ಸಿನಿಮಾ ಸುದ್ದಿ

'ಗಿರಿಜಾ ಕಲ್ಯಾಣ'ನ ನಂತರ 'ಪತ್ತೆದಾರಿ ಪ್ರತಿಭಾ' ನಿರ್ದೇಶನಕ್ಕಿಳಿದ ನವೀನ್ ಕೃಷ್ಣ

Guruprasad Narayana
ಬೆಂಗಳೂರು: ಬೆಳ್ಳಿತೆರೆಯ ನಟರು ಟಿವಿ ಧಾರಾವಾಹಿಗಳನ್ನು ನಿರ್ದೇಶಿಸುವುದು ಅಥವಾ ನಟಿಸುವುದು ಅಪರೂಪ. ಆದರೆ ನಟ ನವೀನ್ ಕೃಷ್ಣ ಅಂತಹ ಯಾವುದೇ ನಿರ್ಬಂಧನೆಗಳನ್ನು ಹಾಕಿಕೊಂಡಿಲ್ಲ. ಈ ಹಿಂದೆ 'ಗಿರಿಜಾ ಕಲ್ಯಾಣ' ಧಾರಾವಾಹಿಯನ್ನು ನಿರ್ದೇಶಿಸಿದ್ದ ಅವರು ಈಗ 'ಪತ್ತೇದಾರಿ ಪ್ರತಿಭಾ' ನಿರ್ದೇಶನಕ್ಕೆ ಮುಂದಾಗಿದ್ದಾರೆ. 
"ನಿಜ ಹೇಳಬೇಕೆಂದರೆ, 'ಆಕ್ಟರ್' ಸಿನೆಮಾದ ನಂತರ ನನಗೆ ಯಾವುದೇ ಅವಕಾಶಗಳು ದೊರಕಲಿಲ್ಲ. ನನಗೆ ನಿರ್ದೇಶನದಲ್ಲಿ ಯಾವತ್ತಿಗೂ ಆಸಕ್ತಿ ಇತ್ತು ಮತ್ತು ಟಿವಿ ಧಾರಾವಾಹಿಯ ನಿರ್ದೇಶನದ ಅವಕಾಶ ಸಿಕ್ಕಿತು. ಮೊದಲಿಗೆ ಸಾಮಾಜಿಕ-ಪುರಾಣ ವಿಷಯಾಧಾರಿತ ಧಾರಾವಾಹಿ ನಿರ್ದೇಶನ ಸವಾಲಾಗಿತ್ತು. ಆದರೆ ನಿರ್ದೇಶಕನಾಗಿ ನನಗೆ ಇದು ಒಳ್ಳೆಯ ಅನುಭವ ಎನಿಸಿತು. 
"ಈ ಧಾರಾವಾಹಿ ಮುಗಿಯುವ ಹೊತ್ತಿಗೆ ನನ್ನ ಮುಂದಿನ ನಡೆಯ ಬಗ್ಗೆ ಚಿಂತಿಸುತ್ತಿದ್ದೆ. ಮತ್ತಾಗ ನನಗೆ 'ಪತ್ತೇದಾರಿ ಪ್ರತಿಭಾ' ಒಲಿದು ಬಂತು. ಈ ಪ್ರಕಾರಕ್ಕಾಗಿ ನಾನು ಒಪ್ಪಿಕೊಂಡೆ. ಇದು ಮಾಮೂಲಿ ಅತ್ತೆ-ಸೊಸೆ ಜಗಳವಲ್ಲ ಬದಲಾಗಿ ತನಿಖೆಯ ಕಥೆಗಳುಳ್ಳ ಕೌಟುಂಬಿಕ ಡ್ರಾಮಾ. ಕುಟುಂಬದ ಒಬ್ಬ ಮಹಿಳೆ ಪತ್ತೇದಾರಿ ಕೂಡ ಆಗಿರುತ್ತಾಳೆ. ಈ ಬೆರಕೆ ಬಹಳ ಆಸಕ್ತಿದಾಯಕವಾಗಿ ಕಂಡುಬಂತು" ಎಂದು ತಿಳಿಸುವ ನವೀನ್ ೧೫ ಕಂತುಗಳನ್ನು ಆಗಲೇ ಪೂರೈಸಿದ್ದಾರಂತೆ. ಇದು ಸಿನೆಮಾ ಅನುಭವವನ್ನೇ ನೀಡಿದ್ದಾಗಿ ತಿಳಿಸುತ್ತಾರೆ. 
"ನಾನು ಧಾರಾವಾಹಿಗಳಿಗೆ ಸಿನೆಮಾ ಅನುಭವವನ್ನು ತಂದುಕೊಡಲು ಇಚ್ಛಿಸುತ್ತೇನೆ" ಎನ್ನುವ ಅವರು "ನನಗೆ ನಟನೆಗಿಂತಲೂ ನಿರ್ದೇಶನ ಹೆಚ್ಚಿನ ತೃಪ್ತಿ ನೀಡುತ್ತಿದೆ. ಬರವಣಿಗೆ, ಸಂಭಾಷಣೆ ಮುಂತಾದ ವಿಭಾಗಗಳಲ್ಲಿ ಕೆಲಸ ಮಾಡಿದ ಮೇಲೆ ಈಗ ನಿರ್ದೇಶನಕ್ಕೆ ಇಳಿದಿರುವುದು ಖುಷಿ ತಂದಿದೆ" ಎನ್ನುತ್ತಾರೆ. 
SCROLL FOR NEXT