'ಜಾಗ್ವಾರ್' ಸಿನೆಮಾದಲ್ಲಿ ನಿಖಿಲ್ ಕುಮಾರ್ 
ಸಿನಿಮಾ ಸುದ್ದಿ

'ಜಾಗ್ವಾರ್' ಮೊದಲ ಟಿಕೆಟ್ 10 ಲಕ್ಷಕ್ಕೆ ಬಿಕರಿ!

ನಿಖಿಲ್ ಕುಮಾರ್ ನಟನೆಯ ಮೊದಲ ಚಿತ್ರ 'ಜಾಗ್ವಾರ್' ಹಲವಾರು ಕಾರಣಗಳಿಗೆ ಪ್ರೇಕ್ಷಕರಲ್ಲಿ ಕುತೂಹಲ ಸೃಷ್ಟಿಸಿದೆ. ಈ ಚೊಚ್ಚಲ ನಟ ಕನ್ನಡ ಚಿತ್ರರಂಗದಲ್ಲಿ ಆಗಲೇ ದೊಡ್ಡ ಅಭಿಮಾನಿ ಬಳಗವನ್ನು

ಬೆಂಗಳೂರು: ನಿಖಿಲ್ ಕುಮಾರ್ ನಟನೆಯ ಮೊದಲ ಚಿತ್ರ 'ಜಾಗ್ವಾರ್' ಹಲವಾರು ಕಾರಣಗಳಿಗೆ ಪ್ರೇಕ್ಷಕರಲ್ಲಿ ಕುತೂಹಲ ಸೃಷ್ಟಿಸಿದೆ. ಈ ಚೊಚ್ಚಲ ನಟ ಕನ್ನಡ ಚಿತ್ರರಂಗದಲ್ಲಿ ಆಗಲೇ ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. 
ಮೂಲಗಳ ಪ್ರಕಾರ ನಿಖಿಲ್ ಅಭಿಮಾನಿಗಳು ಮೊದಲ ಟಿಕೆಟ್ ಕೊಳ್ಳಲು ಪೈಪೋಟಿಗೆ ಬಿದ್ದಿದ್ದಾರಂತೆ. "ಮೊದಲ ಟಿಕೆಟ್ ಅನ್ನು ಅತಿ ಹೆಚ್ಚಿನ ಬೆಳೆಗೆ ಕೊಳ್ಳಲು 'ಜಾಗ್ವಾರ್' ಚಿತ್ರತಂಡ ನಿರತವಾಗಿ ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿದೆ. ಕೆಲವರು ಒಂದು ಟಿಕೆಟ್ ಕೊಳ್ಳಲು ಒಂದು ಲಕ್ಷ ರೂ ನೀಡಲು ಸಿದ್ಧರಿದ್ದಾರೆ, ಮೈಸೂರಿನ ಅಭಿಮಾನಿ ಲೋಕೇಶ್ ಎಂಬುವವರು ಮೊದಲ ಟಿಕೆಟ್ ಗಾಗಿ 10 ಲಕ್ಷ ರೂ ನೀಡಲು ಸಿದ್ಧರಾಗಿದ್ಧಾರೆ. ಆದರೆ ಇದರ ಬಗ್ಗೆ ಚಿತ್ರತಂಡ ಯಾವುದೇ ನಿರ್ಧಾರ ಇನ್ನು ತೆಗೆದುಕೊಂಡಿಲ್ಲ. ಬಿಡುಗಡೆ ಸಮಯದಲ್ಲಿ ಅದೃಷ್ಟವಂತನ ಹೆಸರನ್ನು ಘೋಷಿಸುತ್ತದೆ" ಎನ್ನುತ್ತಾರೆ. 
"ಹೊಸ ನಟನೊಬ್ಬನ ಮೊದಲ ಸಿನೆಮಾಗೆ ಈ ರೀತಿಯ ಸಂಚಲನ ಹುಟ್ಟಿರುವುದು ಅಚ್ಚರಿ ತಂದಿದೆ" ಎನ್ನುತ್ತಾರೆ ನಿರ್ಮಾಣ ತಂಡದ ಸದಸ್ಯರೊಬ್ಬರು. 
ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಕನಿಷ್ಠ 16 ದೇಶಗಳಲ್ಲಿ 1000 ಕ್ಕೂ ಹೆಚ್ಚು ತೆರೆಗಳಲ್ಲಿ ಬಿಡುಗಡೆ ಕಾಣಲಿದೆಯಂತೆ. ಯಾವುದೇ ಚೊಚ್ಚಲ ನಟನಿಗೆ ಇದು ಅತಿ ದೊಡ್ಡ ಪ್ರದರ್ಶನವಾಗಲಿದೆ. 
ಎ ಮಹಾದೇವ ನಿರ್ದೇಶಿಸಿರುವ ಈ ಚಿತ್ರ ಅಕ್ಟೋಬರ್ 6 ಕ್ಕೆ ಬಿಡುಗಡೆಯಾಗಬೇಕಿದೆ. ದೀಪ್ತಿ ಸಾಟಿ ಚಿತ್ರದ ನಾಯಕನಟಿಯಾಗಿದ್ದು, ತಮನ್ನಾ ವಿಶೇಷ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಹಾಗೆಯೇ ರಮ್ಯ ಕೃಷ್ಣ, ಶರತ್ ಕುಮಾರ್, ಸಾಧು ಕೋಕಿಲಾ, ಜಗಪತಿ ಬಾಬು, ಅವಿನಾಶ್, ಸಂಪತ್ ರಾಜು ಹೀಗೆ ಹಿರಿಯ ನಟರ ತಾರಾದಂಡೆ ಸಿನಿಮಾದಲ್ಲಿದೆ.
ಎಸ್ ಥಮನ್ ಸಂಗೀತ ನೀಡಿದ್ದು, ಮನೋಜ್ ಪರಮಹಂಸ ಅವರ ಛಾಯಾಗ್ರಹಣ ಸಿನೆಮಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT