ಸಿನಿಮಾ ಸುದ್ದಿ

ಸತ್ಯರಾಜ್ ಮೇಲಿನ ಕೋಪವನ್ನು 'ಬಾಹುಬಲಿ' ಮೇಲೆ ತೋರಿಸುವುದು ಸರಿಯಲ್ಲ: ರಾಜಮೌಳಿ

Manjula VN
ಚೆನ್ನೈ: ಕನ್ನಡಿಗರು ಸತ್ಯರಾಜ್ ಮೇಲಿನ ಕೋಪವನ್ನು 'ಬಾಹುಬಲಿ' ಚಿತ್ರದ ಮೇಲೆ ತೋರಿಸುವುದು ಸರಿಯಲ್ಲ ಎಂದು ನಿರ್ದೇಶಕ ರಾಜಮೌಳಿಯವರು ಹೇಳಿದ್ದಾರೆ.
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡಿಗ ವಿರೋಧಿ ಹೇಳಿಕೆ ನೀಡಿದ್ದಾರೆನ್ನಲಾದ 'ಬಾಹುಬಲಿ' ಚಿತ್ರ ಖ್ಯಾತಿಯ ನಟ ಸತ್ಯರಾಜ್ ವಿರುದ್ಧ ಕನ್ನಡಪರ ಸಂಘಟನೆಗಳು ಇತ್ತೀಚೆಗೆ ದನಿಯೆತ್ತಿ, ಏ.28 ಕಂಜು ಬಿಡುಗಡೆಯಾಗಬೇಕಿರುವ 'ಬಾಹುಬಲಿ-2' ಚಿತ್ರವು ಕರ್ನಾಟಕದಲ್ಲಿ ಬಿಡುಗಡೆಯಾಗಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದವು. 
ಈ ಹಿನ್ನಲೆಯಲ್ಲಿ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಬರುತ್ತಿರುವ ಪ್ರತಿಕ್ರಿಯೆಗಳು ನನಗೆ ಸಾಕಷ್ಟು ಆಘಾತವನ್ನು ತರಿಸಿದೆ. ಕತ್ಯಾರಾಜ್ ಅವರು ನನ್ನ ಜೊತೆ 5 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಸತ್ಯರಾಜ್ ನೀಡಿದ್ದಾರೆನ್ನಲಾದ ಹೇಳಿಗೆ ಬಗ್ಗೆ ನಾವು ವಿಚಾರಣೆ ಆರಂಭಿಸಿದಾಗ ಆದು 9 ವರ್ಷದ ಹಿಂದೆ ನೀಡಿದ ಹೇಳಿಕೆ ಎಂದು ತಿಳಿದುಬಂದಿತ್ತು. ಇದಾದ ಬಳಿಕ ಸತ್ಯರಾಜ್ ಅವರ 30 ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆಯಾಗಿದೆ. ಬಾಹುಬಲಿ-1 ಕೂಡ ಬಿಡುಗಡೆಯಾಗಿದೆ. ಆಗ ಈ ಬಗ್ಗೆ ಯಾರೂ ತಕರಾರು ಎತ್ತಿರಲಿಲ್ಲ. ಈಗ ಏಕಾಏಕಿ ತಕಾರರು ಎತ್ತಲಾಗುತ್ತಿದೆ ಎಂದು ಹೇಳಿದ್ದಾರೆ. 
ಸತ್ಯರಾಜ್ ಅವರು ನಟಿಸಿದ್ದಾರೆಂಬ ಮಾತ್ರಕ್ಕೆ ಬಾಹುಬಲಿ-2 ಪ್ರದರ್ಶನಕ್ಕೆ ತಡೆ ನೀಡುವುದು ಸರಿಯಲ್ಲ. ಸತ್ಯರಾಜ್ ಅವರು ಬಾಹುಬಲಿ-2 ಚಿತ್ರದ ನಿರ್ದೇಶಕ, ನಿರ್ಮಾಪಕಸ ಹೀರೋ ಅಲ್ಲ. ಅವರು ಈ ಚಿತ್ರದಲ್ಲಿ ನಟಿಸಿದರು. ಸಂಭಾವನೆ ಪಡೆದು ಹೊರಟು ಹೋದರು. ಹೀಗಾಗಿ ಬಾಹುಬಲಿ-2 ವಿರುದ್ಧ ಜನರು ಪ್ರತಿಭಟಿಸಿದರೆ ಅದರಿಂದ ಸತ್ಯರಾಜ್ ಅವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಜನರು ಈ ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. 
SCROLL FOR NEXT