ಮುಂಬೈ: ಬರಲಿರುವ ಮೈಸೂರು ಫ್ಯಾಷನ್ ವಾರ ಕಾರ್ಯಕ್ರಮದಲ್ಲಿ ವಿನ್ಯಾಸಕಾರ್ತಿ ಜಯಂತಿ ಬಲ್ಲಾಳ್ ಅವರ ಉಡುಗೆಯುಟ್ಟು ರಾಂಪ್ ಮೇಲೆ ನಡೆಯಲಿರುವ ರವೀನಾ ಟಂಡನ್ ಪ್ರಮುಖ ಆಕರ್ಷಣೆಯಾಗಿದ್ದಾರೆ.
ಬಲ್ಲಾಳ್ ಅವರಿಗೆ ಶುಕ್ರವಾರ ರಾಂಪ್ ಮೇಲೆ ನಡೆಯುವೆ ಎಂದು 41 ವರ್ಷನ ನಟಿ ಹೇಳಿದ್ದಾರೆ. ಮೂರು ದಿನಗಳ ಈ ಫ್ಯಾಷನ್ ಉತ್ಸವ ಸೆಪ್ಟೆಂಬರ್ 16 ರಿಂದ ಪ್ರಾರಂಭವಾಗಲಿದೆ.
"ಮೈಸೂರು ಫ್ಯಾಷನ್ ವಾರದಲ್ಲಿ 16 ನೇ ಸೆಪ್ಟೆಂಬರ್ 2016 ರಂದು ವಿನ್ಯಾಸಕಾರ್ತಿ ಜಯಂತಿ ಬಲ್ಲಾಳ್ ಅವರಿಗೆ ರಾಂಪ್ ನಡಿಗೆ ಮಾಡಲಿದ್ದೇನೆ. ಮೈಸೂರೆಂದರೆ ನನಗೆ ಬಹಳ ಇಷ್ಟ. ಸಮೃದ್ಧ ಸಾಂಸ್ಕೃತಿಕ ಪರಂಪರೆಯುಳ್ಳ ಸುಂದರ ನಗರ ಮೈಸೂರು" ಎಂದು ರವೀನಾ ಭಾನುವಾರ ಟ್ವೀಟ್ ಮಾಡಿದ್ದಾರೆ.
ಇದು ಮೈಸೂರು ಫ್ಯಾಷನ್ ವಾರದ ಮೂರನೇ ಆವೃತ್ತಿ.