ಮಹೇಂದ್ರ ಸಿಂಗ್ ಧೋನಿ-ಸುಶಾಂತ್ ಸಿಂಗ್ ರಜಪೂತ್
ನ್ಯೂಯಾರ್ಕ್: ನನ್ನನ್ನು ವೈಭವೀಕರಿಸಬೇಡಿ ಆದರೆ ನಾನು ನನ್ನ ಪಯಣದಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಪರಿಣಾಮಕಾರಿಯಾಗಿ ತೋರಿಸಿ ಎಂದು ಜನಪ್ರಿಯ ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ 'ಎಂಎಸ್ ಧೋನಿ- ದ ಆನ್ ಟೋಲ್ಡ್ ಸ್ಟೋರಿ' ಚಿತ್ರೀಕರಣಕ್ಕೂ ಮುಂಚಿತವಾಗಿ ನಿರ್ದೇಹಕ ನೀರಜ್ ಪಾಂಡೆ ಅವರಿಗೆ ಹೇಳಿದ ಮಾತುಗಳು.
ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಲಿರುವ ಈ ಸಿನೆಮಾದ ಪ್ರಚಾರಕ್ಕಾಗಿ ಅಮೆರಿಕಾದಲ್ಲಿದ್ದ ಧೋನಿ, ಅವರ ಪತ್ನಿ ಸಾಕ್ಷಿ ಮತ್ತು ನಿರ್ಮಾಪಕ ಅರುಣ್ ಪಾಂಡೆ ಮಾಧ್ಯಮಗಳೊಂದಿಗೆ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
"ನಾನು ಪಾಂಡೆ (ನಿರ್ದೇಶಕ ನೀರಜ್) ಅವರಿಗೆ ಹೇಳಿದ ಒಂದೇ ಮಾತೆಂದರೆ ಸಿನೆಮಾ ನನ್ನನ್ನು ವೈಭವೀಕರಿಸಬಾರದು. ಇದು ವೃತ್ತಿಪರ ಕ್ರೀಡಾಪಟುವೊಬ್ಬನ ಪಯಣ ಮತ್ತು ಅದನ್ನಷ್ಟೇ ತೋರಿಸಬೇಕು" ಎಂದು ಧೋನಿ ಸಿನೆಮಾ ಪ್ರಚಾರ ಕಾರ್ಯಕ್ರಮದಲ್ಲಿ ವರದಿಗಾಗರಿಗೆ ಹೇಳಿದ್ದಾರೆ.
ವಾಸ್ತವದಲ್ಲಿ ಬದುಕುವ ಈ ಕ್ರೀಡಾಪಟುವಿಗೆ ತಮ್ಮ ಜೀವನದ ಹಿಂದಿನ ಕಥೆಯನ್ನು ಪಾಂಡೆ ಅವರಿಗೆ ನೆನಪಿಸಿಕೊಂಡು ವಿವರಿಸುವುದಕ್ಕೆ ಕಷ್ಟ ಆಯಿತಂತೆ.
ಸಂಕಲನಗೊಂಡಿರದ ಸಿನೆಮಾವನ್ನು ಮೊದಲ ಬಾರಿಗೆ ನೋಡಿದಾಗ, ತಮ್ಮ ಬಾಲ್ಯದ ಕಾಲಕ್ಕೆ ಸಿನೆಮಾ ಕೊಂಡೊಯ್ದಿತು ಎನ್ನುವ ಧೋನಿ "ಅವೆಲ್ಲವೂ ನನ್ನ ನೆನಪಿಗೆ ಮತ್ತೆ ಬಂದವು... ನಾನು ಆಗ ಬದುಕಿದ್ದ ರೀತಿ, ನನ್ನ ಶಾಲೆ, ನಾನು ಆಟವಾಡುತ್ತಿದ್ದುದು. ನಾನು ಒಂದು ಕ್ಷಣ ಅವಾಕ್ಕಾದೆ" ಎದು ಸಾಮಾನ್ಯವಾಗಿ ಎಂದಿಗೂ ಕ್ರೀಡಾಂಗಣದಲ್ಲಿ ತಮ್ಮ ಭಾವನೆಗಳನ್ನು ಪ್ರದರ್ಶಿಸದ ಧೋನಿ ಹೇಳಿದ್ದಾರೆ.
ಸಿನೆಮಾದಲ್ಲಿ ಧೋನಿ ಪಾತ್ರ ನಿರ್ವಹಿಸಿರುವ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಮನಸಾರೆ ಹೊಗಳಿರುವ ಧೋನಿ, ಅವರು ಅದ್ಭುತ ನಟ ಎಂದಿದ್ದು, ಅವರು ಸಿನೆಮಾಗಿ ಎಷ್ಟು ಕಷ್ಟ ಪಟ್ಟಿದ್ದಾರೆ ಎಂದರೆ ತಾರೆಯರ ಕ್ರಿಕೆಟ್ ಆಟದಲ್ಲಿ ಇವರು ಅತ್ಯುತ್ತಮ ಕ್ರಿಕೆಟರ್ ಎಂದಿದ್ದಾರೆ.