ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

ಕನ್ನಡ ಚಿತ್ರವೊಂದು ನಿರ್ಮಿಸಿದ್ದ ಈ ದಾಖಲೆಯನ್ನು ಮುರಿಯುವಲ್ಲಿ ವಿಫಲವಾದ ಬಾಹುಬಲಿ-2!

ಕಳೆದ ಏಪ್ರಿಲ್ 28ರಂದು ವಿಶ್ವಾದ್ಯಂತ ಬಿಡುಗಡೆಯಾದ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರ ಗಳಿಕೆಯಲ್ಲಿ ವಿಶ್ವ ದಾಖಲೆ ಕಂಡಿರಬಹುದು. ಆದರೆ...

ಬೆಂಗಳೂರು: ಕಳೆದ ಏಪ್ರಿಲ್ 28ರಂದು ವಿಶ್ವಾದ್ಯಂತ ಬಿಡುಗಡೆಯಾದ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರ ಗಳಿಕೆಯಲ್ಲಿ ವಿಶ್ವದಾಖಲೆ ಕಂಡಿರಬಹುದು. ಆದರೆ ನಮ್ಮ ಕನ್ನಡ ಚಿತ್ರವೊಂದು ನಿರ್ಮಿಸಿದ್ದ ವಿಶಿಷ್ಚ  ದಾಖಲೆ ಮುರಿಯವಲ್ಲಿ ವಿಫಲವಾಗಿದೆ.

ಹೌದು...ಖಾಸಗಿ ವೆಬ್ ಸೈಟ್ ವೊಂದು ವರದಿ ಮಾಡಿರುವಂತೆ ಕನ್ನಡದ ಚಕ್ರವರ್ತಿ ಸಿನಿಮಾ ನಿರ್ಮಿಸಿದ್ದ ಅಪೂರ್ವ ದಾಖಲೆಯನ್ನು ಬಾಹುಬಲಿ-2 ಚಿತ್ರ ಮುರಿಯಲಾಗಿಲ್ಲವಂತೆ. ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ  ಚಕ್ರವರ್ತಿ ಚಿತ್ರ ಸತತ 2 ದಿನಗಳ ರಾತ್ರಿಯೂ ಸೇರಿದಂತೆ ನಿರಂತರ ಪ್ರದರ್ಶನ ಕಂಡಿತ್ತು. ಚಿತ್ರ ವೀಕ್ಷಿಸಲು ಜನ ಅಪಾರ ಪ್ರಮಾಣದಲ್ಲಿ ಚಿತ್ರಮಂದಿರಕ್ಕೆ ಆಗಮಿಸಿದ್ದರಿಂದ ಚಿತ್ರ ಬಿಡುಗಡೆಯ ಮುನ್ನಾದಿನ ಮಧ್ಯ ರಾತ್ರಿಯೇ ಚಿತ್ರ  ಪ್ರದರ್ಶನವಾಗಿತ್ತು. ಒಂದು ಮಧ್ಯರಾತ್ರಿಯಿಂದ ಮರುದಿನ ಮಧ್ಯರಾತ್ರಿವರೆಗೆ ನಿರಂತರ ಪ್ರದರ್ಶನ ನೀಡಿದ ದಾಖಲೆಗೆ ‘ಚಕ್ರವರ್ತಿ’ ಚಿತ್ರ ಪಾತ್ರವಾಯಿತು.

ಆದರೆ ಕನ್ನಡ ಚಿತ್ರರಂಗದಲ್ಲಿ ದರ್ಶನ್ ಅಭಿನಯದ ಚಕ್ರವರ್ತಿ ನಿರ್ಮಿಸಿದ್ದ ಈ ದಾಖಲೆಯನ್ನು ಅಳಿಸಿ ಹಾಕಲು ಬಾಹುಬಲಿ ಚಿತ್ರಕ್ಕೆ ಸಾಧ್ಯವಾಗಿಲ್ಲ. ಚಕ್ರವರ್ತಿಯಂತೆಯೇ ಬಾಹುಬಲಿ-2 ಚಿತ್ರ ನೋಡುವುದಕ್ಕೂ ಅಪಾರ ಪ್ರಮಾಣದ  ಜನ ಕಾತುರದಿಂದ ಕಾದಿದ್ದರು. ಇದೇ ಕಾರಣಕ್ಕೆ ಚಿತ್ರತಂಡ ಆಂಧ್ರ ಪ್ರದೇಶ ಹಾಗೂ ತೆಲಂಗಾಣಗಳಲ್ಲಿ ಮಧ್ಯರಾತ್ರಿಯಿಂದ ಮರುದಿನ ಮಧ್ಯರಾತ್ರಿವರೆಗೆ ‘ಬಾಹುಬಲಿ-2’ ಪ್ರದರ್ಶನ ಮಾಡಲು ಮುಂದಾಗಿತ್ತು. ಆದರೆ ನಿರಂತರ  ಪ್ರದರ್ಶನದ ನಡುವೆ ಯಾವುದಾದರೊಂದು ಶೋ ಹೌಸ್ ಫುಲ್ ಆಗದಿದ್ದರೆ ಮುಜುಗರದ ಸನ್ನಿವೇಶ ಸೃಷ್ಟಿಯಾಗಬಹುದು ಎಂಬ ಕಾರಣಕ್ಕಾಗಿ 24 ತಾಸುಗಳ ನಿರಂತರ ಪ್ರದರ್ಶನದಿಂದ ‘ಬಾಹುಬಲಿ-2’ ತಂಡ ಹಿಂದೆ  ಸರಿಯಿತೆನ್ನಲಾಗಿದೆ. ಆ ಮೂಲಕ ಬಾಹುಬಲಿ ಚಿತ್ರ ಕನ್ನಡ ಚಿತ್ರ ಚಕ್ರವರ್ತಿ ನಿರ್ಮಿಸಿದ್ದ ದಾಖಲೆ ಮುರಿಯವಲ್ಲಿ ವಿಫಲವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ಬಾಕಿ ಸಾಲ ವಸೂಲಿಗೆ 'ಗೃಹಲಕ್ಷ್ಮಿ' ಯೋಜನೆಯ ಹಣ ಕಡಿತಗೊಳಿಸದಂತೆ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸರ್ಕಾರ!

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನಿರಾಳ; ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ನಿರ್ಧಾರ ರದ್ದು!

'ನ್ಯಾಯಾಂಗ ತನಿಖೆಗೆ ಒಪ್ಪಿಸಿ, ₹1 ಕೋಟಿ ಪರಿಹಾರ ನೀಡಿ': ಹನೂರು ಶೂಟೌಟ್ ಪ್ರಕರಣದ ಮಹಿಮಾ ದಾಸ್ ಸೇರಿ ಸಂತ್ರಸ್ತರ ಆಗ್ರಹ