ರಿಷಿ ಮತ್ತು ಶ್ರದ್ಧಾ 
ಸಿನಿಮಾ ಸುದ್ದಿ

ಅನನ್ಯ ಟೀಚರ್ ಆಗಿ ಶ್ರದ್ಧಾ ಶ್ರೀನಾಥ್ ಮಾಡಲಿದ್ದಾರೆ ಮೋಡಿ

ಐಪಿಎಲ್ ಜ್ವರದ ನಂತರ 'ಆಪರೇಷನ್ ಅಲಮೇಲಮ್ಮ ಸಿನೆಮಾದ ಪ್ರಚಾರ ಹಾಡೊಂದು ಬಿಡುಗಡೆಗೆ ಸಿದ್ಧವಾಗುತ್ತಿದೆ. ಸಿನೆಮಾದಲ್ಲಿ ಅನನ್ಯ ಟೀಚರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ರದ್ಧಾ

ಬೆಂಗಳೂರು: ಐಪಿಎಲ್ ಜ್ವರದ ನಂತರ 'ಆಪರೇಷನ್ ಅಲಮೇಲಮ್ಮ ಸಿನೆಮಾದ ಪ್ರಚಾರ ಹಾಡೊಂದು ಬಿಡುಗಡೆಗೆ ಸಿದ್ಧವಾಗುತ್ತಿದೆ. ಸಿನೆಮಾದಲ್ಲಿ ಅನನ್ಯ ಟೀಚರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ರದ್ಧಾ ಈ ಹಾಡಿನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಸುನಿ ನಿರ್ದೇಶನದ ಈ ಚಿತ್ರದಲ್ಲಿ ತರಕಾರಿ ಮಾರಾಟಗಾರನ ಪಾತ್ರ ಮಾಡಿರುವ ರಿಷಿ ಎದುರು ಶ್ರದ್ಧಾ ನಟಿಸುತ್ತಿದ್ದಾರೆ. ಸುನಿ ಗೀತರಚನೆ ಮಾಡಿರುವ ಈ ಹಾಡಿಗೆ ಹೆಜ್ಜೆ ಹಾಕಿರುವುದಕ್ಕೆ ಉತ್ಸುಕರಾಗಿರುವ ಶ್ರದ್ಧಾ "ಈ ಪ್ರಚಾರ ಹಾಡು, ಅನನ್ಯ ಟೀಚರ್ ಅವರ ಸಾಂಪ್ರದಾಯಿಕ ಇಮೇಜ್ ಅನ್ನು ಕೆಡವಲಿದೆ. ಇದು ಹಿಪ್ ಮತ್ತು ಫ್ರೀ ಶೈಲಿಯ ನೃತ್ಯ" ಎನ್ನುತ್ತಾರೆ ಶ್ರದ್ಧಾ. 
ಈಗ ಸಿನೆಮಾ ಬಿಡುಗಡೆಯ ಅಂತಿಮ ದಿನಾಂಕವನ್ನು ನಿಗದಿಪಡಿಸಿದ ಮೇಲೆ ಈ ಪ್ರಚಾರ ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧವಾಗಿದೆ. ಈ ಸಿನೆಮಾಗೆ ಅಭಿಷೇಕ್ ಕಾಸರ್ಗೋಡ್ ಛಾಯಾಗ್ರಹಣ ಮಾಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT