ಮುಂಬೈ'ನಲ್ಲಿ ಖ್ಯಾತ ನಟ ವಿನೋದ್ ಖನ್ನಾ ಅಂತಿಮ ಸಂಸ್ಕಾರ
ನವದೆಹಲಿ: ಖ್ಯಾತ ಬಾಲಿವುಡ್ ನಟ ಹಾಗೂ ಬಿಜೆಪಿ ಸಂಸದ ವಿನೋದ್ ಖನ್ನಾ ಅವರ ಅಂತಿಮ ಸಂಸ್ಕಾರವನ್ನು ಮುಂಬೈನಲ್ಲಿ ನಡೆಸಲಾಗಿದ್ದು, ಅಗಲಿದ ನಟನಿಗೆ ಗಣ್ಯಾತಿ ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಸಂಜೆ 5 ಗಂಟೆಗೆ ವಿಧಿವಿಧಾನಗಳೊಂದಿಗೆ ಅಂತಿಮ ಸಂಸ್ಕಾರವನ್ನು ನೆರವೇರಿಸಲಾಯಿತು. ವಿನೋದ್ ಖನ್ನಾ ಅವರ ಕುಟುಂಬಸ್ಥರು ಹಾಗೂ ಗೆಳೆಯಲು ಅಂತಿಮ ದರ್ಶನವನ್ನು ಪಡೆದುಕೊಂಡರು.
ಅಂತಿಮ ಸಂಸ್ಕಾರದ ವೇಳೆ ಚಿತ್ರರಂಗ ಬಳಗವೇ ಸ್ಥಳದಲ್ಲಿ ನೆರೆದಿತ್ತು. ರಿಶಿ ಕಪೂರ್, ಅಮಿತಾಭ್ ಬಚ್ಚನ್, ನೀತು ಸಿಂಗ್, ರಮೇಶ್ ಸಿಪ್ಪಿ ಮತ್ತು ಅಭಿಷೇಕ್ ಬಚ್ಚನ್ ಸೇರಿದಂತೆ ಹಲವು ನಟ ನಟಿಯರು ಅಂತಿನ ದರ್ಶನ ಪಡೆದುಕೊಂಡರು.
1946 ಅ.6 ರಂದು ಪಾಕಿಸ್ತಾನದ ಪೇಶಾವರ್ ಪ್ರಾಂತ್ಯದಲ್ಲಿ ಕಮಾಲಾ ಮತ್ತು ಕಿಶನ್ ಚಂದ್ ಖನ್ನಾ ದಂಪತಿಗಳ ಮಗನಾಗಿ ಜನಿಸಿದ್ದ ಖನ್ನಾ ಅವರು ಮುಂಬೈಗೆ ಬಂದು ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದರು.
1968ರಲ್ಲಿ ಸುನಿಲ್ ದತ್ ಅವರ ರಿಮೇಕ್ ಚಿತ್ರ ಅಧೂರ್ತಿ ಸುಬ್ಬರಾವ್ ನಲ್ಲಿ ಖಳನಟನಾಗಿ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದರು. ಹೀಗೆ ಹಲವು ಚಿತ್ರಗಳಲ್ಲಿ ಸಹ ನಟನಾಗಿ ನಟಿಸಿದ್ದ ವಿನೋದ್ ಖನ್ನಾ ಅವರು 1971ರಲ್ಲಿ ಹಮ್ ತುಮ್ ಔರ್ ವೋ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡು ಬ್ರೇಕ್ ಪಡೆದುಕೊಂಡಿದ್ದರು. ಚಿತ್ರದಲ್ಲಿ ಭಾರತಿ ವಿಷ್ಣುವರ್ಧನ್ ನಾಯಕಿಯಾಗಿದ್ದರು. 2013ರವರೆಗೆ ಸುಮಾರು 141 ಚಿತ್ರಗಳಲ್ಲಿ ನಟಿಸಿ ಜನರ ಮನಗೆದ್ದು, ಜನಪ್ರಿಯತೆಗಳಿಸಿದ್ದರು.
4ನೇ ಪಂಜಾಬ್ ರಾಜ್ಯದ ಗುರುದಾಸ್ ಪುರ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿ ಆಯ್ಕೆಯಾದ ಹೆಗ್ಗಳಿಕೆ ಖನ್ನಾ ಅವರದ್ದು, 2014ರ ಚುನಾವಣೆಯಲ್ಲಿ ಭಾರೀ ಮತಗಳ ಅಂತರದಿಂದ ಜಯಗಳಿಸಿದ್ದರು. ಇದೀಗ ಅವರ ನಿಧನದಿಂದಾಗಿ ಕ್ಷೇತ್ರ ತೆರವಾಗಿದ್ದು, ಉಪಚುನಾವಣೆ ನಡೆಯಬೇಕಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos