ಚಿರಂಜೀವಿ ಮತ್ತು ಬಾಲಕೃಷ್ಣ ಇವರಿಂದ ಟಿ ಎಸ್ ಆರ್ ಪ್ರಶಸ್ತಿ ಸ್ವೀಕರಿಸಿದ ನಿಖಿಲ್ 
ಸಿನಿಮಾ ಸುದ್ದಿ

'ಜಾಗ್ವಾರ್' ಸಿನಿಮಾಗಾಗಿ ಅತ್ಯುತ್ತಮ ಪಾದಾರ್ಪಣ ನಟ ಪ್ರಶಸ್ತಿ ಸ್ವೀಕರಿಸಿದ ನಿಖಿಲ್

'ಜಾಗ್ವಾರ್' ಸಿನೆಮಾದ ಕನ್ನಡ ಮತ್ತು ತೆಲುಗು ಅವತರಿಣಿಕೆಯಲ್ಲಿ ಪಾದಾರ್ಪಣೆ ಮಾಡಿದ ನಟ ನಿಖಿಲ್ ಕುಮಾರ್ ಅವರಿಗೆ ಅತ್ಯುತ್ತಮ ಪಾದಾರ್ಪಣ ನಟ- ಟಿ ಎಸ್ ಆರ್ (ಟಿ ಸುಬ್ರಮಣ್ಯ ರೆಡ್ಡಿ) ಪ್ರಶಸ್ತಿ ದೊರಕಿದೆ.

ಬೆಂಗಳೂರು: 'ಜಾಗ್ವಾರ್' ಸಿನೆಮಾದ ಕನ್ನಡ ಮತ್ತು ತೆಲುಗು ಅವತರಿಣಿಕೆಯಲ್ಲಿ ಪಾದಾರ್ಪಣೆ ಮಾಡಿದ ನಟ ನಿಖಿಲ್ ಕುಮಾರ್ ಅವರಿಗೆ  ಅತ್ಯುತ್ತಮ ಪಾದಾರ್ಪಣ ನಟ- ಟಿ ಎಸ್ ಆರ್ (ಟಿ ಸುಬ್ರಮಣ್ಯ ರೆಡ್ಡಿ) ಪ್ರಶಸ್ತಿ ದೊರಕಿದೆ. ಶನಿವಾರ ವೈಜಾಗ್ ನಲ್ಲಿ ನಡೆದ ಸಮಾರಂಭದಲ್ಲಿ ನಿಖಿಲ್, ತೆಲುಗು ನಟರಾದ ಚಿರಂಜೀವಿ ಮತ್ತು ಬಾಲಕೃಷ್ಣ ಅವರಿಂದ ಪ್ರಶಸ್ತಿ ಪಡೆದಿದ್ದಾರೆ. 
ಈ ಪ್ರಶಸ್ತಿ ಪಡೆದು ಸಂತಸರಾಗಿರುವ ನಿಖಿಲ್ "ನನ್ನ ಶ್ರಮವನ್ನು ಗುರುತಿಸಿರುವುದಕ್ಕೆ ನನಗೆ ನಂತಸವಾಗಿದೆ. ಕೊನೆಗೆ ಜನರೇ ಎಲ್ಲವನ್ನು ನಿರ್ಧರಿಸುವವರು" ಎಂದಿದ್ದಾರೆ. 
ತೆಲುಗಿನ ಜನಪ್ರಿಯ ನಟರೊಂದಿಗೆ ವೇದಿಕೆ ಹಂಚಿಕೊಂಡದ್ದಕ್ಕೆ ಖುಷಿಯಾಗರುವ ನಿಖಿಲ್, ವೈಜಾಗ್ ಜನ ಅವರನ್ನು ಗುರುತಿಸಿ 'ಜಾಗ್ವಾರ್'-'ಜಾಗ್ವಾರ್' ಎಂದು ಮಂತ್ರಘೋಷ ಮೊಳಗಿಸಿದ್ದನ್ನು ನೆನಪಿಸಿಕೊಳ್ಳುತ್ತಾರೆ. "ನನ್ನ ಸಿನೆಮಾ ಬಿಡುಗಡೆಯ ನಂತರ ಈ ಜಾಗಕ್ಕೆ ನಾನು ಭೇಟಿ ಕೊಟ್ಟಿರಲಿಲ್ಲ. ಆದರೆ ಅವರು ನನ್ನ ಸಿನೆಮಾವನ್ನು ನೆನಪಿಸಿಕೊಂಡು ಗುರುತಿಸಿದರು ಮತ್ತು ಇದಕ್ಕೆ ನಾನು ಸಂತಸಗೊಂಡಿದ್ದೇನೆ" ಎನ್ನುತ್ತಾರೆ. 
ಚೇತನ್ ಕುಮಾರ್ ನಿರ್ದೇಶನದ ನೂತನ ಚಿತ್ರಕ್ಕೆ ನಿಖಿಲ್ ಸಿದ್ಧರಾಗುತ್ತಿದ್ದಾರೆ. "ನಾನು ಪ್ರತಿ ಸಿನೆಮಾದೊಂದಿಗೆ ಉತ್ತಮಗೊಳ್ಳಲಿದ್ದೇನೆ" ಎನ್ನುತ್ತಾರೆ ನಟ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel