ಬೆಂಗಳೂರು: ನಟನೆಗೆ ಮತ್ತೆ ವಾಪಸಾಗಿರುವ ಶುಭ ಪೂಂಜಾ, ಆಕರ್ಷಕವಾಗಿಯೂ ಹಿಂದಿರುಗಿದ್ದಾರೆ. ಒಂದರ ಹಿಂದೆ ಒಂದಂತೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ನಟಿ ಬ್ಯುಸಿಯಾಗಿಯೂ ಇದ್ದಾರೆ.
'ನವೆಂಬರ್ ೧೯' ಮತ್ತು ಕೃಷ್ಣ ನಿರ್ದೇಶನದ ಹಾಸ್ಯ ಚಿತ್ರ 'ತಾತನ ತಿಥಿ ಮೊಮ್ಮಗನ ಪ್ರಸ್ಥ' ಸಿನೆಮಾಗಳನ್ನು ಪೂರೈಸಿರುವ ನಟಿ ಆಗಲೇ ಹೊಸ ಸಿನೆಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಹೆಸರಿಡದ ಈ ಚಿತ್ರವನ್ನು ರಾಜ್ ಶೇಖರ್ ನಿರ್ದೇಶಿಸುತ್ತಿದ್ದು, ವಿಜಯ್ ರಾಘವೇಂದ್ರ ಎದುರು ಶುಭ ನಟಿಸುತ್ತಿದ್ದಾರೆ. ಎಚ್ ಎಲ್ ಎಂ ರಾಜ್ ನಿರ್ದೇಶನದ ಈ ಚಿತ್ರದಲ್ಲಿ ರಿತೀಕ್ಷ ಕೂಡ ಶುಭ ಜೊತೆಗೆ ನಟಿಸಿದ್ದಾರೆ. "ಇದು ವಿಜಯ್ ಜೊತೆಗೆ ನನ್ನ ಎರಡನೇ ಚಿತ್ರ. 'ಗೋಲ್ ಮಾಲ್' ಸಿನೆಮಾದ ನಂತರ ಏಳು ವರ್ಷದ ಬಳಿಗೆ ಈಗ ಮತ್ತೆ ಒಟ್ಟಿಗೆ ನಟಿಸುತ್ತಿದ್ದೇವೆ. ನಾವಿಬ್ಬರು ದೀರ್ಘ ಸಮಯದಿಂದ ಅತ್ಯುತ್ತಮ ಗೆಳೆಯರು ಆದುದರಿಂದ ತೆರೆಯ ಮೇಲಿನ ನಮ್ಮಿಬ್ಬರ ಕೆಮಿಸ್ಟ್ರಿ ಕ್ಷೀಣಿಸಿಲ್ಲ" ಎನ್ನುತ್ತಾರೆ ಶುಭ.
'ಮೊಗ್ಗಿನ ಮನಸ್ಸು' ಸಿನೆಮಾದ ಮೂಲಕ ತಮ್ಮ ವೃತ್ತಿಜೀವನ ಆರಂಭಿಸಿದ್ದ ಶುಭ, ತೆಳ್ಳಗಾಗಲು ಈಗ ತಮ್ಮ ಸಮಯ ಮತ್ತು ಶ್ರಮವನ್ನು ತೊಡಗಿಸಿಕೊಂಡಿದ್ದರು. ತಮ್ಮ ದೇಶದ ಬಗ್ಗೆ ಆತ್ಮವಿಶ್ವಾಸ ವ್ಯಕ್ತಪಡಿಸಿರುವ ಅವರು "ನಾನು ಶುಭ ಪುಂಜಾಳಾಗಿ ಇರಬಯಸುತ್ತೇನೆ. ನನ್ನ ಗ್ಲಾಮ್ ಅಂಶವನ್ನು ನನಗೆ ಕಳೆದುಕೊಳ್ಳಲು ಇಷ್ಟವಿಲ್ಲ" ಎನ್ನುತ್ತಾರೆ.
ಹಾಗೆಯೇ ಹಾರರ್ ಥ್ರಿಲ್ಲರ್ ಸಿನೆಮಾವೊಂದರಲ್ಲಿ ಕೂಡ ಶುಭ ನಟಿಸುತ್ತಿದ್ದು, ಇದರ ಬಗ್ಗೆ ಹೆಚ್ಚಿನ ವಿವರಗಳು ತಿಳಿಯಬೇಕಿದೆ.