ಪ್ರೀತಮ್ ಗುಬ್ಬಿ ಮತ್ತು ನಟ ದುನಿಯಾ ವಿಜಯ್
ಬೆಂಗಳೂರು: ನಿರ್ದೇಶಕ ಪ್ರೀತಮ್ ಗುಬ್ಬಿ ಮತ್ತು ನಟ ದುನಿಯಾ ವಿಜಯ್ ಜೋಡಿಯ ಸಿನೆಮಾ 'ಜಾನಿ ಮೇರಾ ನಾಮ್' ೨೦೧೧ ರಲ್ಲಿ ಬಿಡುಗಡೆಯಾಗಿತ್ತು. ಈ ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರ ಒಂದು ಮಟ್ಟಕ್ಕೆ ಯಶಸ್ವಿಯಾಗಿತ್ತು ಕೂಡ. ಇದರಲ್ಲಿ ರಮ್ಯಾ ನಾಯಕನಟಿಯಾಗಿದ್ದರು. ಈಗ ಆರುವರ್ಷಗಳ ನಂತರ ಇದರ ಎರಡನೇ ಭಾಗ 'ಜಾನಿ ಜಾನಿ ಯೆಸ್ ಪಾಪ' ನಿರ್ದೇಶಿಸಲು ಮುಂದಾಗಿದ್ದು, ಇದರಲ್ಲಿಯೂ ವಿಜಯ್ ನಾಯಕ ನಟ. ಹಾಗೆಯೇ ವಿಜಯ್ ಒಡೆತನದ 'ದುನಿಯಾ ಟಾಕೀಸ್' ಅಡಿ ಈ ಸಿನೆಮಾ ನಿರ್ಮಾಣವಾಗುತ್ತಿರುವುದು ವಿಶೇಷ.
ಈಗ ಸ್ಕ್ರಿಪ್ಟ್ ಬರೆದು ಮುಗಿಸಿರುವ ನಿರ್ದೇಶಕ ಜೂನ್ ಅಂತ್ಯದಿಂದ ಚಿತ್ರೀಕರಣ ಪ್ರಾರಂಭಿಸಲು ನಿಶ್ಚಯಿಸಿದ್ದಾರೆ. ಹೊಸ ಪೀಳಿಗೆಗೆ ವಿಜಯ್ ಅವರನ್ನು ಹೊಸದಾಗಿ ಅರ್ಪಿಸಲಿದ್ದೇನೆ ಎನ್ನುವ ಪ್ರೀತಮ್ "ಜಾನಿ ಸಾಮಾಜಿಕ ಸೇವಾ ಕೇಂದ್ರದ ನನ್ನ ಹೀರೊ ಈಗ ಜಾನಿ.ಕಾಮ್ ಗೆ ಉನ್ನತಿ ಪಡೆಯಲಿದ್ದಾರೆ. 'ಜಾನಿ ಜಾನಿ ಯೆಸ್ ಪಾಪ'ದಲ್ಲಿ ಇನ್ನು ಹೆಚ್ಚು ಹಾಸ್ಯ ತುಂಬಿರಲಿದೆ. ಈಗ ವಿ ಹರಿಕೃಷ್ಣ ಅವರೊಂದಿಗೆ ಸಂಗೀತಕ್ಕೆ ಕೆಲಸ ಮಾಡುತ್ತಿದ್ದೇನೆ. ಈಮಧ್ಯೆ ನೆಲಮಂಗಲದಲ್ಲಿ ದೊಡ್ಡ ಸೆಟ್ ಹಾಕುವ ತಯ್ಯಾರಿ ನಡೆದಿದೆ. ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಇದ್ದು ಅಲ್ಲಿಯೇ ೫೦% ಚಿತ್ರೀಕರಣ ನಡೆಯುತ್ತದೆ" ಎನ್ನುತ್ತಾರೆ.
ವಿಜಯ್ ಜೊತೆಗೆ ರಂಗಾಯಣ ರಘು ಮತ್ತು ಸಾಧುಕೋಕಿಲ ಕೂಡ ನಟಿಸಲಿದ್ದಾರೆ. "ಉಳಿದ ತಾರಾಗಣ shIgradallE ಅಂತಿಮಗೊಳ್ಳಲಿದೆ ಮತ್ತು ಸ್ಕ್ರಿಪ್ಟ್ ಕೆಲಸ ಸಂಪೂರ್ಣಗೊಂಡ ಮೇಲೆ ನಾಯಕನಟಿಯನ್ನು ಆಯ್ಕೆ ಮಾಡಲಿದ್ದೇವೆ" ಎನ್ನುತ್ತಾರೆ ಪ್ರೀತಮ್.
'ಮಾಸ್ತಿಗುಡಿ' ಸಿನೆಮಾದ ಬಿಡುಗಡೆಯನ್ನು ಎದುರು ನೋಡುತ್ತಿರುವ ವಿಜಯ್, ಸದ್ಯಕ್ಕೆ 'ಕನಕ' ಚಿತ್ರೀಕರಣದಲ್ಲಿಯೂ ಭಾಗಿಯಾಗಿದ್ದಾರೆ. ನಾನಾರ ತೆಲುಗು ನಟ ಎನ್ ಟಿ ಆರ್ ಅವರ 'ಲವಕುಶ'ದಲ್ಲಿ ನಟಿಸಿ, 'ಜಾನಿ ಜಾನಿ ಯೆಸ್ ಪಾಪ' ಸೆಟ್ ಸೇರಲಿದ್ದಾರೆ.