ವೇದಿಕಾ 
ಸಿನಿಮಾ ಸುದ್ದಿ

ಉಪೇಂದ್ರ ನನ್ನ ಹೀರೋ, ಮಾನವೀಯತೆಯುಳ್ಳ ವ್ಯಕ್ತಿ: ನಟಿ ವೇದಿಕಾ

ಶಿವಲಿಂಗ ಸಿನಿಮಾ ನಂತರ ಕನ್ನಡದಿಂದ ಹಲವು ಆಫರ್ ಗಳು ಬಂದವು, ಆದರೆ ಯಾವುದೇ ಹೊಸ ಪ್ರಾಜೆಕ್ಟ್ ಬಗ್ಗೆ ನನಗೆ ನಂಬಿಕೆ ಬಂದರೆ ಮಾತ್ರ ನಾನು ಅದಕ್ಕೆ ...

ಬೆಂಗಳೂರು: ಶಿವಲಿಂಗ ಸಿನಿಮಾ ನಂತರ ಕನ್ನಡದಿಂದ ಹಲವು ಆಫರ್ ಗಳು ಬಂದವು, ಆದರೆ ಯಾವುದೇ ಹೊಸ ಪ್ರಾಜೆಕ್ಟ್ ಬಗ್ಗೆ ನನಗೆ ನಂಬಿಕೆ ಬಂದರೆ ಮಾತ್ರ ನಾನು ಅದಕ್ಕೆ ಸಹಿ ಮಾಡುವುದು ಎಂದು ನಟಿ ವೇದಿಕಾ ಹೇಳಿದ್ದಾರೆ. 
ತಮ್ಮದೇ ಆದ ನಿಯಮಗಳಿಗೆ ಸ್ಟಿಕ್ ಆಗಿರುವ ವೇದಿಕಾ, ತನ್ನ ಪ್ರತಿಭೆಯನ್ನು ಗುರುತಿಸಿ, ತಮ್ಮ ಚಿತ್ರಗಳಿಗೆ ನನ್ನನ್ನು ಚಿತ್ರ ನಿರ್ಮಾಪಕರು ಆಯ್ಕೆ ಮಾಡಿರುವುದು ನನ್ನ ಅದೃಷ್ಟ ಎಂದು ಹೇಳಿದ್ದಾರೆ.
ಸದ್ಯ ವೇದಿಕಾ ಪ್ರಕಾಶ್ ರಾಜ್ ನಟಿಸಿರುವ ಗೌಡ್ರು ಹೊಟೇಲ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ನಟ ಉಪೇಂದ್ರ ಜೊತೆಗೆ ಹೋಂ ಮಿನಿಸ್ಟರ್ ಸಿನಿಮಾದಲ್ಲೂ ವೇದಿಕಾ ನಟಿಸುತ್ತಿದ್ದಾರೆ. ಪೂರ್ಣ ನಾಯ್ಡು ನಿರ್ಮಾಣದ ಸಿನಿಮಾವನ್ನು ಸುಜಯ್.ಕೆ ಶ್ರೀಹರಿ ನಿರ್ದೇಶಿಸುತ್ತಿದ್ದಾರೆ.
ಮಂಗಳವಾರ ಸಿನಿಮಾ ಸೆಟ್ ಗೆ ಆಗಮಿಸಿದ್ದ ವೇದಿಕಾ ಸಿಟಿ ಎಕ್ಸ್ ಪ್ರೆಸ್ ಜೊತೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಹೋಂ ಮಿನಿಸ್ಟರ್ ಸಿನಿಮಾ ಕಥೆಯ ಬಗ್ಗೆ ಹೆಚ್ಚು  ಮಾತನಾಡಲಿಲ್ಲ, ಒಮ್ಮೆ ನಾನು ಪಾತ್ರ ಆರಂಭಿಸಿದರೇ ನನಗೆ ಉತ್ತಮ ಐಡಿಯಾ ಹೊಂದುತ್ತೇನೆ ಎಂದು ಹೇಳಿದ್ದಾರೆ.
ನಾನು ಹೋಂ ಮಿನಿಸ್ಟರ್ ಪ್ರಾಜೆಕ್ಟ್ ಗೆ ಸಹಿ ಹಾಕಲು ಹಲವು ಕಾರಣಗಳಿವೆ, ಮೊದಲನೆಯದು ಉಪೇಂದ್ರ, ನಾನು ಉಪೇಂದ್ರ ಅವರ ಬಹು ದೊಡ್ಡ ಅಭಿಮಾನಿ, ಅವರ ಜೊತೆ ನಟಿಸಲು ಯಾವಾಗಲು ಬಯಸುತ್ತಿದ್ದೆ.  ಹೋಂ ಮಿನಿಸ್ಟರ್ ಮೂಲಕ ಆಸೆ ಈಡೇರುತ್ತಿದೆ. ಮೊದಲ ದಿನಜ ಸೆಟ್ ನಲ್ಲಿ ಅವರ ಮಾನವೀಯ ವ್ಯಕ್ತಿತ್ವಕ್ಕೆ ನಾನು ಸಾಕ್ಷಿಯಾಗಿದ್ದೇನೆ, ಅದು ಸೆಟ್ ನಲ್ಲಿ ಪಾಸಿಟಿವಿಟಿಗೆ ಕಾರಣವಾಯಿತು.
ಆ ಪಾತ್ರಕ್ಕೆ ನನ್ನ ನಟನಾ ಪ್ರತಿಭೆಯ ಅವಶ್ಯಕತೆಯಿತ್ತು. ಹೀಗಾಗಿ ಈ ಸಿನಿಮಾ ನನ್ನ ಗಮನ ಸೆಳೆಯಿತು. ಎಲ್ಲಾ ನಾಯಕಿಯರಿಗೆ ಇಷ್ಟು ಸುಲಭವಾಗಿ ಅವಕಾಶ ಸಿಗುವುದಿಲ್ಲ, ನನಗೆ ಸಿಕ್ಕಿದೆ, ನಾನು ಲಕ್ಕಿ ಎಂದು ಹೇಳಿದ್ದಾರೆ.
ಪ್ರಕಾಶ್ ರಾಜ್ ಜೊತೆಗೆ ನಟಿಸುತ್ತಿರುವುದಕ್ಕೆ ವೇದಿಕಾ ತೀವ್ರ ಉತ್ಸಾಹದಲ್ಲಿದ್ದಾರೆ. ಗೌಡ್ರು ಹೋಟೆಲ್ ನಲ್ಲಿ ಅನಂತ್ ನಾಗ್ ನಟಿಸಿದ್ದಾರೆ. ಈ ಸಿನಿಮಾಗೆ ಯುವನ್ ಶಂಕರ್ ರಾಜಾ ಸಂಗೀತ ನೀಡಿದ್ದಾರೆ. ಹೀಗಾಗಿ ಆ ಸಿನಿಮಾದಲ್ಲಿ ನಟಿಸಲು ಇದು ಒಂದು ಕಾರಣ ಎಂದು ವೇದಿಕಾ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

'sir' ವಿವಾದ ಕೊನೆಗೂ ಅಂತ್ಯ: 'ಸರ್.. ನೀವು ನನ್ನ ಹಿರಿಯರು': ಕಿಚ್ಚಾ ಸುದೀಪ್ ಗೆ ಧನ್ಯವಾದ ಹೇಳಿದ ನಟ ಯಶ್!

SCROLL FOR NEXT