ಚೆನ್ನೈ: ಬಿಗ್'ಬಾಸ್ ರಿಯಾಲಿಟಿ ಶೋದಲ್ಲಿ ನಿಯಮ ಮೀರಿದ ಸ್ಪರ್ಧಾಳುಗಳಿಗೆ ಆಗೋಚರ ಬಿಸ್ ಬಾಸ್ ಎಚ್ಚರಿಕೆ ನೀಡುವುದು ಸಾಮಾನ್ಯ. ಆದರೆ, ತಮಿಳು ಆವೃತ್ತಿಯಲ್ಲಿ ಬಿಗ್ ಬಾಸ್'ಗೇ ಕಾರ್ಯಕ್ರಮದ ನಿರ್ವಾಹಕ, ನಟ ಕಮಲ್ ಹಾಸನ್ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಸ್ಪರ್ಧಾಳುಗಳಿಗೆ ವಿಕಲಾಂಗದ ರೀತಿ ವರ್ತಿಸುವ ಟಾಸ್ಕ್ ನೀಡಲಾಗಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಇನ್ನೊಮ್ಮೆ ಇಂತ ಸಂವೇದನಾರಹಿತ ಟಾಸ್ಕ್ ನೀಡಿದರೆ ತಕ್ಷಣವೇ ಶೋದಿಂದ ಹೊರಗೆ ಹೋಗುವುದಾಗಿ ಬಿಗ್ ಬಾಸ್ ಗೆ ಕಮಲ್ ಇಂಥಹದ್ದೊಂದು ಎಚ್ಚರಿಕೆ ನೀಡಿದ್ದಾರೆ.
ಅಂಗವಿಕಲ ಜನರ ರೀತಿ ವರ್ತಿಸುವಂತೆ ನೀಡಿದ್ದ ಟಾಸ್ಕ್ ಸರಿಯಿರಲಿಲ್ಲ. ಟಾಸ್ಕ್ ನನಗೆ ನಿಜಕ್ಕೂ ಕೋಪವನ್ನು ತರಿಸಿತ್ತು. ಪ್ರತಿಯೊಬ್ಬರಿಗೂ ಸಾಮಾಜಿಕ ಜವಾಬ್ದಾರಿಯೆಂಬುದಿರುತ್ತದೆ. ಇಂತರ ಚಟುವಟಿಕೆಗಳನ್ನು ಮತ್ತೆ ಮಾಡದಿರುವಂತೆ ನಾನು ಮನವಿ ಮಾಡುತ್ತೇನೆ. ಒಂದು ವೇಳೆ ಶೋನಲ್ಲಿ ಈ ರೀತಿಯ ಚಟುವಟಿಕೆಗಳು ನಡೆಸಿದ್ದೇ ಆದರೆ, ಈ ಕಾರ್ಯಕ್ರಮ ನನಗೆ ಅಷ್ಟೊಂದು ಪ್ರಾಮುಖ್ಯತೆಯಾಗಿರುವುದಿಲ್ಲ ಎಂದು ಕಮಲ್ ಹಾಸನ್ ಆವರು ಹೇಳಿದ್ದಾರೆ.