ಬಾಲಿವುಡ್ ನಟಿ ಕಂಗನಾ ರಾಣಾವತ್ 
ಸಿನಿಮಾ ಸುದ್ದಿ

'ಆಜಾನ್' ವಿವಾದ; ಸೋನು ನಿಗಮ್ ಅಭಿಪ್ರಾಯವನ್ನು ಗೌರವಿಸಬೇಕು- ನಟಿ ಕಂಗನಾ

ಅಜಾನ್ ವಿವಾದ ಸಂಬಂಧ ಗಾಯಕ ಸೋನು ನಿಗಮ್ ಅವರ ಕುರಿತಂತೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದರೂ, ಇಷ್ಟು ದಿನ ಮೌನವಾಗಿದ್ದ ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರು ಕೊನೆಗೂ ತಮ್ಮ ಮೌನವನ್ನು ಮುರಿದಿದ್ದು, ಸೋನು ನಿಗಮ್ ಅವರ ಅಭಿಪ್ರಾಯವನ್ನು...

ಮುಂಬೈ: ಅಜಾನ್ ವಿವಾದ ಸಂಬಂಧ ಗಾಯಕ ಸೋನು ನಿಗಮ್ ಅವರ ಕುರಿತಂತೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದರೂ, ಇಷ್ಟು ದಿನ ಮೌನವಾಗಿದ್ದ ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರು ಕೊನೆಗೂ ತಮ್ಮ ಮೌನವನ್ನು ಮುರಿದಿದ್ದು, ಸೋನು ನಿಗಮ್ ಅವರ ಅಭಿಪ್ರಾಯವನ್ನು ಗೌರವಿಸಬೇಕೆಂದು ಹೇಳಿದ್ದಾರೆ. 
ಆಜಾನ್ ವಿವಾದ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ಯಾವುದೇ ಒಬ್ಬ ವ್ಯಕ್ತಿಯ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ, ವೈಯಕ್ತಿಕವಾಗಿ ಹೇಳುವುದಾದರೆ ನಾನು ಆಜಾನ್ ನ್ನು ಪ್ರೀತಿಸುತ್ತೇನೆ. ಲಖನೌನಲ್ಲಿ ತನು ವೆಡ್ಸ್ ಮನು ಚಿತ್ರದ ಚಿತ್ರೀಕರಣ ಮಾಡುತ್ತಿರಬೇಕಾದರೆ, ಆಜಾನ್ ಶಬ್ಧ ಕೇಳಿ ಬರುತ್ತಿತ್ತು. ಆಜಾನ್ ನ್ನು ಬಹಳ ಪ್ರೀತಿಸುತ್ತೇನೆ. ವೈಯಕ್ತಿಕವಾಗಿಯಷ್ಟೇ ನಾನು ಹೇಳಿಕೆಯನ್ನು ನೀಡುತ್ತೇನೆ. ಗುರುದ್ವಾರವಾಗಲೀ ಅಥವಾ ಭಗವದ್ಗೀತೆಯಾಗಲೀ, ಆಜಾನ್ ಆಗಲೂ ಧಾರ್ಮಿಕ ಆಚರಣೆಗಳನ್ನು ನಾನು ಬಹಳ ಇಷ್ಟ ಪಡುತ್ತೇನೆ. ಮಸೀದಿ, ದೇಗುಲ ಮತ್ತು ಚರ್ಚೆಗಳಲ್ಲಿನ ಆರಾಧನೆಗಳನ್ನು ನಾನು ವೈಯಕ್ತಿಕವಾಗಿ ಇಷ್ಟ ಪಡುತ್ತೇನೆಂದು ಹೇಳಿದ್ದಾರೆ. 
ಕ್ರಿಸ್ ಮಸ್ ಆಚರಣೆ ಕುರಿತಂತೆಯೂ ನಾನು ನನ್ನ ಅಭಿಪ್ರಾಯವನ್ನಷ್ಟೇ ಹೇಳುತ್ತೇನೆ. ಸೋನು ನಿಗಮ್ ಅವರ ಹೇಳಿಕೆಯನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು ಎಂದು ಹೇಳುತ್ತಿಲ್ಲ. ಅವರು ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅವರ ಅಭಿಪ್ರಾಯವನ್ನು ನಾವು ಗೌರವಿಸಬೇಕು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT