ನೀರ್ ದೋಸೆ ಚಿತ್ರದಲ್ಲಿ ಜಗ್ಗೇಶ್
ಬೆಂಗಳೂರು: ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ನೀರ್ ದೋಸೆ ಚಿತ್ರದಲ್ಲಿ ಅಭಿನಯಿಸಿದ್ದರೆ ಜನತೆ ಪಾಲಿಗೆ ಅವರು ದೇವತೆಯಾಗುತ್ತಿದ್ದರು ಎಂದು ನೀರ್ ದೋಸೆ ನಾಯಕ, ನಟ ಜಗ್ಗೇಶ್ ಅವರು ಶುಕ್ರವಾರ ಹೇಳಿದ್ದಾರೆ.
ಹಲವು ವಿವಾದ ಹಾಗೂ ತೊಂದರೆಗಳಿಂದ ನಿಂತು ಹೋಗಿದ್ದ ಜಗ್ಗೇಶ್ ಮತ್ತು ಹರಿಪ್ರಿಯಾ ಅಭಿನಯದ ನೀರ್ ದೋಸೆ ಸಿನಿಮಾ ಮತ್ತೆ ಟೇಕಾಫ್ ಆಗಿ ಇಂದು ರಾಜ್ಯದ್ಯಂತ ತೆರೆ ಕಂಡಿದ್ದು, ಅಭಿಮಾನಿಗಳ ಜೊತೆ ಚಿತ್ರ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಗ್ಗೇಶ್, ಬಂದ್ ನಡುವೆಯೂ ಭಾರಿ ಸಂಖ್ಯೆಯಲ್ಲಿ ಜನ ಬಂದು ಚಿತ್ರ ನೋಡಿರುವುದು ಖುಷಿ ತಂದಿದೆ ಎಂದರು.
ಇದೇ ವೇಳೆ ನೀರ್ ದೋಸೆ ಚಿತ್ರದಿಂದ ಅರ್ಧಕ್ಕೆ ಹೊರನಡೆದಿದ್ದ ನಟಿ ರಮ್ಯಾಗೆ ಟಾಂಗ್ ನೀಡಿದ ಜಗ್ಗೇಶ್, ರಮ್ಯಾ ಅವರು ನೀರ್ ದೋಸೆ ಚಿತ್ರ ನಿರಾಕರಿಸಿ ದೊಡ್ಡ ತಪ್ಪು ಮಾಡಿದ್ದಾರೆ. ಒಂದು ವೇಳೆ ಅವರು ಈ ಚಿತ್ರದಲ್ಲಿ ಅಭಿನಯಿಸಿದ್ದರೆ ಮುಂದಿನ 50 ವರ್ಷಗಳ ಕಾಲ ಅವರು ಅಭಿಮಾನಿಗಳ ಪಾಲಿಗೆ ದೇವತೆಯಾಗುತ್ತಿದ್ದರು. ಜನರ ಮನಸಲ್ಲಿ ಶಾಸ್ವತವಾಗಿ ಉಳಿಯುತ್ತಿದ್ದರು. ಆದರೆ ಅವರ ದುರಾದೃಷ್ಟ ಎಂದರು.