ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಹೊಸ ಪ್ರಯೋಗಗಳ ಮೂಲಕ ಸದಾ ಕ್ರಿಯಾಶೀಲರಾಗಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಕಿರಿಯ ಪುತ್ರ ವಿಕ್ರಮ್ ರವಿಚಂದ್ರನ್ ತಮ್ಮ ತಂದೆಯಿಂದ ಸ್ಪೂರ್ತಿ ಪಡೆದಿದ್ದಾರೆ. ಸಿನಿಮಾದ ಪ್ರತಿ ಹಂತದಲ್ಲೂ ತಮ್ಮತಂದೆಯ ದಾರಿಯನ್ನೇ ಅನುಸರಿಸುತ್ತಿದ್ದಾರೆ.
ನಾಗಶೇಖರ್ ನಿರ್ದೇಶನದ ಹೊಸ ಸಿನಿಮಾ ನವೆಂಬರ್ ನಲ್ಲಿ ನಾನು ಅವಳು ಚಿತ್ರದಲ್ಲಿ ವಿಕ್ರಮ್ ನಟಿಸುತ್ತಿದ್ದು, ಏಕ ಕಾಲದಲ್ಲಿ ನಾಲ್ಕು ಭಾಷೆಗಳಲ್ಲಿ ತಯಾರಾಗುತ್ತಿದೆ. ಆದರೆ ಸಿನಿಮಾಗಳ ಆಯ್ಕೆ ವಿಷಯದಲ್ಲಿ ವಿಕ್ರಮ್ ಕೊಂಚ ಭಿನ್ನ, ತನ್ನ ಅಣ್ಣನಂತೆ ಎಲ್ಲವನ್ನು ಕುರುಡಾಗಿ ಒಪ್ಪಿಕೊಳ್ಳುವುದಿಲ್ಲ, ಚಿತ್ರತಂಡ ವಿಕ್ರಮ್ ಹುಟ್ಟುಹಬ್ಬಕ್ಕೆ ಟೀಸರ್ ಬಿಡುಗಡೆ ಮಾಡಲಿದ್ದಾರೆ.
ತಮ್ಮ ವೃತ್ತಿ ಜೀವನದಲ್ಲಿ ಕಡಿಮೆ ಅವಕಾಶ ಆದರೆ ಹೆಚ್ಚಿನ ಜವಾಬ್ದಾರಿಯಿರುವುದನ್ನು ವಿಕ್ರಮ್ ಮನಗಂಡಿದ್ದಾರೆ, ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಇರಲು ಬಯಸಿದ್ದೇನೆ, ಇದು ನನ್ನ ಕಳೆದ 20 ವರ್ಷಗಳ ಕನಸಾಗಿದೆ, ನನ್ನ ಹೆಗಲ ಮೇಲೆ ದೊಡ್ಡ ಜವಾಬ್ದಾರಿಯನ್ನು ಹೊರುತ್ತಿದ್ದೇನೆ, ನನ್ನ ಬಗ್ಗೆ ಅಪಾರವಾದ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ನವೆಂಬರ್ ನಲ್ಲಿ ನಾನು ಅವಳು ಸಿನಿಮಾ ಚಿತ್ರತಂಡ ಉತ್ತಮವಾಗಿದೆ. ಒಳ್ಳೆಯ ತಂತ್ರಜ್ಞರಿದ್ದಾರೆ, ನನ್ನ ತಂದೆ ಜೊತೆ ಮೂರು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ, ಅದರಿಂದ ನನಗೆ 15 ಸಿನಿಮಾಗಳಲ್ಲಿ ಕೆಲಸ ಮಾಡಿದಷ್ಟು ಅನುಭವ ಸಿಕ್ಕಿದೆ ಎಂದು ವಿಕ್ರಮ್ ತಿಳಿಸಿದ್ದಾರೆ.
ನನ್ನ ಆತ್ಮ ವಿಶ್ವಾಸದ ಬಗ್ಗೆ ಜನ ಮಾತನಾಡುತ್ತಾರೆ ಎಂದರೇ ಅದು ನನ್ನ ತಂದೆಯಿಂದ ಬಂದದ್ದು, ಅವರು ನನ್ನನ್ನು ತಿದ್ದಿ ತೀಡಿದ್ದಾರೆ, ಕೇವಲ ಒಬ್ಬ ನಟನಾಗಿ ಅಲ್ಲ, ಆಲೋಚನೆಯುಳ್ಳ ನಟನಾಗಿ ಮಾಡಿದ್ದಾರೆ.
ಒಬ್ಬ ನಟನಾಗಿ ನಾನು 6 ರಿಂದ 60 ವರ್ಷದ ಎಲ್ಲಾ ವಯೋಮಾನವರಿಗೂ ಮನರಂಜನೆ ನೀಡುವುದು ನನ್ನ ಆಕಾಂಕ್ಷೆಯಾಗಿದೆ, ನಿರ್ದೇಶನದ ಮೇಲೂ ಕಣ್ಣಿಟ್ಟಿರುವ ವಿಕ್ರಮ್ ಇದೇ ಚಿಂತನೆಯನ್ನು ಸಿನಿಮಾ ನಿರ್ದೇಶನದಲ್ಲೂ ಅಳವಡಿಸಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಸಿನಿಮಾ ಇಂಡಸ್ಟ್ರಿಯಿಂದ ಏನೆಲ್ಲಾ ಕಲಿಯಲು ಸಾಧ್ಯವೋ ಅದೆಲ್ಲಾವನ್ನು ಕಲಿಯುತ್ತೇನೆ, ಅದನ್ನು ನನ್ನ ನಿರ್ದೇಶನದಲ್ಲಿ ಅಳವಡಿಸಿಕೊಳ್ಳುತ್ತೇನೆ, ನನ್ನ ತಂದೆಯಂತೆ ಎಂದು ವಿಕ್ರಮ್ ಹೇಳಿದ್ದಾರೆ.
ನನ್ನ ತಂದೆ ಮತ್ತು ನನ್ನ ಅಣ್ಣನಿಂದ ನಾನು ಪ್ರೇರಿತನಾಗಿದ್ದೇನೆ, ನನ್ನ ತಂದೆ ನನಗೆ ಎವರ್ ಗ್ರೀನ್ ಸ್ಟಾರ್, ನಾನು ಅವರಂತೆ ಎಂದು ಜನ ಹೇಳಿದಾಗ ನನಗೆ ನನ್ನ ಬಗ್ಗೆ ಹೆಮ್ಮೆ ಎನಿಸುತ್ತದೆ. ಆದರೆ ಹೆಚ್ಚಿನ ಜನ ನನ್ನ ಅಣ್ಣ ನನ್ನ ತಂದೆಯಂತೆ ಹೆಚ್ಚು ಹೋಲುತ್ತಾನೆ ಎಂದು ಭಾವಿಸುತ್ತಾರೆ, ಆದರೆ ನನ್ನ ತಂದೆಯ ಕಣ್ಣುಗಳಂತೆ ನನ್ನ ಕಣ್ಣುಗಳಿವೆ. ಹೆಚ್ಚು ಒರಟುತನ ಹಾಗೂ ಕಮರ್ಷಿಯಲ್ ಲುಕ್ ನನಗಿದೆ, ಹೀಗಾಗಿ ರೋಮ್ಯಾಂಟಿಕ್ ಕಥೆಗಳಲ್ಲಿ ನಾನು ನಟಿಸಬೇಕು. ಇದೆಲ್ಲಾವನ್ನು ಹೊರತು ಪಡಿಸಿದರೇ ಜನ ನನ್ನಿಂದ ಉತ್ತಮ ಅಭಿನಯ ಬಯಸುತ್ತಾರೆ, ಇದು ದೊಡ್ಡ ಸವಾಲಾಗಿದೆ ಎಂದು ವಿಕ್ರಮ್ ಅಭಿಪ್ರಾಯ ಪಟ್ಟಿದ್ದಾರೆ.
ಫೋಟೋಜೆನಿಕ್ ಫೇಸ್ ಮತ್ತು ನನ್ನ ಕೂದಲು ನನ್ನ ಪ್ಲಸ್ ಪಾಯಿಂಟ್ ಆಗಿದೆ. ಜೊತೆಗೆ ನನ್ನ ವಯಸ್ಸಿಗಿಂತಲೂ ನಾನು ದೊಡ್ಡವನಂತೆ ಕಾಣುತ್ತೇನೆ. ಇದು ಕೂಡ ನನಗೆ ಸಹಾಯ ವಾಗಿದೆ. ನಾನು ನಟನೆ, ನೃತ್ಯ, ಸ್ಟಂಟ್ಸ್ ಎಲ್ಲಾವನ್ನು ಕಲಿತಿದ್ದೇನೆ, ನಾನು ಸದ್ಯ ಸಿನಿಮಾಗೆ ಏನು ಅಗತ್ಯವಿದೆ ಎಂಬುದನ್ನು ಕಲಿಯುತ್ತಿದ್ದೇನೆ, ಪ್ರತಿಯೊಂದಕ್ಕೂ ಮಹತ್ವವಿದೆ ಎಂದು ಹೇಳಿದ್ದಾರೆ.
ರವಿಚಂದ್ರನ್ ಉತ್ತಮ ಕನ್ನಡ ಸೇರಿದಂತೆ ಬೇರೆ ಭಾಷೆಗಳ ನಾಯಕಿಯರ ಜೊತೆ ನಟಿಸಿದ್ದಾರೆ. ಕಥೆಗೆ ಅನುಗುಣವಾದಂತ ನಾಯಕಿಯನ್ನು ನಾನು ಆರಿಸುತ್ತೇನೆ ಎಂದು ಹೇಳಿದ್ದಾರೆ. ಇಂತಹ ನಾಯಕಿಯೇ ನನ್ನ ಜೊತೆ ನಟಿಸಬೇಕು ಎಂದು ನಾನು ಈಗ ನಿರ್ಧರಿಸಿಲ್ಲ, ನನ್ನ ಜೊತೆ ಕೆಲಸ ಮಾಡಲು ಬಯಸುವಂತ ಗೌರವ ನಾನು ಸಂಪಾದಿಸಬೇಕು. ನನ್ನ ಜೊತೆ ಅಭಿನಯ ಬಹಳ ಸುಲಭ ಎನ್ನುವ ಭಾವನೆ ನಾಯಕಿಯರಿಗೆ ಬರಬೇಕು ಎಂದು ವಿಕ್ರಮ್ ತಿಳಿಸಿದ್ದಾರೆ.