'ಗಿರಿಜಾ ಕಲ್ಯಾಣ'ದ ವಿಶಿಷ್ಟ ಪಾತ್ರದಲ್ಲಿ ಗೋಧಿ ಬಣ್ಣ..'ದ ವಸಿಷ್ಠ 
ಸಿನಿಮಾ ಸುದ್ದಿ

ಕಿರುತೆರೆ ಧಾರಾವಾಹಿ 'ಗಿರಿಜಾ ಕಲ್ಯಾಣ'ದ ವಿಶಿಷ್ಟ ಪಾತ್ರದಲ್ಲಿ ಗೋಧಿ ಬಣ್ಣ..'ದ ವಸಿಷ್ಠ

ಹೇಮಂತ್ ರಾವ್ ನಿರ್ದೇಶನದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದಲ್ಲಿ ವಿಶಿಷ್ಟ ಖಳನಾಯಕನ ಪಾತ್ರ ಮಾಡಿ ಗಮನ ಸೆಳೆದಿದ್ದ ವಸಿಷ್ಠ ಸಿಂಹ ಅವರಿಗೆ ಹಲವಾರು ಅವಕಾಶಗಳು ಸಹಜವಾಗಿ

ಬೆಂಗಳೂರು: ಹೇಮಂತ್ ರಾವ್ ನಿರ್ದೇಶನದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದಲ್ಲಿ ವಿಶಿಷ್ಟ ಖಳನಾಯಕನ ಪಾತ್ರ ಮಾಡಿ ಗಮನ ಸೆಳೆದಿದ್ದ ವಸಿಷ್ಠ ಸಿಂಹ ಅವರಿಗೆ ಹಲವಾರು ಅವಕಾಶಗಳು ಸಹಜವಾಗಿ ಹುಡುಕಿಬರುತ್ತಿವೆ. ಈಗ ಅವರು ಕಲರ್ಸ್ ಸೂಪರ್ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಗಿರಿಜಾ ಕಲ್ಯಾಣ' ಧಾರಾವಾಹಿಯಲ್ಲಿ ನಟಿಸಲಿದ್ದಾರೆ. 
ಭರವಸೆಯ ನಟ ವಸಿಷ್ಠ ಅವರು ಸೂರಿ ನಿರ್ದೇಶನದ 'ಟಗರು' ಸಿನೆಮಾದಲ್ಲಿ ಕೂಡ ಶಿವರಾಜ್ ಕುಮಾರ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಅಲ್ಲಿ ಕೂಡ ಖಳನಾಯಕರಾನಾಗಿ ಕಾಣಿಸಿಕೊಳ್ಳಲಿದ್ದಾರೆ.
ಈಗ ಆಸಕ್ತಿದಾಯಕ ಬೆಳವಣಿಗೆಯೊಂದರಲ್ಲಿ ಬಹುಮುಖಿ ನಟ ವಸಿಷ್ಠ ಕಿರುತೆರೆ ಧಾರಾವಾಹಿ 'ಗಿರಿಜಾ ಕಲ್ಯಾಣ'ದಲ್ಲಿ 'ಭೈರವಗಿರಿ ಬಾಬಾ' ಆಗಿ ಬರಲಿದ್ದಾರೆ. ಕಲರ್ಸ್ ಸೂಪರ್ ಕನ್ನಡ ಮನರಂಜನಾ ವಾಹಿನಿಯಲ್ಲಿ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9:30 ಕ್ಕೆ ಈ ಧಾರಾವಾಹಿ ಮೂಡಿಬರುತ್ತದೆ. 
'ಬಾಹುಬಲಿ' ಖ್ಯಾತಿಯ ಸಿನೆಮಾ ನಿರ್ಮಾಣ ಸಂಸ್ಥೆ ಆರ್ಕಾ ಮೀಡಿಯಾ ನಿರ್ಮಿಸುತ್ತಿರುವ ಈ ಧಾರಾವಾಹಿಯ ನಿರ್ದೇಶಕ ನವೀನ್ ಕೃಷ್ಣ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

ವಿಮಾನ ಸುರಕ್ಷತೆಯಲ್ಲಿ ರಾಜಿಯಿಲ್ಲ: ಪೈಲಟ್‌ಗಳ ಡ್ರಗ್‌ ಟೆಸ್ಟ್‌ ನಿಯಮದಲ್ಲಿ ಮಹತ್ವದ ಬದಲಾವಣೆ, ವರ್ಷವಿಡೀ ಯಾದೃಚ್ಛಿಕ ತಪಾಸಣೆಗೆ ಕೇಂದ್ರ ಸರ್ಕಾರ ಮುಂದು..!

ಹಿರಿಯೂರು ಬಳಿ ಸಮರ್ಥ್ ಶಾಮನೂರು ಕಾರು ಅಪಘಾತ: ಕಾಂಗ್ರೆಸ್ ಶಾಸಕ ಅಪಾಯದಿಂದ ಪಾರು!

20 TMC ನಾಯಕರ ಅನರ್ಹತೆ ಪ್ರಕರಣ: ಅಭಿಷೇಕ್‌ ಬ್ಯಾನರ್ಜಿ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ಅಸ್ತು; ಬಂಡಾಯ ಸಂಸದರಿಗೆ Notice ಜಾರಿ..!

ಶ್ರೀಶೈಲ: ಹೋಟೆಲ್‌ನಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ; ಕಾರಣ ನಿಗೂಢ