ರಾಣಾ ದಗ್ಗುಬಾಟಿ 
ಸಿನಿಮಾ ಸುದ್ದಿ

ನಾನು ಶೀಘ್ರವೇ ಕನ್ನಡ ಸಿನಿಮಾದಲ್ಲಿ ನಟಿಸುತ್ತೇನೆ: ರಾಣಾ ದಗ್ಗುಬಾಟಿ

ಬಲ್ಲಾಳದೇವನ ಪಾತ್ರ ನಿರ್ವಹಿಸಿದ್ದ ರಾಣಾ ದಗ್ಗುಬಾಟಿ ಅಭಿನಯದ ನೀನೆ ರಾಜಾ ನೀನೆ ಮಂತ್ರಿ ಈ ವಾರ ರಿಲೀಸ್ ಆಗಲಿದೆ. ಇತ್ತೀಚೆಗೆ ಬೆಂಗಳೂರಿಗೆ...

ಬೆಂಗಳೂರು:  ಬಾಹುಬಲಿಯ ಬಲ್ಲಾಳದೇವನ ಪಾತ್ರ ಇನ್ನೂ ಜನಮಾನಸದಲ್ಲಿ ಹಾಗೆಯೇ ಉಳಿದಿದೆ. ಕರ್ನಾಟಕದಲ್ಲಿ 52 ಥಿಯೇಟರ್ ಗಳಲ್ಲಿ ಬಾಹುಬಲಿ ರಿಲೀಸ್ ಆಗಿತ್ತು.
ಬಲ್ಲಾಳದೇವನ ಪಾತ್ರ ನಿರ್ವಹಿಸಿದ್ದ ರಾಣಾ ದಗ್ಗುಬಾಟಿ ಅಭಿನಯದ ನೀನೆ ರಾಜಾ ನೀನೆ ಮಂತ್ರಿ ಈ ವಾರ ರಿಲೀಸ್ ಆಗಲಿದೆ. ಇತ್ತೀಚೆಗೆ  ಬೆಂಗಳೂರಿಗೆ ಆಗಮಿಸಿದ್ದ ರಾಣಾ. ಬಿಳಿ ಧೋತಿ ಧರಿಸಿದ್ದರು. ಇತ್ತೀಚೆಗೆ ಧೋತಿಯೇ ನನ್ನ ಹೊಸ ಸ್ಟೈಲ್ ಆಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು ನನಗೆ ಅಪರಿಚಿತ ನಗರವಲ್ಲ, ಹಲವು ಸಂಸ್ಕತಿಗಳ ತವರು. ಕಳೆದ 30 ವರ್ಷಗಳಲ್ಲಿ ತುಂಬಾ ಬೆಳೆದಿದೆ. ಬೇರೆ ನಗರಗಳಲ್ಲಿ ನಿಮಗೆ ಇಂಥ ಖುಷಿ ಸಿಗುವುದಿಲ್ಲ ಎಂದು ಹೇಳಿದ್ದಾರೆ. ಬೆಂಗಳೂರು ಬ್ಯೂಟಿಫ‌ುಲ್‌ ಸಿಟಿ. ನನ್ನ ಈ ಹಿಂದಿನ ಪ್ರತಿ ಸಿನಿಮಾಕ್ಕೂ ಇಲ್ಲಿ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಮುಂದೆಯೂ ಅದೇ ಪ್ರೀತಿ ಇಲ್ಲಿನ ಜನರಿಂದ ಸಿಗುತ್ತದೆಂದು ನಂಬಿದ್ದೇನೆ.  
ಕನ್ನಡದಲ್ಲಿ ನೀವು ನಟಿಸುತ್ತೀರಿ ಎಂಬ ಬಗ್ಗೆ ಸುದ್ದಿ ಕೇಳಿಬರುತ್ತಿವೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ರಾಣಾ ಎಎಂಆರ್ ರಮೇಶ್ ಅವರ ಆಸ್ಫೋಟ ಸಿನಿಮಾದಲ್ಲಿ ನಟಿಸುತ್ತಿದ್ದು, ಮಾತುಕತೆ ಹಂತದಲ್ಲಿದೆ ಎಂದು ತಿಳಿಸಿದ್ದಾರೆ. ರಾಜೀವ್ ಗಾಂಧಿ ಹತ್ಯೆಯ ಬಗ್ಗೆ ಕಥೆಯಿರುವ ಆಸ್ಫೋಟ ಆಸಕ್ತಿಯಿಂದ ಕೂಡಿದೆ ಎಂದು ಹೇಳಿದ್ದಾರೆ. ರಮೇಶ್  ಡಾಕ್ಯುಮೆಂಟರಿಗಳನ್ನು ಉತ್ತಮವಾಗಿ ಮಾಡುತ್ತಾರೆ ಎಂದು ರಾಣಾ ಹೊಗಳಿದ್ದಾರೆ.
ಮೊದಲ ಬಾರಿಗೆ ತಮ್ಮ ತಂದೆ ದಗ್ಗುಬಾಟಿ ಸುರೇಶ್ ಬಾಬು ನಿರ್ಮಾಣದ ನೇನೆ ರಾಜ ಮತ್ತು ನೇನೇಮಂತ್ರಿ ಸಿನಿಮಾದಲ್ಲಿ ನಟಿಸಿರುವ ರಾಣಾ ಈ ಮೊದಲು 12 ಸಿನಿಮಾಗಳಲ್ಲಿ ನಟಿಸಿದ್ದಾರೆ, ತಮ್ಮ ತಂದೆಯ ಸಿನಿಮಾಗಳಲ್ಲಿ ನಟಿಸಬಾರದೆಂದೇನಿರಲಿಲ್ಲ. ಸಾಕಷ್ಟು ಬಾರಿ ಚರ್ಚೆಯಾಗುತ್ತಿತ್ತು. ಆದರೆ ಅವರಿಗೆ ಇಷ್ಟವಾದರೆ ನನಗೆ ಇಷ್ಟವಾಗುತ್ತಿರಲಿಲ್ಲ. ನನಗೆ ಇಷ್ಟವಾದರೆ ಅವರಿಗೆ ಇಷ್ಟವಾಗುತ್ತಿರಲಿಲ್ಲ. ಹೀಗಾಗಿ ಸಿನಿಮಾ ಮಾಡಲಾಗಲಿಲ್ಲ. ಆದರೆ, ಈ ಸಿನಿಮಾದ ಕಥೆ ಇಬ್ಬರಿಗೂ ಇಷ್ಟವಾಯಿತು. ಯಾವುದೇ ಸಿನಿಮಾವಾದರೂ ಜನರಿಗೆ ಮನರಂಜನೆ ನೀಡಬೇಕು. ನಾನು ಇಲ್ಲಿವರೆಗೆ ಮಾಡಿರುವ ಸಿನಿಮಾಗಳಲ್ಲಿ ಸಾಕಷ್ಟು ಕಥೆಗಳು ವಿಭಿನ್ನವಾಗಿವೆ. ಅವೆಲ್ಲವನ್ನು ಎಂಟರ್‌ಟೈನಿಂಗ್‌ ಆಗಿ ಮಾಡಿದ್ದೇವೆ ಅಷ್ಟೇ. ಸಿನಿಮಾದ ಮುಖ್ಯ ಉದ್ದೇಶ ಮನರಂಜನೆ. ಅದು ಸಿಗಬೇಕು ಎಂದು ಹೇಳಿದ್ದಾರೆ.
ರಾಜಕೀಯದ ಹಿನ್ನೆಲೆ ಪಾತ್ರ ಮಾಡಿದರೆ ಬೇಗನೇ ಗುರುತಿಸುತ್ತಾರೆ. ಯಾವುದೇ ಉದ್ದೇಶದಿಂದ ಸಿನಿಮಾ ಒಪ್ಪಿಕೊಳ್ಳೋದಿಲ್ಲ. ಪಾತ್ರ ಇಷ್ಟವಾದರೆ ಮಾಡುತ್ತೇನೆ.  ಈ ಸಿನಿಮಾದಲ್ಲಿ ರಾಜಕೀಯ ಎರಡನೇ ಭಾಗದಲ್ಲಿ ಬರುತ್ತದೆ.  ಜೀವನ ಮತ್ತು ಆತ್ಮ ಹಾಗೂ ಗಂಡ ಮತ್ತು ಹೆಂಡತಿ ನಡುವಿನ ಸಂಬಂಧದ ಕಥೆ ಇದಾಗಿದೆ.  ಒಬ್ಬ ಒಳ್ಳೆಯ ವ್ಯಕ್ತಿಯನ್ನು ಕೆಟ್ಟ ಲೋಕಕ್ಕೆ ತಳ್ಳಿದರೇ, ಅವನ ಮತ್ತೊಂದು ಲೋಕದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾನೆ, ಇದೇ ಸಿನಿಮಾದ ಕಧೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್

ಶಕ್ತಿ, ಜ್ಞಾನ, ಸಂಸ್ಕೃತಿ, ಸಮಾನತೆಯ ಸಂಗಮ ಮೈಸೂರು ದಸರಾ: ಸಿಎಂ ಡಿಕೆ ಶಿವಕುಮಾರ್