ಮಹಾರಾಷ್ಟ್ರದ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಪೊರಕೆ ಹಿಡಿದ ಅಮಿತಾಬ್ ಬಚ್ಚನ್
ಮುಂಬೈ: ಮಹಾರಾಷ್ಟ್ರದ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಶನಿವಾರ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಪೊರಕೆ ಹಿಡಿದದ್ದು ವಿಶೇಷವಾಗಿತ್ತು.
ವರದಿಗಳ ಪ್ರಕಾರ ಬಿಗ್ ಬಿ ಪೊರಕೆ ಹಿಡಿದು ಮುಂಬೈನ ಜೆ ಜೆ ಆಸ್ಪತ್ರೆಯ ಸುತ್ತಮುತ್ತ ಸ್ವಚ್ಛತೆಗೆ ಮುಂದಾಗಿದ್ದರು ಎನ್ನಲಾಗಿದೆ.
"ಮಹಾರಾಷ್ಟ್ರದ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಮಹಾ ಕ್ಲೀನಿತಾನ್ ನಲ್ಲಿ ಭಾಗವಹಿಸದ್ದೇನೆ" ಎಂದು ಬಿಗ್ ಬಿ ಶನಿವಾರ ಟ್ವೀಟ್ ಮಾಡಿದ್ದಾರೆ.
"ನೀವು ಬರಿಗೈನಿನಿಂದ ನಾನು ಕಸ ಎತ್ತಿದ್ದನ್ನು ಪ್ರಶಂಸಿಸುತ್ತಿದ್ದೀರಿ. ಆದರೆ ನಮ್ಮ ಸ್ವಚ್ಛಕರ್ಮಿಗಳಿಗೆ ಯಾವಾಗಲೂ ಕೈಗವಚ ಇರುವುದಿಲ್ಲ" ಎಂದು ಅಮಿತಾಬ್ ಸುದ್ದಿ ವಾಹಿನಿಯ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
"ಯಾರಾದರೂ ಕಸ ಎಸೆಯುವುದು ಕಂಡರೆ ಅವರನ್ನು ತಡೆಯಿರಿ. ಅವರು ಮಾಡುತ್ತಿರುವುದು ತಪ್ಪು ಎಂದು ತಿಳಿಸಿ. ಇದನ್ನು ಪದೇ ಪದೇ ಹೇಳಿದರೆ ಜನ ಬದಲಾಗುತ್ತಾರೆ" ಎಂದು ಕೂಡ ಅವರು ಹೇಳಿದ್ದಾರೆ.