ಬೆಂಗಳೂರು: ಎಲ್ಲರ ಚಿತ್ತ ಈಗ ಬಿಗ್‌ಬಾಸ್ ಸೀಸನ್ 4 ಕಡೆ ನೆಟ್ಟಿದೆ ಅಂದ್ರೆ ತಪ್ಪಾಗಲ್ಲ. ಕನ್ನಡ ಬಿಗ್ ಬಾಸ್ ಸೀಸನ್ 4 ಆರಂಭವಾಗಲಿದೆ ಎಂಬ ಸುದ್ದಿ ಕಳೆದ ಒಂದು ವಾರದಿಂದ ಹರಿದಾಡುತ್ತಿದ್ದು, ಕಾರ್ಯಕ್ರಮದಲ್ಲಿ ಯಾರ್ಯಾರು ಭಾಗವಹಿಸಲಿದ್ದಾರೆ ಎಂಬ ಪಟ್ಟಿ ಲೀಕ್ ಆಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಬಾರಿಯೂ ಕೂಡ ಬಿಗ್ ಬಾಸ್ ಕಾರ್ಯಕ್ರಮ ಕಲರ್ಸ್ ಕನ್ನಡದಲ್ಲೇ ಪ್ರಸಾರವಾಗಲಿದ್ದು, ಈ ಹಿಂದಿನಂತೆ ಕಿಚ್ಚ ಸುದೀಪ್ ಅವರೇ ಕಾರ್ಯಕ್ರಮ ನಿರ್ವಹಿಸುತ್ತಾರೆ ಎಂದು ಹೇಳಲಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಈ ಯಾರೆಲ್ಲಾ ಸ್ಪರ್ಧಿಗಳು ಇರ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಅಕ್ಟೋಬರ್ ನಿಂದ ಆರಂಭವಾಗುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಸೆಲೆಬ್ರೇಟಿಗಳ ಲಿಸ್ಟ್ ಲೀಕ್ ಆಗಿದೆ ಎನ್ನಲಾಗಿದೆ.
ಬಿಗ್ ಬಾಸ್ ನಲ್ಲಿ ನಟ ನವೀನ್ ಕೃಷ್ಣ, ತುಪ್ಪದ ಹುಡುಗಿ ರಾಗಿಣಿ, ಲೂಸ್ ಮಾದ ಯೋಗಿ, ಕಾಮಿಡಿ ಕಿಂಗ್ ಕೋಮಲ್, ಶೀತಲ್ ಶೆಟ್ಟಿ, ಇವರ ಜೊತೆಗೆ ಸುಧಾರಾಣಿ, ಅನು ಪ್ರಭಾಕರ್, ತಾರಾ, ಮುಂತಾದವರ ಹೆಸರುಗಳು ಕೇಳಿ ಬರುತ್ತಿದೆ.
ಸದ್ಯಕ್ಕೆ ಈ ಲಿಸ್ಟ್ ಹರಿದಾಡುತ್ತಿದ್ದು, ಯಾರ್ಯಾರು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.