'ದೊಡ್ಮನೆ ಹುಡುಗ' ಸಿನೆಮಾದಲ್ಲಿ ರಾಧಿಕಾ ಪಂಡಿತ್ ಮತ್ತು ಪುನೀತ್ ರಾಜಕುಮಾರ್ 
ಸಿನಿಮಾ ಸುದ್ದಿ

ದೊಡ್ಮನೆ ಸಂಭ್ರಮ ಪ್ರಾರಂಭ; ಬಿಡುಗಡೆಗೆ ಒಂದು ವಾರಕ್ಕೆ ಮುಂಚಿತವಾಗಿಯೇ ಟಿಕೆಟ್ ಮಾರಾಟ

ಪುನೀತ್ ರಾಜಕುಮಾರ್ ಅಭಿನಯದ 'ದೊಡ್ಮನೆ ಹುಡುಗ' ಸಿನೆಮಾದ ಬಿಡುಗಡೆ ಸನಿಹವಾಗುತ್ತಿದ್ದು, ಈಗಾಗಲೇ ಅಭಿಮಾನಿಗಳ ನಡುವೆ ಸಂಭ್ರಮ ಶುರುವಾಗಿದೆ. ಸೆಪ್ಟೆಂಬರ್ 23 ಕ್ಕೆ ಬಿಡುಗಡೆಯಾಗಲಿರುವ

ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ 'ದೊಡ್ಮನೆ ಹುಡುಗ' ಸಿನೆಮಾದ ಬಿಡುಗಡೆ ಸನಿಹವಾಗುತ್ತಿದ್ದು, ಈಗಾಗಲೇ ಅಭಿಮಾನಿಗಳ ನಡುವೆ ಸಂಭ್ರಮ ಶುರುವಾಗಿದೆ. ಸೆಪ್ಟೆಂಬರ್ 23 ಕ್ಕೆ ಬಿಡುಗಡೆಯಾಗಲಿರುವ ಈ ಸಿನೆಮಾದ ಸಂಭ್ರಮಕ್ಕಾಗಿ ಅಭಿಮಾನಿಗಳು ತಯ್ಯಾರಿ ನಡೆಸುತ್ತಿದ್ದು, 108 ಅಡಿಯ ಕಟೌಟ್ ಹಾಕಲಿದ್ದಾರೆ. ಹಾಗೆಯೇ ಪ್ರಸನ್ನ ಚಿತ್ರಮಂದಿರದ ಎದುರು 10 ಕ್ಕೂ ಹೆಚ್ಚು ಕಟೌಟ್ ಗಳು ತಲೆಯೆತ್ತಲಿವೆ. 
"ಅಭಿಮಾನಿಗಳು 9 ಕಟೌಟ್ ಗಳನ್ನು ಹಾಕಲಿದ್ದಾರೆ ಮತ್ತು ನಿರ್ಮಾಪಕ ಒಂದನ್ನು ಏರಿಸಲಿದ್ದಾರೆ"  ಎನ್ನುತ್ತಾರೆ ಚಿತ್ರನಿರ್ಮಾಣ ತಂಡದ ಸದ್ಯಸ್ಯರೊಬ್ಬರು. "ಇದು ಪುನೀತ್ ಅವರ 25 ನೇ ಚಿತ್ರವಾಗಿರುವುದರಿಂದ, ಇದು ನೆನಪಿನಲ್ಲುಳಿಯುವಂತೆ ಮಾಡಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ" ಎಂದು ತಿಳಿಸುವ ಮೂಲಗಳು "ಹಾಗೆಯೇ ಅಂಬರೀಷ್ ಅವರ ಕಟೌಟ್ ಗಳನ್ನು ಕೂಡ ಎಲ್ಲ ಚಿತ್ರಮಂದಿರಗಳ ಮುಂದೆ ನಿಲ್ಲಿಸಲಾಗುತ್ತದೆ" ಎಂದಿದ್ದಾರೆ. 
ಅಭಿಮಾನಿಗಳಿಗೆ ಸಂತಸ ತರಬಲ್ಲ ಮತ್ತೊಂದು ಸುದ್ದಿಯೆಂದರೆ ಈ ಸಿನೆಮಾದ ಟಿಕೆಟ್ ಗಳನ್ನು ಬಿಡುಗಡೆಗೆ ಒಂದು ವಾರದ ಮುಂಚೆಯೇ ಮುಂಗಡ ಕಾಯ್ದಿರಿಸಲು ಅವಕಾಶ ನೀಡಲಾಗಿದೆ. ವಿಶ್ವದಾದ್ಯಂತ ಬಿಡುಗಡೆಯಾಗುತ್ತಿರುವ ಈ ಸಿನೆಮಾ 400 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 
ಚಿತ್ರೀಕರಣದ ನಂತರದ ಕೆಲಸಗಳು ಭರದಿಂದ ಸಾಗುತ್ತಿದ್ದು, ಮುಂದಿನ ವಾರದ ವೇಳೆಗೆ ಸೆನ್ಸಾರ್ ಪ್ರಮಾಣಪತ್ರ ಪಡೆಯುವ ಭರವಸೆ ಹೊಂದಿದೆ ಚಿತ್ರತಂಡ. 
ಸೂರಿ ನಿರ್ದೇಶನದ ಈ ಚಿತ್ರವನ್ನು ಎಂ ಗೋವಿಂದು ನಿರ್ಮಿಸಿದ್ದು ರಾಧಿಕಾ ಪಂಡಿತ್ ನಾಯಕನಟಿಯಾಗಿ ಕಾಣಿಸಿಕೊಂಡಿದ್ದಾರೆ. ವಿ ಹರಿಕೃಷ್ಣ ಸಂಗೀತ ನೀಡಿದ್ದು, ಸತ್ಯ ಹೆಗಡೆ ಸಿನೆಮ್ಯಾಟೋಗ್ರಾಫರ್. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT