ಬೆಂಗಳೂರು: ಕಿರುತೆರೆ ಈ ನಟಿಗೆ ಲಕ್ಕಿಯಾಗಿತ್ತು. 'ಕಾಮಿಡಿ ಕಿಲಾಡಿಗಳು' ಎಂಬ ರಿಯಾಲಿಟಿ ಕಾರ್ಯಕರ್ಮದಲ್ಲಿ ಎಲ್ಲರನ್ನು ನಕ್ಕುನಗಿಸಿದ ನಯನ ಈಗ ಕನ್ನಡ ಚಿತ್ರರಂಗದ ಬೆಳ್ಳಿ ತೆರೆಗೆ ಹೊಸ ಎಂಟ್ರಿ. ಇವರಿಗೆ ಕನ್ನಡ ನಿರ್ಮಾಪಕರಿಂದ ಹಲವು ಅವಕಾಶಗಳು ಹರಿದುಬಂದಿದ್ದರು, ಹಾಸ್ಯ ಚಿತ್ರ 'ಜಂತರ್ ಮಂತರ್'ನಿಂದ ಪ್ರಾರಂಭಿಸಲು ಸಿದ್ಧರಾಗುತ್ತಿದ್ದಂತೆಯೇ, ಯಶ್ ನಟನೆಯ 'ಕೆಜಿಎಫ್' ಸಿನೆಮಾದಲ್ಲಿ ಕೂಡ ವಿಶೇಷ ಪಾತ್ರವಾಗನ್ನು ಗಳಿಸಿರುವುದು ವಿಶೇಷ.
ಯಶ್ ಅವರನ್ನು ಹೊರತುಪಡಿಸಿದರೆ, ನಿರ್ದೇಶಕ ಪ್ರಶಾಂತ್ ನೀಲ್ ಪರಿಗಣಿಸಿರುವ ಹಿರಿಯ ನಟರು ಕೂಡ ಬೆಳ್ಳಿ ತೆರೆಗೆ ಹೊಸಬರೇ ಎಂದು ತಿಳಿದುಬಂದಿದೆ. ಯಾವ ನಟರು ತಮ್ಮ ಪಾತ್ರದ ಬಗ್ಗೆ ಹೇಳಿಕೊಳ್ಳುವಂತಿಲ್ಲ ಎಂದು ನಿರ್ದೇಶಕರು ಕರಾರು ಹಾಕಿದ್ದು "ಇದು ವಿಶೇಷ ಪಾತ್ರ" ಎನ್ನುವದನ್ನು ಬಿಟ್ಟರೆ ನಯನ ಹೆಚ್ಚೇನನ್ನೂ ಹೇಳಲು ನಿರಾಕರಿಸುತ್ತಾರೆ.
'ಕೆಜೆಎಫ್' ಚಿತ್ರೀಕರಣ ಸದ್ಯಕ್ಕೆ ಜಾರಿಯಲ್ಲಿದ್ದು, ನಟಿ ಶೀಘ್ರದಲ್ಲೇ ಸಿನೆಮಾ ಸೆಟ್ ಸೇರಲಿದ್ದಾರೆ. ಹೊಂಬಾಳೆ ಫಿಲಂಸ್ ಅದ್ದೂರಿ ಬಜೆಟ್ ನಲ್ಲಿ ಈ ಸಿನೆಮಾ ನಿರ್ಮಿಸುತ್ತಿದೆ. ರವಿ ಬಸರೂರ್ ಸಂಗೀತ ನೀಡುತ್ತಿದ್ದು, ಭುವನ್ ಗೌಡ ಅವರ ಸಿನೆಮ್ಯಾಟೋಗ್ರೋಫಿ ಚಿತ್ರಕ್ಕಿದೆ.