ಕೊಚ್ಚಿ: ಮಲಯಾಳಂ ಪ್ರಸಿದ್ಧ ನಟ ಮೋಹನ್ ಲಾಲ್ ಅವರನ್ನು ಛೋಟಾ ಭೀಮ್ ಎಂದು ಟ್ವೀಟ್ ಮಾಡಿ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದ ಸ್ವಯಂ ಘೋಷಿತ ವಿಮರ್ಶಕ ಕಮಲ್ ಆರ್ ಖಾನ್ ಕ್ಷಮೆ ಯಾಚಿಸಿದ್ದಾರೆ.
ಕನ್ನಡಿಗ ಉದ್ಯಮಿ ಬಿ.ಆರ್ ಶೆಟ್ಟಿ ನಿರ್ಮಾಣ ಮಾಡುತ್ತಿರು 1ಸಾವಿರ ಕೋಟಿ ವೆಚ್ಚದ ಮಹಾಭಾರತ ಸಿನಿಮಾದಲ್ಲಿ ಮೋಹನ್ ಲಾಲ್ ಭೀಮನ ಪಾತ್ರ ನಿರ್ವಹಿಸಲಿದ್ದಾರೆ.
ಈ ಬಗ್ಗೆ ಮೋಹನ್ ಲಾಲ್ ಅವರನ್ನು ಛೋಟಾ ಭೀಮ್ ಎಂದು ವ್ಯಂಗ್ಯ ಮಾಡಿದ್ದ ಕಮಲ್ ಆರ್ ಖಾನ್, ನೀವು ಛೋಟಾ ಭೀಮ್ ನಂತೆ ಇದ್ದೀರಾ, ನೀವು ಭೀಮ ಪಾತ್ರ ಮಾಡಿದರೇ ಭೀಮನಿಗೆ ಅಪಮಾನ ಮಾಡಿದಂತೆ, ಹೀಗಿರುವಾಗ ನೀವು ಯಾಕೆ ಬಿಆರ್ ಶೆಟ್ಟಿ ಅವರ ಹಣವನ್ನು ಪೋಲು ಮಾಡುತ್ತೀರಾ ಎಂದು ಟ್ಟಿಟ್ಟರ್ ನಲ್ಲಿ ವ್ಯಂಗ್ಯವಾಡಿದ್ದರು.
ಇದಕ್ಕೆ ಮೋಹನ್ ಲಾಲ್ ಅಭಿಮಾನಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ಅವರು ಬಹಿರಂಗ ಕ್ಷಮೆ ಯಾಚಿಸಿದ್ದಾರೆ, ನಿಮ್ಮ ಬಗ್ಗೆ ನನಗೆ ಹೆಚ್ಚಿನದಾಗಿ ಏನು ತಿಳಿದಿರಲಿಲ್ಲ. ಈಗ ನೀವು ಎಂಥ ಸೂಪರ್ ಸ್ಟಾರ್ ಎಂಬುದು ತಿಳಿದಿದೆ ಎಂದು ಹೇಳಿದ್ದಾರೆ. ಆದರೆ ಈ ಟ್ವೀಟ್ ಮೋಹನ್ ಲಾಲ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.