ದುನಿಯಾ ವಿಜಯ್-ಜೂನಿಯರ್ ಎನ್ ಟಿ ಆರ್
ಬೆಂಗಳೂರು: ತಮ್ಮ ವೃತ್ತಿಯ ಬಗ್ಗೆ ಧೃಢ ನಂಬಿಕೆ ಮತ್ತು ಶ್ರಮ ನಟ ದುನಿಯಾ ವಿಜಯ್ ಅವರನ್ನು ಎತ್ತರಕ್ಕೆ ಕೊಂಡೊಯ್ದಿದೆ. ಈಗ ಪಕ್ಕದ ಸಿನೆಮಾರಂಗದಿಂದಲೂ ಪ್ರಶಂಸೆಯನ್ನು ಗಳಿಸಿದ್ದಾರೆ ನಟ. ಈಗ ದುನಿಯಾ ವಿಜಯ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವವರು ತೆಲುಗಿನ ಖ್ಯಾತ ನಟ ಜೂನಿಯರ್ ಎನ್ ಟಿ ಆರ್. ಕನ್ನಡ ನಟನ ಅತಿ ದೊಡ್ಡ ಅಭಿಮಾನಿ ಅವರು ಮತ್ತು ವಿಜಯ್ ಅವರನ್ನು ಶಕ್ತಿಯುತ ನಟನಾಗಿ ಅವರು ಪರಿಗಣಿಸಿದ್ದಾರೆ ಎಂದು ತಿಳಿದುಬಂದಿದೆ.
ಇದೆ ವಿಷಯಕ್ಕೆ, ಎನ್ ಟಿ ಆರ್ ತಮ್ಮ ಮುಂದಿನ ಸಿನೆಮಾ 'ಜೈ ಲವ ಕುಶ' ಸಿನೆಮಾದಲ್ಲಿ ದುನಿಯಾ ವಿಜಯ್ ಅವರನ್ನು ತೊಡಗಿಸಿಕೊಳ್ಳಲು ಆಸಕ್ತಿ ತೋರಿದ್ದಾರಂತೆ. ಇದರಲ್ಲಿ ವಿಜಯ್ ಖಳನಾಯಕನ ಪಾತ್ರ ನಿರ್ವಹಿಸಲಿದ್ದಾರೆ. ವಿಜಯ್ ನಿಕಟವರ್ತಿಯೊಬ್ಬರು ಹೇಳುವಂತೆ "ಮೊದಲಿಗೆ ತೆಲುಗು ಸಿನೆಮಾದಲ್ಲಿ ನಟಿಸಲು ವಿಜಯ್ ಅವರಿಗೆ ಆಸಕ್ತಿ ಇರಲಿಲ್ಲ ಆದರೆ ಎನ್ ಟಿ ಆರ್ ವೈಯಕ್ತಿಕವಾಗಿ ಕರೆ ಮಾಡಿ, ಅವರ ದಕ್ಷತೆಯನ್ನು ಪ್ರಶಂಸಿಸಿ ತಮ್ಮ ಜೊತೆ ನಟಿಸಬೇಕು ಎಂದು ಕೇಳಿಕೊಂಡಾಗ ಇಲ್ಲ ಎಂದು ಹೇಳಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ವಿಜಯ್ ೧೫ ದಿನಗಳ ಸಮಯ ನೀಡಿದ್ದು, ಎರಡು ಮುಖ್ಯ ಆಕ್ಷನ್ ದೃಶ್ಯಗಳ ಭಾಗವಾಗಲಿದ್ದಾರೆ" ಎನ್ನುತ್ತಾರೆ.
ಎನ್ ಟಿ ಆರ್ ವೈಯಕ್ತಿಕವಾಗಿ ವಿಜಯ್ ಅವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲವಾದರೂ, ಅವರ ದಾಯಾದಿಯೊಬ್ಬರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರಂತೆ. "ವಿಜಯ್ ಅವರ ಇತ್ತೀಚಿನ ಚಿತ್ರಗಳಾದ 'ಮಾಸ್ತಿ ಗುಡಿ' ಮತ್ತು 'ಕನಕ'ದ ಕೆಲವು ಸ್ಟಿಲ್ ಗಳನ್ನು ಎನ್ ಟಿ ಆರ್ ನೋಡಿದ್ದಾರೆ ಮತ್ತು ನಟನ ಸಿಕ್ಸ್ ಪ್ಯಾಕ್ ದೇಹ ಅವರನ್ನು ಆಕರ್ಷಿಸಿದೆ ಮತ್ತು ಕೆಲವು ದೃಶ್ಯಗಳಿಗೆ ಅವರೇ ಸೂಕ್ತ ಎಂಬುದು ಎನ್ ಟಿ ಆರ್ ಅಭಿಮತ" ಎಂದು ತಿಳಿಸುತ್ತವೆ ಮೂಲಗಳು.
ಬಾಬಿ ನಿರ್ದೇಶನದ 'ಜೈ ಲವ ಕುಶ' ಸಿನೆಮಾದ ಮೋಷನ್ ಪೋಸ್ಟರ್ ಅನ್ನು ನಿರ್ಮಾಪಕರು ರಾಮನವಮಿಯ ದಿನ ಬಿಡುಗಡೆ ಮಾಡಿದ್ದರು. ನಂತರ ಎನ್ ಟಿ ಆರ್ ದುನಿಯಾ ವಿಜಯ್ ಜೊತೆಗೆ ಮಾತನಾಡಿದ್ದಾರೆ ಎನ್ನಲಾಗಿದೆ. ಇನ್ನು ಅಧಿಕೃತ ಘೋಷಣೆಯಾಗಬೇಕಿದ್ದರು, ದುನಿಯಾ ವಿಜಯ್ ಸಿನೆಮಾದ ಭಾಗವಾಗಲಿದ್ದಾರೆ ಎನ್ನುತ್ತವೆ ಮೂಲಗಳು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos