ಬೆಂಗಳೂರು: 'ಲೈಫು ಇಷ್ಟೇನೆ' ಸಿನೆಮಾದ ನಟಿ ಸಂಯುಕ್ತ ಹೊರನಾಡ್ ಕೇವಲ ಸಾಂಪ್ರದಾಯಿಕ ಮಾಧ್ಯಮಕ್ಕೆ ಅಂಟಿಕೊಳ್ಳದೆ ಹೊಸದನ್ನು ಅನ್ವೇಷಿಸುತ್ತಿರುತ್ತಾರೆ. ಚಿತ್ರ ಬಿಡಿಸುವುದು, ಫೋಟೋಗ್ರಫಿ ಇತ್ಯಾದಿ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ನಟಿ ಸದ್ಯಕ್ಕೆ 'ಕಾಫಿ ತೋಟ', 'ದಯವಿಟ್ಟು ಗಮನಿಸು', 'ಸರ್ಕಾರಿ ಕೆಲಸ ದೇವರ ಕೆಲಸ' ಮುಂತಾದ ಸಿನಿಮಾಗಳಲ್ಲೂ ಕೂಡ ನಟಿಸಿದ್ದಾರೆ.
ಅರವಿಂದ್ ಕಾಮತ್ ಅವರ ಚೊಚ್ಚಲ ನಿರ್ದೇಶನದ ಕ್ರೈಮ್ ಥ್ರಿಲ್ಲರ್ ಗೆ ಕೂಡ ನಟಿ ಸಿದ್ಧರಾಗುತ್ತಿದ್ದಾರೆ. ಇದಕ್ಕಾಗಿ ಅವರು ನಾಳೆ ಕಾರ್ಯಾಗಾರದಲ್ಲಿ ಭಾಗಿಯಾಗುತ್ತಿದ್ದಾರೆ. ಹಾಗೆಯೇ ಅಂತರ್ಜಾಲ ಬಿಡುಗಡೆಗಾಗಿಯೇ ನಿರ್ಮಿಸಲಾಗಿರುವ ಎರಡು ತಮಿಳು ಸಿನೆಮಾಗಳಲ್ಲಿ ನಟಿಸಿರುವುದಕ್ಕೂ ಉತ್ಸುಕರಾಗಿರುವ ಸಂಯುಕ್ತ ಇವುಗಳು ಮಲ್ಟಿಪ್ಲೆಸ್ ಬಿಡುಗಡೆ ಕಾಣುವ ಸಾಧ್ಯತೆಯಿದೆ ಎಂದು ಕೂಡ ತಿಳಿಸುತ್ತಾರೆ.
"ಈ ಎರಡು ಸಿನೆಮಾಗಳ ಬಗ್ಗೆ ಹೆಚ್ಚು ವಿವರಗಳನ್ನು ನೀಡುವಂತಿಲ್ಲ. ಆದರೆ ಇದು ದಿಟ್ಟ ವಿಷಯವನ್ನು ಚರ್ಚಿಸಿದೆ ಎಂದು ಹೇಳಬಲ್ಲೆ. ಇವುಗಳು 'ಎ' ಪ್ರಮಾಣಪತ್ರ ಪಡೆದಿರುವ ಸಿನೆಮಾ ಆಗಿದ್ದು, ವಿಚಿತ್ರ ಸಂಬಂಧಗಳ ಬಗ್ಗೆ ಚರ್ಚಿಸುತ್ತವೆ" ಎನ್ನುವ ಸಂಯುಕ್ತ "ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಕೂಡ ಈ ಸಿನೆಮಾಗಳು ಭಾಗವಹಿಸುವ ಸಾಧ್ಯತೆಯಿದೆ" ಎಂದಿದ್ದಾರೆ.
ಹೊಸದರ ಅನ್ವೇಷಣೆ ತಮಗೆ ಹೆಚ್ಚು ಸಂತಸ ನೀಡುತ್ತದೆ ಎಂದು ತಿಳಿಸುವ ನಟಿ "ನಾನು ಸಾಕಷ್ಟು ಪ್ರವಾಸ ಮಾಡುತೇನೆ ಮತ್ತು ನಾನು ಆಳಿದ ಮೇಲು ಉಳಿದುಕೊಳ್ಳುವ ಕೆಲಸ ಮಾಡಬೇಕೆಂಬ ಆಸೆ ಇದೆ. ಆದರೆ ನನಗೆ ಹುಚ್ಚಾಟ ಆಡುವುದಕ್ಕೆ ಇಷ್ಟ ಮತ್ತು ನನಗೆ ನಾನೇ ತಮಾಷೆ ಮಾಡಿಕೊಳ್ಳುತ್ತಿರುತ್ತೇನೆ" ಎನ್ನುತ್ತಾರೆ.