ಕಿಚ್ಚ ಸುದೀಪ್, ಶಿವರಾಜ್ ಕುಮಾರ್
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರವನ್ನು ಕಿಚ್ಚ ಸುದೀಪ್ ಹೊಗಳಿದ್ದಾರೆ.
ಮಾಸ್ ಲೀಡರ್ ಚಿತ್ರ ಇದೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಕುಟುಂಬದವರಿಗಾಗಿ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ಚಿತ್ರವನ್ನು ವೀಕ್ಷಿಸಿದ ಸುದೀಪ್ ಫುಲ್ ಖುಷಿಯಾದರು.
ಮಾಸ್ ಲೀಡರ್ ಚಿತ್ರದಲ್ಲಿ ಶಿವಣ್ಣರ ಗೆಟಪ್ ನನಗೆ ತುಂಬಾ ಇಷ್ಟವಾಯಿತು. ಇದೊಂದು ಸಾಮಾಜಿಕ ಸಂದೇಶ ಕುರಿತಾದ ಸಿನಿಮಾ. ಇದು ಸಾಮಾಜಿಕ ಸಂದೇಶ ಎನ್ನುವುದಕ್ಕಿಂತ ಸಾಮಾಜಿಕ ಜವಾಬ್ದಾರಿ ಎನ್ನಬಹುದು. ಇದನ್ನು ತಲೆಯಲ್ಲಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ನಿರ್ಮಾಪಕರು ಮತ್ತು ನಿರ್ದೇಶಕರು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಸುದೀಪ್ ಹೊಗಳಿರುವುದಾಗಿ ಫಿಲ್ಮಿಬೀಟ್ ವರದಿ ಮಾಡಿದೆ.
ಮಾಸ್ ಲೀಡರ್ ಚಿತ್ರದ ವಿಶೇಷ ಪ್ರದರ್ಶನದಲ್ಲಿ ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಹಾಗೂ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು ಭಾಗಿಯಾಗಿದ್ದರು.