ಮುಂಬಯಿ: ಬಾಲಿವುಡ್ ನ ಹಿರಿಯ ನಟ ವಿನೋದ್ ಖನ್ನಾ ಅವರ ಅಂತ್ಯಕ್ರಿಯೆ ಗುರುವಾರ ಸಂಜೆ ನೆರವೇರಿತು. ಅನೇಕ ಗಣ್ಯರು ಅಭಿಮಾನಿಗಳು ಸಮ್ಮುಖದಲ್ಲಿ ಅಂತಿಮ ವಿಧಿ ವಿಧಾನ ನೆರವೇರಿತು.
ಬಾಲಿವುಡ್ ಹಿರಿಯ ನಟ ರಿಷಿಕಪೂರ್ ಇಂದಿನ ಪೀಳಿಗೆಯ ನಟರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಅಂತ್ಯಕ್ರಿಯೆಯಲ್ಲಿ ರಿಷಿ ಕಪೂರ್, ಅಮಿತಾಭ್ ಬಚ್ಚನ್,ಜಿತೇಂದ್ರ ಭಾಗವಹಿಸಿದ್ದರು.
ಇನ್ನು ಆನಂತರದ ಪೀಳಿಗೆಯ ನಟರಲ್ಲಿ ಜಾಕಿ ಶ್ರಾಫ್, ಅರ್ಜುನ್ ರಾಮಾ ಪಾಲ್, ಚುಂಕಿ ಪಾಂಡೆ ಬಂದಿದ್ದರು. ಅವರ ನಂತರದ ಪೀಳಿಕೆಯ ನಟರಲ್ಲಿ ಅಭಿಷೇಕ್ ಬಚ್ಚನ್, ದಿಯಾ ಮಿರ್ಜಾ ಬಂದಿದ್ದರು
ಆದರೆ, ಇತ್ತೀಚೆಗಿನ ಯುವ ನಟರಲ್ಲಿ ಯಾರೂ ಆ ಅಂತ್ಯಕ್ರಿಯೆಗೆ ಬಾರದಿದ್ದಕ್ಕೆ ರಿಷಿ ಕಪೂರ್ ಟ್ವಿಟರ್ ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಇದೊಂದು ನಾಚಿಕೆಗೇಡಿನ ವಿಚಾರ, ಹಿರಿಯರ ಬಗೆ ಗೌರವ ಕಡಿಮಾಯಗುತ್ತಿದೆ ಎಂದು ರಿಷಿಕಪೂರ್ ಟ್ವೀಟ್ ಮಾಡಿದ್ದಾರೆ.
ಇಂದು ಸ್ಟಾರ್ ಎನಿಸಿಕೊಂಡವರು ಚಿತ್ರರಂಗದ ಹಿರಿಯರೊಬ್ಬರ ಅಂತ್ಯಕ್ರಿಯೆಗೆ ಬಾರದಿರುವುದು ಬೇಸರ ತರಿಸಿದೆ ಎಂದು ಹೇಳಿದ್ದಾರೆ.ಪ್ರಿಯಾಂಕ ಛೋಪ್ರಾರ ಕಾರ್ಯಕ್ರಮದದಲ್ಲಿ ಹಲವು ಚಮಚಾ ಜನಗಳನ್ನು ನೋಡಿದೆ. ಆದರೆ ಹಿರಿಯ ನಟನೊಬ್ಬನ ಅಂತ್ಯಕ್ರಿಯೆದೆ ಇಂದಿನ ಜನರೇಷನ್ ನಟರು ಬಾರದಿರುವುದು ಬೇಸರ ತರಿಸಿದೆ ಎಂದು ಕಿಡಿಕಾರಿದ್ದಾರೆ.