ಬೆಂಗಳೂರು: ರಾಜ್ಯದ ಇಂಧನ ಸಚಿವ ಡಿಕೆ ಶಿವಕುಮಾರ್ ಮನೆಯ ಮೇಲೆ ಕಳೆದ ಮೂರು ದಿನಗಳಿಂದ ಐಟಿ ದಾಳಿ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಯಾರ ಹೆಸರನ್ನು ಉಲ್ಲೇಖಿಸಿದೇ ರಿಯಲ್ ಸ್ಟಾರ್ ಉಪೇಂದ್ರ ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.
ದೊಡ್ಡ ದೊಡ್ಡ ವ್ಯಕ್ತಿಗಳ ಮನೆ ಮೇಲೆ ನಡೆಯುವ ಐಟಿ ದಾಳಿಯನ್ನು ಕ್ಯಾಮೆರಾದಲ್ಲಿ ಶೂಟ್ ಮಾಡಿ ಜನರಿಗೆ ತೋರಿಸಬೇಕು. ಆಗ ನಿಜವಾದ ಸತ್ಯ ಏನು ಎಂಬುದು ಜನಸಾಮಾನ್ಯರಿಗೂ ಗೊತ್ತಾಗುತ್ತದೆ ಎಂದು ತಮ್ಮದೇ ಸ್ಟೈಲ್ ನಲ್ಲಿ ಟ್ವೀಟ್ ಗಳನ್ನು ಮಾಡಿದ್ದಾರೆ.
ರಾಜಕಾರಣ, ರಾಜಕೀಯ, ರಾಜನೀತಿ ಬೇಕೆಂದು ಯಾರು ಬಯಸಬಾರದು. ಅದರ ಬದಲಿಗೆ ಪ್ರಜಾಕಾರಣ, ಪ್ರಜಾಕೀಯ, ಪ್ರಜಾನೀತಿ ನಮ್ಮಗೆಲ್ಲಾ ಬೇಕಿರುವುದು ಎಂದು ತಮ್ಮದೇ ಸ್ಟೈಲ್ ನಲ್ಲಿ ಟ್ವೀಟ್ ಮಾಡಿದ್ದಾರೆ.