ಚೆನ್ನೈ: ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ಕುರಿತಾದ ಅಚ್ಚರಿಯ ಸಂಗತಿಗಳು ಚಿತ್ರದಲ್ಲಡಗಿವೆ. ಪ್ರತಿಯೊಬ್ಬರೂ ಸ್ಫೂರ್ತಿ ಪಡೆದುಕೊಳ್ಳುವಂತಹ ವಿಚಾರಗಳನ್ನು ಒಳಗೊಂಡಿದೆ. ಧೋನಿಯವರು ಈ ತನಕ ಹೇಳದೇ ಇರುವ ಅನೇಕ ಸಂಗತಿಗಳು ಈ ಕತೆಯಲ್ಲಿವೆ ಎಂದು ಬಹಳ ಬರ್ಷಗಳ ಬಳಿಕ ಮತ್ತೆ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿರುವ ಭೂಮಿಕಾ ಚಾವ್ಲಾ ಹೇಳಿದ್ದಾರೆ.
ನೀರಜ್ ಪಾಂಡೆ ನಿರ್ದೇಶನದ ಎಂ.ಎಸ್.ಧೋನಿ ಚಿತ್ರದಲ್ಲಿ ಅವರ ಸಹೋದರಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಭೂಮಿಕಾ ಚಾವ್ಲಾ, ಧೋನಿ ಅವರ ವಿಚಾರವಾಗಿ ನನಗೆ ಹೆಚ್ಚೇನೂ ಮಾಹಿತಿ ಇರಲಿಲ್ಲ. ಆದರೆ ಚಿತ್ರದಲ್ಲಿ ನಟಿಸುವ ಸಮಯದಲ್ಲಿ ಈ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ತಿಳಿದುಕೊಂಡಿದ್ದೇನೆ.
ಜನಪ್ರಿಯ ಕ್ರಿಕೆಟಿಗನ ಖಾಸಗಿಯಾದ ಅನೇಕ ವಿಚಾರಗಳು ಬಹಳ ಮಂದಿಗೆ ಗೊತ್ತಿರುವುದಿಲ್ಲ ಎಂದೇ ಭಾವಿಸುತ್ತೇನೆ. ಅಂತಹ ಅನೇಕ ಸಂಗತಿಗಳನ್ನೂ ಒಳಗೊಂಡಿರುವ ಚಿತ್ರ ಇದಾಗಿದ್ದು, ಪ್ರತಿಯೊಬ್ಬರೂ ಮೆಚ್ಚಿಕೊಳ್ಳುವ ವಿಶ್ವಾಸ ನನಗಿದೆ ಎಂದಿದ್ದಾರೆ.