ಸಿನಿಮಾ ಸುದ್ದಿ

ಖ್ಯಾತ ತೆಲುಗು ನಿರ್ದೇಶಕ ಕೆ ವಿಶ್ವನಾಥ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

Lingaraj Badiger
ಹೈದರಾಬಾದ್: ಖ್ಯಾತ ತೆಲುಗು ನಿರ್ದೇಶಕ ಹಾಗೂ ನಟ, ಕಲಾ ತಪಸ್ವಿ ಕಾಸಿನಾಧುನಿ ವಿಶ್ವನಾಥ್ ಅವರು 2016ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಿಶ್ವನಾಥ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡುವಂತೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮಾಡಿದ್ದ ಶಿಫಾರಸಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಎಂ.ವೆಂಕಯ್ಯ ನಾಯ್ಡು ಅವರಿಗೆ ಒಪ್ಪಿಗೆ ನೀಡಿದ್ದಾರೆ.
ಸಿನಿಮಾ ರಂಗದ ದಂತಕಥೆ ಎನಿಸಿಕೊಂಡವರಿಗೆ ಕೇಂದ್ರ ಸರ್ಕಾರ ನೀಡುವ ಈ ಪ್ರತಿಷ್ಠಿತ 10 ಲಕ್ಷ ರುಪಾಯಿ ಬಹುಮಾನ ಹಾಗೂ ಸ್ಮರಣಿಕೆ ಹೊಂದಿದ್ದು, ಮೇ 3ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ದಾದಾ ಸಾಹೇಬ್ ಪ್ರಶಸ್ತಿ ಮಾಡಲಿದ್ದಾರೆ.
ಕೆ.ವಿಶ್ವನಾಥ್ ಅವರು ಪದ್ಮಶ್ರೀ ಸೇರಿದಂತೆ ನೂರಾರು ಪ್ರತಿಷ್ಠಿತ ಪ್ರಶಸ್ತಿಯನ್ನು ಗಳಿಸಿದ್ದರು. ತೆಲುಗು ಸಿನಿಮಾ ರಂಗದಲ್ಲಿ ಖ್ಯಾತ ನಿರ್ದೇಶಕ ಕೆ.ವಿಶ್ವನಾಥ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ಕಲಾ ತಪಸ್ವಿ ಕೆ.ವಿಶ್ವನಾಥ್ ಅವರು 1979ರಲ್ಲಿ ಶಂಕರಾಭರಣಂ, 1983ರ ಸಾಗರ ಸಂಗಮಂ, ಕಮಲ್ ನಟನೆಯ ಸ್ವಾತಿ ಮುತ್ಯಂ ಸೇರಿದಂತೆ ಹಲವು ಶ್ರೇಷ್ಠ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
SCROLL FOR NEXT