ಸೂರ್ಯನ್ ಮತ್ತು ಚಂದ್ರಶೇಖರ್ ಬಂಡಿಯಪ್ಪ 
ಸಿನಿಮಾ ಸುದ್ದಿ

ಕಂಟ್ರಿ ಪಿಸ್ತೂಲ್ ಗೆ ಸಿಕ್ಕ ಹೊಸ ನಾಯಕ ಸೂರ್ಯನ್

ಕಂಟ್ರಿ ಪಿಸ್ತೂಲ್ ಸಿನಿಮಾ ಬಗ್ಗೆ ಈ ಮೊದಲು ಹಲವು ಸುದ್ದಿಗಳು ಕೇಳಿ ಬಂದಿದ್ದವು. ಸೂರಿ ನಿರ್ದೇಶನದ ಈ ಸಿನಿಮಾದಲ್ಲಿ ಪುನೀತ್ ನಾಯಕನಾಗಿ ...

ಬೆಂಗಳೂರು: ಕಂಟ್ರಿ ಪಿಸ್ತೂಲ್ ಸಿನಿಮಾ ಬಗ್ಗೆ ಈ ಮೊದಲು ಹಲವು ಸುದ್ದಿಗಳು ಕೇಳಿ ಬಂದಿದ್ದವು. ಸೂರಿ ನಿರ್ದೇಶನದ ಈ ಸಿನಿಮಾದಲ್ಲಿ ಪುನೀತ್ ನಾಯಕನಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ನಂತರ ಯಶ್ ಹೀರೋ ಎಂಬ ಮಾತು ಕೇಳಿ ಬಂದಿತ್ತು. ಈಗ ಈ ಎಲ್ಲಾ ರೂಮರ್ಸ್ ಗಳಿಗೆ ತೆರೆ ಬಿದ್ದಿದ್ದು, ಸಿನಿಮಾಗೆ ಹೊಸ ನಾಯಕನ ಆಯ್ಕೆಯಾಗಿದೆ.
ನಟ ಅಜಯ್ ಕುಮಾರ್ ಪುತ್ರ ಸೂರ್ಯನ್ ಕಂಟ್ರಿ ಪಿಸ್ತೂಲ್ ಗೆ ಹೀರೋ ಆಗಿ ಆಯ್ಕೆಯಾಗಿದ್ದಾರೆ. ರಮೇಶ್ ಕಶ್ಯಪ್ ನಿರ್ಮಾಣದ ಸಿನಿಮಾವನ್ನು ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಿಸಲಿದ್ದಾರೆ,
ಕಳೆದ ಎರಡು ದಶಕಗಳಿಂದ ಅಜಯ್ ಕುಮಾರ್ ಕನ್ನಡ ಸಿನಿಮಾ ರಂಗದಲ್ಲಿದ್ದಾರೆ, ತವರಿಗೆ ಬಾ ತಂಗಿ,ಲಾಲಿ ಹಾಡು, ತವರಿನ ಸಿರಿ ಹಾಗೂ ಇತ್ತೀಚಿನ ಕ್ರೇಜಿ ಬಾಯ್ ಸಿನಿಮಾಗೆ ಸಂಭಾಷಣೆ ಬರೆದಿದ್ದಾರೆ.
6 ಅಡಿ 5 ಇಂಚು  ಎತ್ತರವಿರುವ ಅಜಯ್ ಕುಮಾರ್ ಪುತ್ರ ಸೂರ್ಯನ್ ಕಂಟ್ರಿ ಪಿಸ್ತೂಲ್ ಗೆ ನಾಯಕನಾಗಿದ್ದು, ಆಗಸ್ಟ್ ಕೊನೆಯಲ್ಲಿ ಸಿನಿಮಾ ಸೆಟ್ಟೇರಲಿದೆ. ಸದ್ಯಕ್ಕೆ ಚಂದ್ರಶೇಖರ್ ಬಂಡಿಯಪ್ಪ ತಾರಕಾಸುರ ಸಿನಿಮಾ ನಿರ್ದೇಶಿಸುತ್ತಿದ್ದು, ಕಂಟ್ರಿ ಪಿಸ್ತೂಲ್ ಗೆ ಸಂಭಾಷಣೆ ಸಿದ್ಧ ಪಡಿಸುತ್ತಿದ್ದಾರೆ.
ನಾನು ವೈಭವ್ ಜೊತೆ ಕಂಟ್ರಿ ಪಿಸ್ತೂಲ್ ಸಿನಿಮಾ ಮಾಡಬೇಕೆಂದುಕೊಂಡಿದ್ದೆ. ಆದರೇ ರಮೇಶ್ ಕಶ್ಯಪ್ ಈಗಾಗಲೇ ಆ ಟೈಟಲ್ ಅನ್ನು ನೋಂದಾಯಸಿದ್ದಾರೆಂದು ಫಿಲಂ ಚೇಂಬರ್ ನಿಂದ ತಿಳಿಯಿತು. ಆದರೆ ಕಳೆದ ಯುಗಾದಿ ಹಬ್ಬದ ಸಮಯದಲ್ಲಿ ಅಜಯ್ ಕುಮಾರ್ ನನಗೆ ಕರೆ ಮಾಡಿನಿಮಗೆ ಆಸಕ್ತಿಯಿದ್ದರೇ ನನ್ನ ಮಗ ಸಿನಿಮಾದಲ್ಲಿ ನಟಿಸಲಿದ್ದಾನೆ ಎಂದು ಕೇಳಿದರು. ನಂತರ ಇಬ್ಬರು ಮಾತುಕತೆ ನಡೆಸಿ ಪ್ರಾಜೆಕ್ಟ್ ಗಾಗಿ ಸಿದ್ಧತೆ ನಡೆಸುತ್ತಿದ್ದೇವೆ ಎಂದು ಚಂದ್ರಶೇಖರ್ ಹೇಳಿದ್ದಾರೆ.
ಮುಂದಿನ 10 ದಿನಗಳಲ್ಲಿ  ಫೋಟೋ ಶೂಟ್ ನಡೆಯಲಿದೆ. ಸೂರ್ಯನ್ ಗೆ ಉತ್ತಮ ನಾಯಕನಾಗುವ ಎಲ್ಲಾ ಗುಣಲಕ್ಷಣಗಳಿವೆ, ಸಿನಿಮಾ ಇಂಡಸ್ಟ್ರಿಗೆ ಆತನನ್ನು ಪರಿಚಯಿಸಲು ನನಗೆ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!