ಚೆನ್ನೈ: ಭ್ರಷ್ಟಾಚಾರದಿಂದ ಮುಕ್ತವಾಗದೆ ಭಾರತೀಯರು ನಿಜವಾದ ಸ್ವಾತಂತ್ರ್ಯವನ್ನು ಹೊಂದಲು ಸಾಧ್ಯವಿಲ್ಲ ಎಂದು ಖ್ಯಾತ ನಟ ಕಮಲ್ ಹಾಸನ್ ಅಭಿಪ್ರಾಯಪಟ್ಟಿದ್ದಾರೆ.
ಭ್ರಷ್ಟಾಚಾರದಿಂದ ಸ್ವಾತಂತ್ರ್ಯ ಸಿಗದೆ ನಾವಿನ್ನೂ ಗುಲಾಮರಾಗಿದ್ದೇವೆ. ಒಂದು ಹೊಸ ಸ್ವಾತಂತ್ರ್ಯ ಚಳವಳಿಗೆ ಧೈರ್ಯ ಮತ್ತು ಪ್ರತಿಜ್ಞೆ ಮಾಡುವವರು ಬಂದರೆ ನಾವು ಗೆಲ್ಲುತ್ತೇವೆ ಎಂದು ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಅವರು, ಉತ್ತಮ ತಮಿಳು ನಾಡು ರಾಜ್ಯ ನನ್ನ ಧ್ಯೇಯವಾಗಿದೆ. ನನ್ನ ಧ್ವನಿಗೆ ಧ್ಯೈರ್ಯ ತುಂಬುವವರು ಯಾರಿದ್ದಾರೆ? ಡಿಎಂಕೆ, ಎಐಎಡಿಎಂಕೆ ಮತ್ತು ಇತರ ರಾಜಕೀಯ ಪಕ್ಷಗಳು ನನಗೆ ಸಹಾಯ ಮಾಡುವ ಯಂತ್ರಗಳಾಗಿವೆ. ಆ ಉಪಕರಣಗಳು ಮೊಂಡಾಗಿದ್ದರೆ ಬೇರೆ ಹುಡುಕಬೇಕು ಎಂದರು.
ಭ್ರಷ್ಟಾಚಾರ ಮತ್ತು ಹಲವು ದುರ್ಘಟನೆಗಳ ನಂತರವೂ ಜನರು ತಮಿಳು ನಾಡಿನಲ್ಲಿ ಮುಖ್ಯಮಂತ್ರಿ ರಾಜಿನಾಮೆಯನ್ನು ಏಕೆ ಕೇಳಲಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಅವರು ಟ್ವೀಟ್ ನಲ್ಲಿ ಯಾರನ್ನೂ ನೇರವಾಗಿ ಹೆಸರಿಸದೆ, ಒಂದು ರಾಜ್ಯದ ಮುಖ್ಯಮಂತ್ರಿ ಅವಘಡ ಮತ್ತು ಭ್ರಷ್ಟಾಚಾರಕ್ಕೆ ರಾಜಿನಾಮೆ ನೀಡಬೇಕೆಂದು ಜನರು ಒತ್ತಾಯಿಸಿದರೆ, ತಮಿಳು ನಾಡಿನಲ್ಲೇಕೆ ಯಾವುದೇ ರಾಜಕೀಯ ಪಕ್ಷಗಳು ಮುಖ್ಯಮಂತ್ರಿಯವರ ರಾಜಿನಾಮೆ ಕೇಳುತ್ತಿಲ್ಲ. ಇಲ್ಲಿ ಸಾಕಷ್ಟು ಅಪರಾಧಗಳು ನಡೆದಿವೆ ಎಂದು ಹೇಳಿದ್ದಾರೆ.