ಗೊಂಬೆಗಳ ಲವ್ ಚಿತ್ರದ ಮೂಲಕ ಭರವಸೆ ಮೂಡಿಸಿರುವ ನಿರ್ದೇಶಕ ಸಂತೋಷ್ ನಿರ್ದೇಶನ ಮಾಡಿರುವ ದಾದಾ ಈಸ್ ಬ್ಯಾಕ್ ಚಿತ್ರದ ಟ್ರೈಲರ್ ಅನ್ನು ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದ್ದಾರೆ.
ದಾದಾ ಈಸ್ ಬ್ಯಾಕ್ ಚಿತ್ರದ ಟ್ರೈಲರ್ ಈಗಾಗಲೇ ಯೂಟ್ಯೂಬ್ ನಲ್ಲಿ ವೈರಲ್ ಆಗಿದೆ. ಚಿತ್ರದಲ್ಲಿ ತಮಿಳು ನಟ ಪಾರ್ಥಿಬನ್ ಗೊಂಬೆಗಳ ಲವ್ ಚಿತ್ರದ ನಟ ಅರುಣ್, ಅಜಯ್ ಶ್ರಾವ್ಯ ನಟಿಸಿದ್ದಾರೆ.
ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಕಿಚ್ಚ ಸುದೀಪ್ ಚಿತ್ರ ಉತ್ತಮ ಪ್ರದರ್ಶನ ಕಾಣಲಿ ಎಂದು ಹಾರೈಸಿದರು.