್ರಿಯಿಸದೆ ಪ್ರತಿಮೆಯಾಗಿಯೇ ಉಳಿಯುತ್ತಾನೆ ಅವನು. ನನಗೆ ಹೇಗೆ ಪ್ರತಿಕ್ರಿಯಸಬೇಕು ಎಂಬುದೇ ತಿಳಿದಿರಲಿಲ್ಲ. ಹಲವು ಸಂಭಾಷಣೆಯನ್ನು ಕೂಡ ಉಲಿಯಬೇಕಿತ್ತು ಕೊನೆಗೆ ಹೇಗೋ ನಿಭಾಯಿಸಿದೆ" ಎನ್ನುತ್ತಾರೆ.
ಇಂತಹ ಹೊಸತನದ ಪಾತ್ರದಲ್ಲಿ ನಟಿಸುವುದು ಒಳ್ಳೆಯ ಅವಕಾಶ ಎನ್ನುವ ಅವರು "ಸ್ಟಾರ್ ಗಿರಿ ಮತ್ತು ಬಾಕ್ಸ್ ಆಫೀಸ್ ಗಳಿಕೆಯ ಮೇಲೆ ದೃಷ್ಟಿಯಿಟ್ಟು ನಮ್ಮ ಪ್ರತಿಭೆಯನ್ನು ನಾವು ಗುರುತಿಸಿಕೊಳ್ಳುವುದಿಲ್ಲ. ಆದರೆ ನಮ್ಮೊಳಗಿನ ನಟ ಇಂತಹ ಅವಕಾಶಗಳನ್ನು ಹುಡುಕುತ್ತಿರುತ್ತದೆ. ನನಗೆ ಈ ಪಾತ್ರ ಸಿಕ್ಕಿರುವುದಕ್ಕೆ ಖುಷಿಯಾಗಿದೆ" ಎನ್ನುತ್ತಾರೆ ಸುದೀಪ್.