ಉಪ್ಪು ಹುಳಿ ಖಾರ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ
ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ನಿರ್ದೇಶನದ ಉಪ್ಪು ಹುಳಿ ಖಾರ ಚಿತ್ರದ ಧ್ವನಿ ಸುರುಳಿಯನ್ನು ತತ್ವಶಾಸ್ತ್ರಜ್ಞೆ, ಬರಹಗಾರ್ತಿ ಸುಧಾ ಮೂರ್ತಿ ಅವರು ಬಿಡುಗಡೆ ಮಾಡಿದರು.
ಸ್ಯಾಂಡಲ್ವುಡ್ ನಟಿ ಮಾಲಾಶ್ರೀ, ರಕ್ಷಿತ್ ಶೆಟ್ಟಿ ಮತ್ತು ಧೃವ ಸರ್ಜಾರ ಸಮ್ಮುಖದಲ್ಲಿ ಸುಧಾ ಮೂರ್ತಿ ಅವರು ಆಡಿಯೋ ಬಿಡುಗಡೆ ಮಾಡಿದರು.
ಸುಧಾ ಮೂರ್ತಿಯವರು ಈ ಚಿತ್ರದ ಹಿತೈಷಿಯಾಗಿದ್ದಾರೆ. ನಿರ್ಮಾಪಕ ಎಂ. ರಮೇಶ್ ಅವರಿಗೆ ಅವರು ತುಂಬಾ ಬೆಂಬಲ ನೀಡಿದ್ದಾರೆ. ತೇಜಸ್ವಿನಿ ಎಂಟರ್ ಪ್ರೈಸರ್ಸ್ ಅಡಿಯಲ್ಲಿ ರಮೇಶ್ ಅವರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ ಎಂದು ಚಿತ್ರ ನಿರ್ದೇಶಕ ಇಮ್ರಾನ್ ಹೇಳಿದ್ದಾರೆ.
ಉಪ್ಪು ಹುಳಿ ಖಾರ ಇಮ್ರಾನ್ ಸರ್ದಾರಿಯಾ ಅವರ ಎರಡನೇ ಚಿತ್ರವಾಗಿದೆ. ಅಜಯ್ ರಾವ್ ರೊಂದಿಗೆ ಇಮ್ರಾನ್ ಎಂದೆದಿಗೂ ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಉಪ್ಪು ಹುಳಿ ಖಾರ ಚಿತ್ರದಲ್ಲಿ ಶಶಿ ದೇವರಾಜ್, ಶರತ್, ಅನುಶ್ರೀ, ಧನಂಜಯ್ ಮತ್ತು ಬಿ ಜಯಶ್ರೀ ಅವರು ಅಭಿನಯಿಸಿದ್ದಾರೆ.