ಮುಂಬಯಿ: ಬಾಹುಬಲಿ ಚಿತ್ರದ ನಂತರ ಸಖತ್ ಡಿಮಾಂಡ್ ಕ್ರಿಯೇಟ್ ಮಾಡಿಕೊಂಡಿರುವ ನಟ ಪ್ರಭಾಸ್ ಅವರನ್ನು ಬಾಲಿವುಡ್ಗೆ ಬರಮಾಡಿಕೊಳ್ಳಲು ಕರಣ್ ತುಂಬಾ ಆಸಕ್ತಿ ತೋರಿಸಿದ್ದಾರಂತೆ.
ಕಳೆದ ಐದು ವರ್ಷಗಳಿಂದ ಪ್ರಭಾಸ್ ಕೇವಲ ಬಾಹುಬಲಿ ಕಡೆ ತಮ್ಮ ಗಮನವನ್ನೆಲ್ಲಾ ಕೇಂದ್ರೀಕರಿಸಿದ್ದರು. ಹೀಗಾಗಿ ಬಿಗ್ ಬ್ಯಾನರ್ ಗಳ ಅಡಿಯಲ್ಲಿ ಬಂದ ಹಲವು ದೊಡ್ಡ ಆಫರ್ ಗಳನ್ನು ನಿರಾಕರಿಸಿದ್ದರು.
ಸದ್ಯ ಬಾಹುಬಲಿ-2 ಸಿನಿಮಾ ಪೂರ್ಣವಾಗಿದ್ದು, ಹೀಗಾಗಿ ಪ್ರಬಾಸ್ ಅವರನ್ನು ಬಾಲಿವುಡ್ ಗೆ ಕರೆತರಲು ಕರಣ್ ಜೋಹರ್ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಧ್ಯಮಗಳು ಕರಣ್ ಅವರನ್ನು ಪ್ರಶ್ನಿಸಿದಾಗ, ಒಂದು ದಿನ ನಾನೇ ಈ ಪ್ರಶ್ನೆಗೆ ಉತ್ತರಿಸುತ್ತೇನೆ ಎಂದು ಹೇಳಿದ್ದಾರೆ.
ನಟ ಪ್ರಭಾಸ್ ಅವರ ಮನವೊಲಿಸುವಂತೆ ನಿರ್ದೇಶಕ ರಾಜಮೌಳಿ ಅವರಿಗೆ ಕರಣ್ ಬೆನ್ನು ಬಿದ್ದಿದ್ದಾರೆ ಎಂದು ಹೇಳಲಾಗಿದೆ. ನಿರ್ದೇಶಕ ರಾಜಮೌಳಿಗೆ ಹಿಂದಿ ಚಿತ್ರ ಮಾಡುವಂತೆ ಕರಣ್ ಸಾಕಷ್ಟು ಹುರಿದುಂಬಿಸುತ್ತಿದ್ದಾರಂತೆ. ಅಂತೆಯೇ ಪ್ರಭಾಸ್ ಅವರನ್ನು ಚಿತ್ರದ ನಾಯಕನಾಗಿ ಮಾಡಿ ಬಾಲಿವುಡ್ನಲ್ಲಿ ಭರ್ಜರಿ ಎಂಟ್ರಿ ಮಾಡಿಸುವ ಪ್ಲ್ಯಾನ್ ಕೂಡ ರೂಪಿಸಿದ್ದಾರಂತೆ. ಆದರೆ ಈ ಕುರಿತಾಗಿ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics