ಸಿನಿಮಾ ಸುದ್ದಿ

ಸಿನಿಮಾ ಪ್ರಿಯರ ನೆಚ್ಚಿನ 'ಕಪಾಲಿ' ಥಿಯೇಟರ್ ಶೀಘ್ರವೇ ನೆಲಸಮ

Shilpa D
ಬೆಂಗಳೂರು: ಸುಮಾರು 50 ವರ್ಷಗಳಿಗೂ ಹೆಚ್ಚಿನ ಸಮಯ ಸಿನಿ ಪ್ರೇಕ್ಷಕರನ್ನು ರಂಜಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಬೆಂಗಳೂರಿನ ಕಪಾಲಿ ಥಿಯೇಟರ್ ಶೀಘ್ರವೇ ನೆಲಸಮವಾಗಲಿದೆ. ಕಪಾಲಿ ಥಿಯೇಟರ್ ಇದ್ದ ಜಾಗದಲ್ಲಿ ಮಾಲ್ ನಿರ್ಮಾಣವಾಗಲಿದೆ.
1968ರಲ್ಲಿ ಮೂರಾರ್ಜಿ ದೇಸಾಯಿ ಅವರಿಂದ ಉದ್ಘಾಟನೆಗೊಂಡಿದ್ದ ಕಪಾಲಿ ಥಿಯೇಟರ್ 1500 ಸೀಟ್ ಕೆಪಾಸಿಟಿ ಹೊಂದಿದ್ದು, ಏಷ್ಯಾದ ಅತಿದೊಡ್ಡ ಥಿಯೇಟರ್ ಎನಿಸಿಕೊಂಡಿತ್ತು.  ಡಾ. ರಾಜ್‍ಕುಮಾರ್ ಅಭಿನಯದ ಮಣ್ಣಿನ ಮಗ ಚಿತ್ರ ಕಪಾಲಿಯಲ್ಲಿ ಶತದಿನೋತ್ಸವ ಆಚರಿಸಿದ ಮೊದಲ ಚಿತ್ರವಾಗಿತ್ತು. 
ಚಿತ್ರಮಂದಿರದ ಜಾಗವನ್ನು ಮಾಲೀಕರಾದ ದಾಸಪ್ಪ ಸಹೋದರರು, ಬೆಳಗಾವಿಯ ಉದ್ಯಮಿಯೊಬ್ಬರಿಗೆ ಮಾರಾಟ ಮಾಡಿದ್ದಾರೆ. ಮುಂಗಡ ಹಣವನ್ನೂ ಪಡೆದುಕೊಂಡಿದ್ದಾರೆ.
ಕಾಗದ ಪತ್ರಗಳ ವರ್ಗಾವಣೆ ಮಾತ್ರ ಬಾಕಿ ಇದ್ದು, ಅದು ಪೂರ್ಣಗೊಂಡ ಬಳಿಕ ಚಿತ್ರಮಂದಿರದ ನೆಲಸಮ ಕೆಲಸ ಆರಂಭವಾಗಲಿದೆ. ಮಾಲ್‌ ನಿರ್ಮಾಣ ಕೆಲಸ ಶುರುವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಹಂಚಿಕೆದಾರ ಜಯಣ್ಣ,ಈ ಚಿತ್ರಮಂದಿರವನ್ನು 5 ವರ್ಷಗಳವರೆಗೆ ಗುತ್ತಿಗೆ ಪಡೆದಿದ್ದರು. ಅದರ ಅವಧಿ ಸಹ ಇದೇ ತಿಂಗಳು ಮುಕ್ತಾಯವಾಗಲಿದೆ. ಏಷ್ಯಾದಲ್ಲೇ ಮೊದಲ ಬಾರಿಗೆ ‘ಸಿನೆರಾಮ್‌ ತಂತ್ರಜ್ಞಾನ’ ಅಳವಡಿಸಿಕೊಂಡ ಹೆಗ್ಗಳಿಕೆ ಈ ಥಿಯೇಟರ್ ಗಿದೆ. 
SCROLL FOR NEXT