ಏಂಜಲಿನಾ ಜೂಲಿ, ಬ್ರಾಡ್‍ಪಿಟ್ 
ಸಿನಿಮಾ ಸುದ್ದಿ

ಹಾಲಿವುಡ್ ನ ಹಾಟ್ ಜೋಡಿ ಏಂಜಲಿನಾ-ಬ್ರಾಡ್‍ಪಿಟ್ ದಾಂಪತ್ಯದಲ್ಲಿ ಬಿರುಕು

ಹಾಲಿವುಡ್ ನ ಮಿಸ್ಟರ್ ಆಂಡ್ ಮಿಸ್ಸೆಸ್ ಸ್ಮಿತ್ ಖ್ಯಾತಿಯ ಹಾಟ್ ಜೋಡಿ ಏಂಜಲಿನಾ ಜೂಲಿ ಹಾಗೂ ಬ್ರಾಡ್ ಪಿಟ್ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದ್ದು...

ಲಾಸ್ ಏಂಜಲೀಸ್: ಹಾಲಿವುಡ್ ನ ಮಿಸ್ಟರ್ ಆಂಡ್ ಮಿಸ್ಸೆಸ್ ಸ್ಮಿತ್ ಖ್ಯಾತಿಯ ಹಾಟ್ ಜೋಡಿ ಏಂಜಲಿನಾ ಜೂಲಿ ಹಾಗೂ ಬ್ರಾಡ್ ಪಿಟ್ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ವಿಚ್ಛೇದನಕ್ಕಾಗಿ ಏಂಜಲಿನಾ ಅರ್ಜಿ ಸಲ್ಲಿಸಿದ್ದಾರೆ.

2005 ರಿಂದ ಜತೆಯಾಗಿ ಜೀವನ ನಡೆಸುತ್ತಿದ್ದ ಜೂಲಿ ಹಾಗೂ ಬ್ರಾಡ್ ಪಿಟ್ 2014ರಲ್ಲಿ ವಿವಾಹವಾಗಿದ್ದರು. ಆದರೆ ಇದೀಗ ಜೂಲಿ ತಮ್ಮ ದಾಂಪತ್ಯ ಜೀವನದಿಂದ ಬೇಸರಗೊಂಡಿದ್ದು ಬ್ರಾಡ್ ಪಿಟ್ ರಿಂದ ವಿಚ್ಛೇದನ ಪಡೆಯಲು ತೀರ್ಮಾಣಿಸಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಜೂಲಿ ಪರ ವಕೀಲರು ಕುಟುಂಬದ ಆರೋಗ್ಯದ ದೃಷ್ಟಿಯಿಂದ ಅವರು ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಜೂಲಿ ತಮ್ಮ ದೂರಿನಲ್ಲಿ ಬ್ರಾಡ್ ಪಿಟ್ ಮಕ್ಕಳನ್ನು ಒಬ್ಬ ತಂದೆಯಾಗಿ ನೋಡಿಕೊಳ್ಳುತ್ತಿಲ್ಲ. ಅಲ್ಲದೆ ಬ್ರಾಡ್ ದುಶ್ಚಟಗಳಿಗೆ ಒಳಗಾಗಿದ್ದು, ಇದರಿಂದ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

ಏಂಜಲೀನ ಜೂಲಿ ಮತ್ತು ಬ್ರಾಡ್ ಪಿಟ್ ದಂಪತಿಗೆ ಅವಳಿ ಮಕ್ಕಳಿದ್ದು, ಜತೆಗೆ ನಾಲ್ಕು ಮಕ್ಕಳನ್ನು ದತ್ತು ಪಡೆದುಕೊಂಡಿದ್ದಾರೆ. ಹೀಗಾಗಿ ತಮ್ಮ 6 ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ತನಗೆ ನೀಡಬೇಕು ಎಂದು ಜೂಲಿ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಇನ್ನು ಜೂಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದಕ್ಕೆ ಬ್ರಾಡ್ ಪಿಟ್ ಬೇಸಕ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು ರಾಜಕೀಯದಲ್ಲಿ ಬಿಗ್ ಟ್ವಿಸ್ಟ್: ನಾಳೆ ವಿಜಯ್ ಪ್ರಮಾಣವಚನ ಡೌಟ್; ಮತ್ತೆ ಸಂಖ್ಯಾಬಲ ಇಲ್ಲ ಎಂದ ಗವರ್ನರ್!

Google Trends ನಲ್ಲಿಯೂ ವಿಜಯ್- TVK ಅರ್ಭಟ! ಮತಗಳು, ಗೆಲುವಿನ ಬಗ್ಗೆ ಹೆಚ್ಚಿನ ಹುಡುಕಾಟ

IPL 2026: ಫಿನ್ ಅಲೆನ್ ಶತಕದ ಅಬ್ಬರ, ಡೆಲ್ಲಿ ವಿರುದ್ಧ KKR ಗೆ 8 ವಿಕೆಟ್ ಗಳ ಭರ್ಜರಿ ಜಯ!

ಹೌದು 2025 ರ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಸಹಾಯ ಮಾಡಿದ್ವಿ: ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ 1 ವರ್ಷದ ಬಳಿಕ ಚೀನಾ ಒಪ್ಪಿಗೆ!

ಕಾಂಗ್ರೆಸ್‌ನ್ನು ಕಿತ್ತು ಹಾಕದೇ ಯುವಕರಿಗೆ ಉದ್ಯೋಗವಿಲ್ಲ! ನಿಖಿಲ್ ಕುಮಾರಸ್ವಾಮಿ ಕಿಡಿ

SCROLL FOR NEXT