ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ (ಸಂಗ್ರಹ ಚಿತ್ರ)
ಹೈದರಾಬಾದ್: ಬಾಹುಬಲಿ-2 ಚಿತ್ರದ ಮೂಲಕ ರಾಷ್ಟ್ರಾದ್ಯಂತ ಭಾರಿ ಬೇಡಿಕೆಯ ನಟನಾಗಿರುವ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಡುವಿನ ಪ್ರೇಮಾಂಕುರದ ಗುಸು-ಗುಸು ಸುದ್ದಿಗಳ ಬಗ್ಗೆ ಇದೇ ಮೊದಲ ಬಾರಿಗೆ ಪ್ರಭಾಸ್ ಅವರು ತಮ್ಮ ಮೌನವನ್ನು ಮುರಿದಿದ್ದು, ಅನುಷ್ಕಾ ಜೊತೆಗೆ ಮದುವೆಯಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಖಾಸಗಿ ಮಾಧ್ಯಮವೊಂದರ ಜೊತೆಗೆ ಮಾತನಾಡಿರುವ ಪ್ರಭಾಸ್ ಅವರು, ತಾನಿನ್ನೂ ಮದುವೆಯಾಗುವ ಕುರಿತು ಯೋಜನೆಯನ್ನು ಮಾಡಿಲ್ಲ ಎಂದು ಹೇಳಿದ್ದಾರೆ.
ಮದುವೆ ವಿಚಾರ ಕುರಿತು ಪ್ರಸ್ತುತ ನನ್ನ (ಮಹಿಳಾ) ಅಭಿಮಾನಿಗಳು ಭೀತಿ ಪಡುವ ಅಗತ್ಯವಿಲ್ಲ ಎಂದು ನಗೆ ಬೀರಿದ್ದಾರೆ. ಇತ್ತೀಚೆಗಷ್ಟೇ ರಾಣಾ ದಗ್ಗುಬಾಟಿಗಿಂತ ಪ್ರಭಾಸ್ ಸೆಕ್ಸಿಯಾಗಿದ್ದಾರೆಂದು ಅನುಷ್ಕಾ ಹೇಳಿಕೆ ನೀಡಿದ್ದರು ಈಗಾಗಲೇ ಪ್ರಭಾಸ್ ಹಾಗೂ ಅನುಷ್ಕಾ ನಡುವೆ ಪ್ರೇಮಾಂಕುವಾಗಿದೆ ಎಂಬ ಊಹಾಪೋಹಗಳಿಗೆ ಇದು ಮತ್ತಷ್ಟು ಇಂಬು ನೀಡಿತ್ತು.