ಮುಂಬಯಿ: ತಮ್ಮ ಅಭಿಮಾನಿಗಳಿಗಾಗಿ ಇತ್ತೀಚೆಗೆ ಹೊಸ ಆ್ಯಪ್ ವೊಂದನ್ನು ಪೂನಂ ಪಾಂಡೆ ಬಿಡುಗಡೆ ಮಾಡಿದ್ದರು, ಆದರೆ ಆ ಆ್ಯಪ್ ಅನ್ನು ಗೂಗಲ್ ನಿಷೇಧಿಸಿದೆ.
ಏಪ್ರಿಲ್ 17 ರಂದು ಪೂನಂ ಪಾಂಡೆ ಹೊಸ ಆ್ಯಪ್ ಬಿಡುಗಡೆಗೊಳಿಸಿದ್ದರು, ಪ್ಲೇ ಸ್ಟೋರ್ ಮತ್ತು ಆ್ಯಪ್ ಸ್ಟೋರ್ ಗಳಲ್ಲಿ ಹಲವು ವಯಸ್ಕರ ಮ್ಯಾಗಝೀನ್ ಗಳನ್ನು ನಾನು ನೋಡಿದ್ದೇನೆ, ನನಗೆ ಗೊತ್ತಿಲ್ಲ, ಗೂಗಲ್ ನನ್ನ ಆ್ಯಪ್ ಏಕೆ ನಿಷೇದಿಸಿದೆ, ಅದರಲ್ಲಿ ಯಾವುದೇ ಬೆತ್ತಲೆ ಫೋಟೋಗಳನ್ನು ನಾನು ಹಾಕಿಲ್ಲ, ಅಭಿಮಾನಿಗಳು ಆ್ಯಪ್ ಲಭ್ಯವಾಗುತ್ತಿಲ್ಲ ಎಂದು ದೂರುತ್ತಿದ್ದಾರೆ ಎಂದು ಪೂನಂ ಪಾಂಡೆ ಹೇಳಿದ್ದಾರೆ.
ಗೂಗಲ್ ನನ್ನ ಆ್ಯಪ್ ನಿಷೇಧಿಸಿದೆ, ಆದರೆ ಆ್ಯಂಡ್ರ್ಯಾಯ್ಡ್ ಬಳಕೆದಾರರು ನೇರವಾಗಿ ನನ್ನ ವೆಬ್ ಸೈಟ್ ನಿಂದ #Thepoonampande ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಅವರು ಟ್ಟೀಟ್ ಮಾಡಿದ್ದಾರೆ.
ವಯಕ್ತಿಕ ಅಪ್ಲಿಕೇಷನ್ ಗಳ ಬಗ್ಗೆ ನಾವು ಪ್ರತಿಕ್ರಿಯಿಸುವುದಿಲ್ಲ, ನಮ್ಮ ನೀತಿ ನಿಯಮಗಳ ಹಾಗೂ ಮಾಹಿತಿಗಳನ್ನು ನೀವು ಪರಿಶೀಲಿಸಿಕೊಳ್ಳಬಹುದು ಎಂದು ಗೂಗಲ್ ವಕ್ತಾರರು ಹೇಳಿದ್ದಾರೆ.
ಗೂಗಲ್ ತನ್ನ ಆ್ಯಪ್ ನಿಷೇಧಿಸಿದ್ದರೂ ನಾನು ಸಂತೋಷವಾಗಿದ್ದೇನೆ, ಕೇವಲ 15 ನಿಮಿಷಗಳಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿ ಆಯ್ಪ್ ಡೌನ್ ಲೋಡ್ ಮಾಡಿಕೊಂಡಿದ್ದಾರೆ, ಅಭಿಮಾನಿಗಳ ಪ್ರತಿಕ್ರಿಯೆಯಿಂದ ನಾನು ಸಂತೋಷಗೊಂಡಿದ್ದೇನೆ ಎಂದು ಪೂನಂ ಹೇಳಿದ್ದಾರೆ. ಪ್ರಕರಣ ಬಗೆಹರಿಯುವವರೆಗೂ ಅಭಿಮಾನಿಗಳು ತನ್ನ ನೇರವಾಗಿ ನನ್ನ ವೆಬ್ ಸೈಟ್ ನಿಂದ ಆ್ಯಪ್ ಡೌನ್ ಮಾಡಿಕೊಳ್ಳಲು ಪೂನಂ ಪಾಂಡೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics